RNI NO. KARKAN/2006/27779|Monday, November 25, 2024
You are here: Home » breaking news » ಗೋಕಾಕ:ಶಾಸಕ ಸತೀಶ ಆತ್ಮಾವಲೋಕನ ಸಭೆ ನಡೆಸುವ ಬದಲು ಸೆಡಿನ ಸಭೆ ನಡೆಸಿದ್ದಾರೆ : ಜಿಜೆಪಿ ಅಧ್ಯಕ್ಷ ಶಶಿಧರ ಆರೋಪ

ಗೋಕಾಕ:ಶಾಸಕ ಸತೀಶ ಆತ್ಮಾವಲೋಕನ ಸಭೆ ನಡೆಸುವ ಬದಲು ಸೆಡಿನ ಸಭೆ ನಡೆಸಿದ್ದಾರೆ : ಜಿಜೆಪಿ ಅಧ್ಯಕ್ಷ ಶಶಿಧರ ಆರೋಪ 

ಶಾಸಕ ಸತೀಶ ಆತ್ಮಾವಲೋಕನ ಸಭೆ ನಡೆಸುವ ಬದಲು ಸೆಡಿನ ಸಭೆ ನಡೆಸಿದ್ದಾರೆ : ಜಿಜೆಪಿ ಅಧ್ಯಕ್ಷ ಶಶಿಧರ ಆರೋಪ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 16 :

 

 

ಬುದ್ಧ ಬಸವ ಅಂಬೇಡ್ಕರ್ ಬಗ್ಗೆ ಮಾತನಾಡುವ ಶಾಸಕ ಸತೀಶ ಜಾರಕಿಹೊಳಿ ಅವರು ಗೋಕಾಕ ನಗರದಲ್ಲಿ ಬಸವೇಶ್ವರ ಪುಥಳಿ ಸ್ಥಾಪಿಸವಾಗ ವಿರೋಧ ಮಾಡಿದರು ಈಗ ಧ್ವಂದ್ವ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಹೇಳಿದರು

ಸೋಮವಾರದಂದು ನಗರದ ಶಾಸಕರ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಆತ್ಮವಲೋಕನ ಸಭೆ ನಡೆಸುವ ಬದಲು ಸೆಡಿನಸಭೆ ಮಾಡಿರುವ ಸತೀಶ ಜಾರಕಿಹೊಳಿ ಅವರು ಬುದ್ಧ, ಬಸವ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಬಳಸಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ. ರಮೇಶ ಜಾರಕಿಹೊಳಿ ಅವರು ಸಾಲ ತೀರಿಸಲು ಬಿಜೆಪಿಗೆ ಬಂದಿದ್ದಾರೆ ಎಂದು ಹೇಳುವ ಸತೀಶ ಜಾರಕಿಹೊಳಿ ಅವರಿಗೆ ಕಿವಿ ಮಾತು ಹೇಳಿದ ದೇಮಶೆಟ್ಟಿ ಅವರು ಹೀಗೆ ಜನರಿಗೆ ತಪ್ಪು ತಿಳುವಳಿಕೆ ಕೊಡುವದು ಸರಿಯಲ್ಲ ಗೋಕಾಕ ಜನರಿಗೆ ಗೊತ್ತಿದೆ ಭ್ರಷ್ಟಾಚಾರ ಯಾರು ಮಾಡಿದ್ದಾರೆ ಎಂದು ಟಾಂಗ್ ನೀಡಿದರು .
ಮತ ಹಾಕಿದವರು ನಮ್ಮವರು, ಮತ ಹಾಕಲಿಲ್ಲದಿದ್ದವರು ವೈರಿಗಳು ಎಂದು ತಾರತಮ್ಯ ಮಾಡುವದು ಸರಿಯಲ್ಲ ರಮೇಶ ಜಾರಕಿಹೊಳಿ ಅವರನ್ನು ನಾನೇ ಆರಿಸಿ ತರುತ್ತಿದ್ದೆ ಎಂದು ಹೇಳುವ ಲಖನ ಈಗ ಯಡಿಯೂರಪ್ಪ ಮುಂದೆ ಶೂನ್ಯವಾಗಿದ್ದಾರಲ್ಲದೆ ಅವರ ಪರವಾಗಿ ಪ್ರಚಾರಕ್ಕೆ ಬಂದ ಕಾಂಗ್ರೆಸ್ ನಾಯಕರೆಲ್ಲರೂ ಸಹ ಶೂನ್ಯರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ರಮೇಶ ಜಾರಕಿಹೊಳಿ ಅವರು ಬಿಜೆಪಿಗೆ ಬಂದಿದ್ದಾರೆ ಹೊರೆತು ಬೇರೆ ಕಾರಣದಿಂದಲ್ಲ ಎಂದು ಸ್ವಷ್ಟ ಪಡಿಸಿದ ಅವರು ಕಾಂಗ್ರೆಸ್ ಪಕ್ಷದವರೆ ಹೆಂಡ ಹಣವನ್ನು ಹಂಚಿದ್ದಾರೆ ತಮ್ಮ ಮತಕ್ಷೇತ್ರ ಯಮಕನಮರಡಿಯಲ್ಲಿ ಲಖನ್ ಜಾರಕಿಹೊಳಿ ಅವರು ಮುಳ್ಳಾಗುತ್ತಾರೆ ಎಂದು ಸತೀಶ ಜಾರಕಿಹೊಳಿ ಅವರು ಲಖನ್ ಜಾರಕಿಹೊಳಿ ಅವರನ್ನು ಗೋಕಾಕ ಮತಕ್ಷೆತ್ರದಿಂದ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೋಡಿಸಿದ್ದಾರೆ . ಬಹು ಸಂಖ್ಯಾತರ ಬಗ್ಗೆ ಮಾತನಾಡುವ ಸತೀಶ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಹೊರೆತು ಪಡೆಸಿ ಬೇರೆಯವರಿಗೆ ಕಾಂಗ್ರೆಸ್ ಟಿಕೆಟ್ ಕೋಡಿಸ ಬಹುದಾಗಿತ್ತು ಆ ಕಾರ್ಯ ಅವರು ಮಾಡಿಲ್ಲ ಅಲ್ಪ ಮತಗಳ ಅಂತರದಿಂದ ಚುನಾವಣೆ ಗೆದ್ದ ಅವರು ಮೊದಲು ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೋಳ್ಳಲು ಪ್ರಯತ್ನ ಮಾಡಿಲಿ ಅದನ್ನು ಬಿಟ್ಟು ಗೋಕಾಕ ಮತಕ್ಷೇತ್ರದ ಜನರ ದಿಕ್ಕು ತಪ್ಪಿಸುವದು ಸರಿಯಲ್ಲ ಎಂದು ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ತಮ್ಮ ಪರವಾಗಿ 58 ಸಾವಿರ ಮತಗಳು ಇವೆ ಎಂದು ಹೇಳುವ ಸಹೋದರರಿಗೆ ಮುಂದಿನ ಚುನಾವಣೆಯಲ್ಲಿ ಸಾರಿ 18 ಸಾವಿರ ಮತ ಸಹ ಬರುವದು ಕಷ್ಟ ಎಂದ ಅವರು ಲಖನ್ ಜಾರಕಿಹೊಳಿ ಅವರನ್ನು ಉದ್ಯೋಗ ಪತಿ ಎಂದು ಬಿಂಬಿಸುತ್ತಿರುವ ಸತೀಶ ಅವರು ಲಖನ್ ಜಾರಕಿಹೊಳಿ ಯಾವ ಉದ್ಯೋಗ ಸ್ಥಾಪಿಸಿ ಎಷ್ಟು ಜನರಿಗೆ ಉದ್ಯೋಗ ಕೋಡಿಸಿದ್ದಾರೆ ಎಂಬುದನ್ನು ಸ್ವಷ್ಟ ಪಡಿಸಲಿ ಒಂದೆಒಂದು ಪಾನ ಶಾಫ್ ಸಹ ಹೊಂದದ ಲಖನ್ ಯಾವ ಉದ್ಯೋಗ ಪತಿ ಎಂದು ಪ್ರಶ್ನಿಸಿದ
ದೇಮಶೆಟ್ಟಿ ಒಬ್ಬ ಜವಾಬ್ದಾರಿ ಶಾಸಕರಾಗಿ ಈ ರೀತಿ ಮಾತನಾಡುವದು ಸರಿಯಲ್ಲ , ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹೊಡೆದಿದ್ದು ನಿಮ್ಮ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದರು

ಪತ್ರಕಾಗೋಷ್ಠಿಯಲ್ಲಿ ಭೀಮಗೌಡ ಪಾಟೀಲ , ಶಕೀಲ ಧಾರವಾಡಕರ, ಸುರೇಶ ಸನದಿ, ಲಕ್ಕಪ್ಪ ತಹಶೀಲ್ದಾರ್, ತವನಪ್ಪ ಬೆನ್ನಾಡಿ, ಹನುಮಂತ ದುರ್ಗನ್ಪವರ , ಚಿದಾನಂದ ದೇಮಶೆಟ್ಟಿ , ರಾಜು ಮರಲಿಂಗನವರ ಸೇರಿದಂತೆ ಇತರರು ಇದ್ದರು

Related posts: