RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ವಿಜೃಂಭನೆಯಿಂದ ಜರುಗಿದ ಗ್ರಾಮದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ

ಗೋಕಾಕ:ವಿಜೃಂಭನೆಯಿಂದ ಜರುಗಿದ ಗ್ರಾಮದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ 

ವಿಜೃಂಭನೆಯಿಂದ ಜರುಗಿದ ಗ್ರಾಮದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ

 
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಡಿ 21:

 
ಗ್ರಾಮದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ಡಿ.20 ರಂದು ವಿಜೃಂಭನೆಯಿಂದ ನಡೆಯಿತು.
ಡಿ.20ರಂದು ಮುಂಜಾನೆ 10.30 ಗಂಟೆಗೆ ಇಲ್ಲಿಯ ದ್ಯಾಮವ್ವದೇವಿ ದೇವರ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶೃಂಗಾರಗೊಳಿಸುವ, ಉಡಿತುಂಬುವದು ನಡೆದ ಬಳಿಕ ಪುರದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವ ಹಾಗೂ ಪಲ್ಲಕ್ಕಿ ಉತ್ಸವ ಜರುಗಿ, ಪುರಜನರಿಂದ ಪೂಜೆ, ನೈವೆದ್ಯ ಸಮರ್ಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ಮಹಾಪ್ರಸಾದ ಜರುಗಿತು.
ಸಾಯಂಕಾಲ 6 ಗಂಟೆಗೆ ಸ್ಥಳೀಯ ಈರಯ್ಯ ಹಿರೇಮಠ ಸಾನಿಧ್ಯ, ಸಂಗಯ್ಯ ಹಿರೇಮಠ ಸಮ್ಮುಖ, ಹಿರಿಯ ನಾಗರಿಕರಾದ ಲಕ್ಷ್ಮಣ ಸೋಮನಗೌಡರ, ರಾಮಣ್ಣ ಬಳಿಗಾರ, ಶಿವಾಜಿ ನೀಲನ್ನವರ, ಮುತ್ತೆಪ್ಪ ವಡೇರ, ಶ್ರೀದೇವಿ ದೇವಾಲಯ ಅರ್ಚಕ ಸುರೇಶ ಬಡಿಗೇರ ನೇತೃತ್ವದಲ್ಲಿ ಶ್ರೀದೇವಿಯ ದೀಪೋತ್ಸವ, ಕಾರ್ತಿಕೋತ್ಸವ ಸಂಭ್ರಮದಿಂದ ನಡೆಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ, ಸುಭಾಷ ಕರೆಣ್ಣವರ, ವಿಠಲ ಕೋಣಿ, ಕಾಳಪ್ಪ ಪತ್ತಾರ, ಶಿವನಪ್ಪ ಮಾಳೇದ, ಮಂಜು ಪತ್ತಾರ, ಕೆಂಪಣ್ಣ ಪೇದಣ್ಣವರ, ಶಿವು ನಾಯ್ಕರ, ಬಾಳಪ್ಪ ಬಡಿಗೇರ, ಪ್ರಕಾಶ ಬಡಿಗೇರ, ಗುಳಪ್ಪ ಪಣದಿ, ವಿಠಲ ಬಡಿಗೇರ, ಮಲ್ಲಪ್ಪ ಪಣದಿ, ಮಹಾದೇವ ಕಂಬಾರ, ವಿಠಲ ಚಂದರಗಿ, ರಾಮಣ್ಣ ನೀಲಣ್ಣವರ ಸೇರಿದಂತೆ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿ ಸದಸ್ಯರು, ಭಕ್ತರು ಇದ್ದರು.

Related posts: