ಬೆಳಗಾವಿ:ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು : ಸಚಿವ ರಮೇಶ ಆಕ್ರೋಶ
ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು : ಸಚಿವ ರಮೇಶ ಆಕ್ರೋಶ
ಬೆಳಗಾವಿ ಅ 3: ಪ್ರಧಾನಿ ಮೋದಿ ಮತ್ತು ಅಮೀತ ಶಾ ಅವರು ಐಟಿ , ಇಡಿ ಮತ್ತು ಸಿಬಿಐಯನ್ನು ಬಳಸಿಕೊಂಡು ರಾಜಕಾರಣಿಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಅವರು ಆರೋಪಿಸಿದ್ದಾರೆ
ಐಟಿ ದಾಳಿ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಇಂತಹ ದಾಳಿಗಳನ್ನು ಎದುರಿಸಲು ನಾವು ತಯಾರಾಗಿದ್ದೇವೆ ಎಂದು ಕೇಂದ್ರಕ್ಕೆ ಸವಾಲು ಹಾಕಿದರು. ಐಟಿ ದಾಳಿ ಅಮೀತ್ ಶಾ ಮತ್ತು ಮೋದಿ ಅವರ ಪ್ರಮುಖ ಅಜೆಂಡಾವಾಗಿದೆ. ನನ್ನ ಮನೆ ಮೇಲೂ ದಾಳಿ ಮಾಡಲಾಗಿತ್ತು. ನಿನ್ನೆ ಡಿಕೆಶಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಮುಂದೆ ಎಂ.ಬಿ ಪಾಟೀಲ್ ಮನೆಯ ಮೇಲೆ ಐಟಿ ದಾಳಿ ಮಾಡಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಹಿಟ್ಲರ್ ಇರುವಾಗ ನಾವು ಎಲ್ಲದಕ್ಕೂ ರೆಡಿಯಾಗಿರಬೇಕು ಎಂದ ಸಚಿವ ಜಾರಕಿಹೊಳಿ ಅವರು, ರಾಜ್ಯದ ಸಚಿವರನ್ನು ಜೈಲಿಗೆ ಅಟ್ಟುವ ಪ್ರಯತ್ನಕ್ಕೆ ಮೋದಿ ಮುಂದಾಗಿದ್ದಾರೆ. ನಾವು ಅದಕ್ಕೆ ಸಿದ್ಧರಿದ್ದೇವೆ ಎಂದು ಗುಡುಗಿದರು.
ಐಟಿ ದಾಳಿಯನ್ನ 8ನೇ ತಾರೀಕಿನ ನಂತರ ಮಾಡಿದ್ದರೆ ಗಂಡಸರು ಎನ್ನುತ್ತಿದ್ದೆವು. ಅಲ್ಲದೇ ಈಗಲ್ಟನ್ ರೇಸಾರ್ಟ್ ಮೇಲೆಯೇ ಯಾಕೆ ದಾಳಿ ಮಾಡಬೇಕು.? ಎಂದು ಪ್ರಶ್ನಿಸಿದ ಅವರು ಸಚಿವ ಡಿಕೆಶಿಗೆ ನಾವೆಲ್ಲರೂ ಬೆಂಬಲವಾಗಿದ್ದೇವೆ ಎಂದು ತಿಳಿಸಿದರು