RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿಯೊಂದಿಗೆ ದೇವರ ಅನುಗ್ರಹಕ್ಕೂ ನಾವು ಪಾತ್ರರಾಗುತ್ತೇವೆ : ಲಖನ್ ಜಾರಕಿಹೊಳಿ

ಗೋಕಾಕ:ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿಯೊಂದಿಗೆ ದೇವರ ಅನುಗ್ರಹಕ್ಕೂ ನಾವು ಪಾತ್ರರಾಗುತ್ತೇವೆ : ಲಖನ್ ಜಾರಕಿಹೊಳಿ 

ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿಯೊಂದಿಗೆ ದೇವರ ಅನುಗ್ರಹಕ್ಕೂ ನಾವು ಪಾತ್ರರಾಗುತ್ತೇವೆ : ಲಖನ್ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ,ವಾರ್ತೆ , ಗೋಕಾಕ ಡಿ 21 :

 

ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿಯೊಂದಿಗೆ ದೇವರ ಅನುಗ್ರಹಕ್ಕೂ ನಾವು ಪಾತ್ರರಾಗುತ್ತೇವೆ ಎಂದು ಮಯೂರ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ ಲಖನ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ಸಂಜೆ ಇಲ್ಲಿಯ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿಯ ಕಾರ್ತಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ದೇಶ ಆಧ್ಯಾತ್ಮಿಕ ದೇಶವಾಗಿದ್ದು, ಧಾರ್ಮಿಕ ಆಚರಣೆಯಿಂದಲೇ ಸುಖ-ಶಾಂತಿಯೊಂದಿಗೆ ಸಮೃದ್ಧವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಪರಸ್ಪರರಲ್ಲಿ ಪ್ರೀತಿ-ವಿಶ್ವಾಸ ಹೆಚ್ಚಾಗುವುದು. ನಾವೆಲ್ಲ ಸಂಘಟಿತರಾಗಿ ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ತಿಳಿಸಿದರು.
ಕಾರ್ತಿಕೋತ್ಸವದ ನಿಮಿತ್ಯ ಶ್ರೀ ಲಕ್ಷ್ಮೀದೇವಿಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಸುಮಂಗಲೆಯರೊಂದಿಗೆ ಆರತಿ ಹಾಗೂ ಕುಂಭಮೇಳದೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು. ಅಮ್ಮಾಜಿ ನೃತ್ಯ ಶಾಲೆಯ ಹಾಗೂ ಝೆನ್-ಪಾರ್ಕ್ ಬ್ರಡ್ರ್ಸ್ ಪ್ಲೇ ನರ್ಸರಿ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀದೇವಿ ಪಾದಗಟ್ಟಿ ಸೇವಾ ಸಮಿತಿಯ ಅಧ್ಯಕ್ಷ ದೊಡ್ಡಪ್ಪ ರಾವುತ, ಡಾ. ಸಿದ್ದಣ್ಣ ಕಮತ, ಡಾ. ಉದಯ ಆಜರಿ, ಆರ್.ಬಿ.ಬೋರಗಲ್, ಎಸ್.ಜಿ. ಗಾಡವಿ ಸೂರಜ ಪಾಟೀಲ, ಉಮೇಶ ಅರಳಿಕಟ್ಟಿ, ವಿ.ಜಿ.ಮಿರ್ಜಿ, ಮಹಾದೇವ ಕೌಜಲಗಿ, ಮಹಿಳಾ ಮಂಡಳದ ಜಯಾ ಕಮತ, ಸರಿತಾ ಹೂಲಿ, ಸವಿತಾ ಕಲಬುರ್ಗಿ, ರಾಜೇಶ್ವರಿ ಕಲಬುರ್ಗಿ, ಜಯಶ್ರೀ ಗೊಬ್ಬಣ್ಣವರ ಸೇರಿದಂತೆ ಅನೇಕರು ಇದ್ದರು.

Related posts: