ಘಟಪ್ರಭಾ:ಗುರುವಿನಲ್ಲಿ ಭಕ್ತಿಯಿಂದ, ಒಳ್ಳೇಯ ಮನಸ್ಸಿನಿಂದ,ಶೃದ್ಧೆಯಿಂದ ನಡೆದುಕೊಳ್ಳಬೇಕು : ಮಲ್ಲಿಕಾರ್ಜುನ ಮಹಾಸ್ವಾಮಿಜಿ
ಗುರುವಿನಲ್ಲಿ ಭಕ್ತಿಯಿಂದ, ಒಳ್ಳೇಯ ಮನಸ್ಸಿನಿಂದ,ಶೃದ್ಧೆಯಿಂದ ನಡೆದುಕೊಳ್ಳಬೇಕು : ಮಲ್ಲಿಕಾರ್ಜುನ ಮಹಾಸ್ವಾಮಿಜಿ
ನಮ್ಮ ಬೆಳಗಾವಿ ಇ – ,ವಾರ್ತೆ , ಘಟಪ್ರಭಾ ಡಿ 21 :
ಗುರುವಿನ ಕರುಣೆ ಮನುಷ್ಯನಿಗೆ ಆಗಬೇಕಾದರೆ ಗುರುವಿನಲ್ಲಿ ಭಕ್ತಿಯಿಂದ, ಒಳ್ಳೇಯ ಮನಸ್ಸಿನಿಂದ,ಶೃದ್ಧೆಯಿಂದ ನಡೆದುಕೊಳ್ಳಬೇಕೆಂದು ಘಟಪ್ರಭಾದ ಗುಬ್ಬಲಗುಡ್ಡದ ಶ್ರೀ ಕೆಂಪಯ್ಯಸ್ವಾಮಿ ಮಠದ ಶ್ರೀ ಮ,ನಿ,ಪ್ರ.ಸ್ವ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಹೇಳಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಹನುಮಾನ ದೇವರ ಕಾರ್ತೀಕೋತ್ಸವ ಹಾಗೂ ಹನುಮ ಮಾಲಾಧಾರಿಗಳ ರಾಮ ಜಪ ಯಜ್ಞ ಕಾರ್ಯಕ್ರಮದ ಸದ್ವಿಚಾರಗೋಷ್ಠಿಯ ಪಾವನ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಜ್ಞಾನ ಮತ್ತು ಮುಕ್ತಿ ಪಡೆಯಬೇಕಾದರೆ ಗುರು ಮುಖ್ಯವಾಗಿದ್ದಾನೆ. ವ್ಯಕ್ತಿ,ಮುಕ್ತಿ ಪಡೆಯಬೇಕಾದರೆ ಜ್ಞಾನಬೇಕು. ಸಂತರು ಇದ್ದಲ್ಲಿ ಸಂತಸ ಇರುತ್ತದೆ. ಸಂಪತ್ತು ಇದ್ದಲ್ಲಿ ಸಂತಾಪ ಇರುತ್ತದೆ. ನಿಜವಾದ ಸಂಪತ್ತು, ಸಂತಸ ಸಿಗುವುದು ಗುರವಿನಲ್ಲಿ ಮಾತ್ರ. ಅಧ್ಯಾತ್ಮಿಕವಾಗಿ ಸಾಧನೆ ಮಾಡಬೇಕಾದರೂ ಸಹ ಜ್ಞಾನ ಅತ್ಯಂತ ಅವಶ್ಯವಾಗಿದೆ. ಶಿಂದಿಕುರಬೇಟ ಗ್ರಾಮವು ಅಧ್ಯಾತ್ಮಿಕತೆಯಿಂದ ಕೂಡಿದ್ದು ಎಲ್ಲ ಸಮುದಾಯದ ಜನರು ಮತ್ತು ಭಕ್ತರು ಮಹಾತ್ಮರಲ್ಲಿ, ಶರಣರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟಿದ್ದಾರೆ. ಸೇವಾ ಸಮಿತಿಯವರು ಶ್ರೀ ಹನುಮಾನ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳಿಗೆ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ನೀಡಿ ಭಕ್ತರ ಹಾಗೂ ಜನರ ಮನಸ್ಸುಗಳನ್ನು ಗಟ್ಟಿಗೊಳಿಸಿದ್ದಾರೆ. ನಾಡಿನ ಶ್ರೇಷ್ಠ ಸಂತರು, ಮಹಾತ್ಮರು, ಅನುಭಾವಿಗಳು ಆಗಮಿಸಿದ್ದು ಅವರ ದರ್ಶನ ಪಡೆದು ಅವರ ಮಾತುಗಳನ್ನು ಕೇಳುವುದೇ ಪುಣ್ಯ ಎಂದರಲ್ಲದೇ ಗುರುಗಳು ಭಕ್ತರ ಪಾಲಿಗೆ ನೀತಿಯ ಗುರುಗಳಾಗಿ ನೀತಿಯ ವ್ಯಕ್ತಿತ್ವವನ್ನು ತಿಳಿಸಿಕೊಟ್ಟಿದ್ದಾರೆ. ಗುರುವಿನಲ್ಲಿ ಕರುಣಿಯಿದ್ದರೆ ಮಾತ್ರ ಗುರುವಾಗಲು ಸಾಧ್ಯವಾಗುತ್ತದೆ. ಭಗವಂತನ ಸ್ಮರಣೆ ಅಗತ್ಯವಾಗಿದೆ. ಗುರುವಿನ ಮತ್ತು ಶಿಷ್ಯನ ಸಂಬಂಧ ಅಪಾರವಾಗಿದೆ ಎಂದರಲ್ಲದೇ ಭಕ್ತಿ ಪಂಕ್ತದಲ್ಲಿ ನಡೆದವರ ಹೆಸರು ಇತಿಹಾಸದಲ್ಲಿ ಇದ್ದಾರೆ. ನಾವುಗಳ ಕೂಡಾ ನಮ್ಮ ಸಂಸ್ಕøತಿ, ಧರ್ಮ,ಗುರು,ತಂದೆತಾಯಿಗಳನ್ನು ಪ್ರೀತಿ,ವಾತ್ಸಲ್ಯ,ನಂಬಿಕೆಯಿಂದ ಕಾಣಿದರೇ ಮಾತ್ರ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ವೇದಿಕೆ ಮೇಲೆ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಶ್ರೀ ಚನ್ನಬಸವ ದೇವರು ಅಕ್ಕಲಕೂಟ, ದಯಾನಂದ ಬೆಳಗಾವಿ, ಲಕ್ಷ್ಮಣ ಆಲೋಶಿ, ಮಹಾಂತೇಶ ಬೆಳಗಲಿ, ಪಿ.ಎಚ್.ಗೋಸಬಾಳ ಇದ್ದರು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಮತ್ತು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಸೇರಿದಂತೆ ಗಣ್ಯರನ್ನು ಶ್ರೀ ಹನುಮಾನ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಂಘಟಕರಾದ ಮಹೇಶ ಕಾಳ್ಯಾಗೋಳ, ನಾಗಪ್ಪ ವಾಸೇದಾರ, ಗೋವಿಂದ ಪೂಜೇರಿ, ಮಂಜುನಾಥ ಯಲ್ಲಟ್ಟಿ, ಹರೀಶ ಪತ್ತಾರ, ನಾರಾಯಣ ಕದಂ, ಶಿವಾನಂದ ಬೆಳಗಲಿ, ಮಹೇಶ ದೇವಮಾನೆ, ಮುತ್ತುರಾಜ ಭೋವಿ, ಮಹಾಂತೇಶ ಪವಾರ, ಶಂಕರ ನಾಯಿಕ, ಶ್ರೀಕಾಂತ ನಾಯಿಕ, ಮಲ್ಲೇಶ ದೊಡಮನಿ, ಬಸವರಾಜ ಪೂಜೇರಿ, ಹಣಮಂತ ಖಾನಟ್ಟಿ, ಬಾಳಪ್ಪ ಮಾಯಣ್ಣವರ, ಯಲ್ಲಪ್ಪ ಗುಜನಟ್ಟಿ, ಮಲ್ಲೇಶ ದೇವಮಾನೆ ಸೇರಿದಂತೆ ಇತರರು ಇದ್ದರು.