RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಭಕ್ತಿಯಿಂದ ಮುಕ್ತಿ ದೊರೆಯಬೇಕಾದರೆ ಮನುಷ್ಯ ದೇವರನ್ನು ಭಕ್ತಿ, ಪ್ರೀತಿ, ನಂಬಿಕೆಯಿಂದ ಕಾಣಬೇಕು : ಶರಣ ಲಕ್ಷ್ಮಣ ಆಲೋಶಿ

ಗೋಕಾಕ:ಭಕ್ತಿಯಿಂದ ಮುಕ್ತಿ ದೊರೆಯಬೇಕಾದರೆ ಮನುಷ್ಯ ದೇವರನ್ನು ಭಕ್ತಿ, ಪ್ರೀತಿ, ನಂಬಿಕೆಯಿಂದ ಕಾಣಬೇಕು : ಶರಣ ಲಕ್ಷ್ಮಣ ಆಲೋಶಿ 

ಭಕ್ತಿಯಿಂದ ಮುಕ್ತಿ ದೊರೆಯಬೇಕಾದರೆ ಮನುಷ್ಯ ದೇವರನ್ನು ಭಕ್ತಿ, ಪ್ರೀತಿ, ನಂಬಿಕೆಯಿಂದ ಕಾಣಬೇಕು : ಶರಣ ಲಕ್ಷ್ಮಣ ಆಲೋಶಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 18 :

 

 

ಭಕ್ತಿಯಿಂದ ಮುಕ್ತಿ ದೊರೆಯಬೇಕಾದರೆ ಮನುಷ್ಯ ದೇವರನ್ನು ಭಕ್ತಿ, ಪ್ರೀತಿ, ನಂಬಿಕೆಯಿಂದ ಕಾಣಬೇಕು. ಆತನ ಜನ್ಮ ಪಾವನವಾಗುತ್ತದೆ ಎಂದು ಶರಣ ಲಕ್ಷ್ಮಣ ಆಲೋಶಿ ಹೇಳಿದರು.
ಅವರು ಮಂಗಳವಾರದಂದು ಸಂಜೆ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಹನುಮಾನ ದೇವರ ಸೇವಾ ಸಮಿತಿ ಹಾಗೂ ಹನುಮಾನ ದೇವರ ಕಾರ್ತೀಕೋತ್ಸವ ನಿಮಿತ್ಯ ಹಮ್ಮಿಕೊಂಡ ಹನುಮ ಮಾಲಾಧಾರಿಗಳಿಗೆ ಸತ್ಸಂಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಯುವಕರು ಸತ್ಸಂಗದಲ್ಲಿ ಪಾಲ್ಗೊಳ್ಳುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಹೊಂದುತ್ತಾರೆ. ದೇವರ ನಾಮಸ್ಮರಣೆ ಮಾಡುತ್ತಾ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸದೃಢ ಸಮಾಜದ ನಿರ್ಮಾಪಕರಾಗಬೇಕು. ಭಕ್ತಿಯೆಂಬ ಪ್ರಥ್ವಿಯ ಮೇಲೆ ಯುವ ಸಮುದಾಯ ದೈವ ಭಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗೋವಿಂದ ಪೂಜೇರಿ, ಮಹೇಶ ಕಾಳ್ಯಾಗೋಳ, ಮಂಜುನಾಥ ಯಲ್ಲಟ್ಟಿ, ಮಹೇಶ ದೇವಮಾನೆ, ಬಾಳೇಶ ಮಾಯಣ್ಣವರ, ಬಸವರಾಜ ಪೂಜೇರಿ, ನಾಗಪ್ಪ ವಾಸೇದಾರ,ನಾರಾಯಣ ಕದಂ, ವಿವೇಕ ಸಾಂಗಲಿ, ಶಿವಾನಂದ ಬೆಳಗಲಿ, ಪ್ರಕಾಶ ಕಡಕೋಳ, ಮಂಜುನಾಥ ಹುಡೇದ, ವಿಠ್ಠಲ ಕರೋಶಿ, ಸಿದ್ದು ಪಾಟೀಲ ಸೇರಿದಂತೆ ಇತರರು ನೂರಾರು ಹನುಮ ಮಾಲಾಧಾರಿಗಳು ಇದ್ದರು.

Related posts: