RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕರ್ತವ್ಯಕ್ಕೆ ಹಾಜರಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಬಿ.ಬಳಗಾರ

ಗೋಕಾಕ:ಕರ್ತವ್ಯಕ್ಕೆ ಹಾಜರಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಬಿ.ಬಳಗಾರ 

ಕರ್ತವ್ಯಕ್ಕೆ ಹಾಜರಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಬಿ.ಬಳಗಾರ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 19 :

ಗೋಕಾಕ ಉಪ ಚುನಾವಣೆ ಹಿನ್ನಲೆಯಲ್ಲಿ ಜಮಖಂಡಿ  ಸರಕಾರಿ ಶಿಕ್ಷಕರ ಶಿಕ್ಷಣ ಮಾಹಾವಿದ್ಯಾಲಯ   ಉಪನ್ಯಾಸಕರಾಗಿ ವರ್ಗಾವಣೆಯಾಗಿದ್ದ ಜಿ.ಬಿ.ಬಳಗಾರ ಅವರು ಗುರುವಾರದಂದು ಮರಳಿ ಮತ್ತೆ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದರು

ಗುರುವಾರ ಸಾಯಂಕಾಲ  ಕರ್ತವ್ಯಕ್ಕೆ ಹಾಜರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಜಿ.ಬಿ. ಬಳಗಾರ ಅವರಿಗೆ ವಲಯದ ಎಲ್ಲ ಶಿಕ್ಷಕ ಬಳಗದವರು ಸತ್ಕರಿಸಿ, ಹೂತೂರ್ಪಕವಾಗಿ ಸ್ವಾಗತಿಸಿದರು

ನಂತರ ತಕ್ಷಣ ಕಾರ್ಯಪ್ರವೃತ್ತವಾದ ಜಿ‌.ಬಿ‌.ಬಳಗಾರ ಅವರು ಗೋಕಾವಿ ನಾಡಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅನೇಕ ಕಾರ್ಯಕ್ರಮ ಹಮ್ಮೀಕೊಳ್ಳಲಾಗಿದ್ದು ,ಅವುಗಳಲ್ಲಿ ದಿನಕ್ಕೊಂದು ವಿಜ್ಞಾನ ಚಿತ್ರ, ವಿಜ್ಞಾನದಲ್ಲಿ ರಂಗೋಲಿ, ಕಂಠಪಾಠ ಪಾಕ್ಷೀಕ,ಮಗ್ಗಿಮಳೆ ಅಭೂತಪೂರ್ವ ಕಾರ್ಯಕ್ರಮಗಳ   ಜನಕ ..ಇಂತಹ ಕಾರ್ಯಕ್ರಮ ಮೂಲಕ ಮಕ್ಕಳ ಅಭಿವೃದ್ಧಿಗೆ ವಲಯದ ಶಿಕ್ಷಕರ ಸಹಕಾರದಿಂದ  ಮಕ್ಕಳ ಅಭಿವೃದ್ಧಿ ಕುರಿತು  ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹುಟ್ಟಿ ಹಾಕಿದ ಕಾರ್ಯಕ್ರಮ ಇಂದು ಒಂದಲ್ಲ ಒಂದು ರೀತಿ ಇಂದು ಬೇರೆ ಜಿಲ್ಲೆ ವಿಭಾಗದಲ್ಲಿ ಜನಪ್ರಿಯತೆ ಪಡೆದು ನಮ್ಮ ನಾಡಿನ ಕೀರ್ತಿಯನ್ನು ರಾಜ್ಯಕ್ಕೆ ಪರಿಚಯಿಸಿದು ನಮ್ಮ ಹೆಮ್ಮೆ. ಅವರ ಇನ್ನೊಂದು ಪ್ರಮುಖ ಕಾರ್ಯಕ್ರಮ ಗುರುಜೀ ಬಂದರೂ ಗುರುವಾರ ಕಾರ್ಯಕ್ರಮದ ಅನ್ವಯ ಎಸ್.ಎಸ್.ಎಲ್‌ಸಿ ವಿದ್ಯಾರ್ಥಿನಿಯಾದ ಕುಮಾರಿ ರೋಹಿಣಿ ವಾಲಿ ಅವರ ಮನೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿ ಕರ್ತವ್ಯ ಪ್ರಜ್ಞೆಯನ್ನು ಮೆರೆದರು …

ಈ ಸಂದರ್ಭದಲ್ಲಿ ಗೋಪಾಲ ಮಾಳಗಿ , ಬಿ.ಆರ್‌.ಮುರಗೋಡ , ಶ್ರೀಮತಿ ಎಸ್‌.ಎಸ್.ನೆಗಳಿ, ಅಶೋಕ ಚೌಗಲಾ , ಜಿ.ಆರ್‌.ಸನದಿ , ಬಿಆರಪಿಗಳು , ಸಿ.ಆರ್.ಪಿಗಳು ,ವಿವಿಧ ಶೈಕ್ಷಣಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು

Related posts: