RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ: ಗೋಕಾಕ ಮತ್ತು ಅರಬಾವಿ ಮತಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರನ್ನು ಸಂಘಟಿಸಲಾಗುವದು : ಜೆಡಿಎಸ್ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ.

ಗೋಕಾಕ: ಗೋಕಾಕ ಮತ್ತು ಅರಬಾವಿ ಮತಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರನ್ನು ಸಂಘಟಿಸಲಾಗುವದು : ಜೆಡಿಎಸ್ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ. 

ಗೋಕಾಕ ಮತ್ತು ಅರಬಾವಿ ಮತಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರನ್ನು ಸಂಘಟಿಸಲಾಗುವದು : ಜೆಡಿಎಸ್ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 23 :

 
ಬರುವ ಜನೇವರಿ 15 ರಿಂದ ಗೋಕಾಕ ಮತ್ತು ಅರಬಾವಿ ಮತಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಸಂಘಟಿಸಲಾಗುವದು ಗೋಕಾಕ ಮತ್ತು ಅರಬಾವಿ ಮತಕ್ಷೇತ್ರಗಳ ರಾಜಕೀಯ ಬದಲಾವಣೆಯೇ ನಮ್ಮ ಸಂಕಲ್ಪವಾಗಿದೆ ಇದಕ್ಕೆ ತಾವೇಲ್ಲರೂ ಕೈ ಜೋಡಿಸಬೇಕೆಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು

ಸೋಮವಾರದಂದು ನಗರದ ಆಧ್ಯಾತ್ಮ ಕೇಂದ್ರ ಜ್ಞಾನ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪರಾಮರ್ಶೆ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು

ಉಪ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇನೆ ಎಂದು ಚುನಾವಣೆ ಸ್ವರ್ಧೆ ಮಾಡಿರಲಿಲ್ಲ ನನಗೆ ನಿಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರಲು ಜಾಗ ಬೇಕಾಗಿದೆ ವಿನಹಃ ವಿಧಾನಸಭೆಯಲ್ಲಿ ಅಲ್ಲ ನಾವು ನಂಬಿದ್ದ ಕೆಲ ಜನರು ನಮಗೆ ಮೋಸ ಮಾಡಿದ್ದಾರೆ ಬರುವ ದಿನಗಳಲ್ಲಿ ಅವರಿಗೆ ಸತ್ಯದ ಅರಿವಾಗುತ್ತದೆ ಆವಾಗ ಅವರಿಗೆ ನಾವು ನೆನಪಾಗುತ್ತೇವೆ ಅಧಿಕಾರ ಶಾಶ್ವತವಲ್ಲ ಜನರ ಪ್ರೀತಿ, ವಿಶ್ವಾಸ ಶಾಶ್ವತ ನನಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಊರಿನಲ್ಲಿ ನನಗೆ ಹೆಚ್ಚಿನ ಪ್ರಮಾಣದಲ್ಲಿ ಮತ ಬಂದಿಲ್ಲ ಇದು ಯಾರ ತಪ್ಪು ಎಂಬುವದು ತಿಳಿಯದಾಗಿದೆ . ಎಂದು ಚುನಾವಣೆ ಕಾರ್ಯ ವೈಖರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪೂಜಾರಿ ಅವರು ಜೀವನದ ಕೊನೆ ಉರಿಸಿರುವರೆಗೆ ತಮ್ಮ ಹೋರಾಟ ನಿರಂತರ ವಿರುತ್ತದೆ ಎಂದು ಹೇಳಿದರು.

ನನಗೆ ರಾಜಕೀಯವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆಸಿದ ಪಕ್ಷ ಜೆಡಿಎಸ್ ಆ ಪಕ್ಷಕ್ಕೆ ನಿಷ್ಠನಾಗಿ ಮುಂದೆ ಕಾರ್ಯ ನಿರ್ವಹಿಸುತ್ತೇನೆ. ಪಕ್ಷದ ವಿರೋಧವಾಗಿ ಎಂದು ಕಾರ್ಯ ಮಾಡಿಲ್ಲ , ಯಾವದೇ ಪಕ್ಷದಲ್ಲಿ ಇದ್ದರು ಸಹ ನಿಷ್ಠೆಯಿಂದ ಕಾರ್ಯ ಮಾಡಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದ್ದೇನೆ.

ಅಭಿಮಾನಿಗಳ ಆಶಾ ಭಾವನೆಯಿಂದ ನಾನು ಬಿಜೆಪಿ ಪಕ್ಷ ಸೇರಿದೆ , ಬಿಜೆಪಿ ಪಕ್ಷದ ವರಿಷ್ಠರು ನನಗೆ ಕೋರಿದ್ದರು . ಅಂದಿನ ಪ್ರಲ್ದಾದ ಜೋಶಿ ಒತ್ತಾಯಕ್ಕೆ ಬಿಜೆಪಿ ಬೆಂಬಲಿಸಿದ್ದೆ . ಯಾವದೆ ಸಂದರ್ಭದಲ್ಲಿ ಸರ್ವಾಧಿಕಾರಿ ದೋರಣೆಯೊಂದಿಗೆ ರಾಜಿ ಮಾಡಿಕೊಂಡರೆ ನಾನು ಆ ಪಕ್ಷದಲ್ಲಿ ಇರುವದಿಲ್ಲ ಎಂದು ಅಂದೇ ಹೇಳಿದ್ದೆ ಬಿಜೆಪಿಯವರು ಅವರೊಂದಿಗೆ ಹೊಂದಾಣಿಕೆ ಮಾಡಿದ ಕಾರಣ ನಾನು ಪಕ್ಷದಿಂದ ಹೊರ ಬಂದೆ . ನಾನು ಬಿಜೆಪಿಯಿಂದ ಚುನಾವಣೆ ಸ್ವರ್ಧೆ ಮಾಡಿದ್ದ ಸಂದರ್ಭದಲ್ಲಿ ಇಷ್ಟು ಪ್ರಮಾಣದಲ್ಲಿ ಗೋಕಾಕಕ್ಕೆ ಬಂದು ಬಿಜೆಪಿ ಅವರು ನನ ಪರ ಪ್ರಚಾರ ಮಾಡಿಲ್ಲ , ಮಾಡಿದ್ದರೆ ನಾನು ಅಂದೇ ಚುನಾವಣೆ ಗೆಲ್ಲುತ್ತಿದ್ದೆ ಎಂದ ಅವರು ನನ್ನ ಮೇಲೆ ಭರವಸೆ ವಿಟ್ಟು ಬಿಜೆಪಿ ಮುಖಂಡರು ನನ್ನ ಮನೆಗೆ ಬಂದು ನಮ್ಮೊಂದಿಗೆ ಇರುವಂತೆ ಮನವಿ ಮಾಡಿದ್ದರು ಆದರೆ ಹಾಗಾಗಲಿಲ್ಲ ಅದಕ್ಕೆ ಕ್ಷೇಮೆ ಕೋರುತ್ತೆನೆ ಎಂದು ಬಿಜೆಪಿ ಮುಖಂಡರ ಕ್ಷಮೆ ಕೋರಿದರು ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಎಂದು ಈ ನಿರ್ಣಯ ತಗೆದುಕೊಂಡು ಚುನಾವಣೆಗೆ ಸ್ವರ್ಧಿಸಿದೆ ಎಂದು ಸ್ವಷ್ಟ ಪಡಿಸಿದರು

ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಹಗಲಿ ಒಂದು ತರಾ, ರಾತ್ರಿ ಒಂದು ತರಾ ರಾಜಕೀಯ ಮಾಡುವವರನ್ನು ನೊಡಿದ್ದೇನೆ. ಮನಸಾಕ್ಷೀ ಮತ್ತು ಆತ್ಮಸಾಕ್ಷಿ ವಿರುದ್ಧ ರಾಜಕೀಯ ಮಾಡಿಲ್ಲ ನನ್ನ ರಾಜಕೀಯ ನಡೆ ನನಗೆ ತೃಪ್ತಿ ತಂದಿದೆ ಹಾಗಾಗಿ ಸ್ವಾಭಿಮಾನದಿಂದ ಬದುಕುತ್ತಿದ್ದೇನೆ . ಮುಂದೆ ಅವರಿಗೆ ಶಾಶ್ವತ ಸತ್ಯದ ಅರಿವು ಆಗುತ್ತದೆ ಎಂದು ಹಿಂದೆ ತಮ್ಮೊಂದಿಗೆ ಇದ್ದ ಮುಖಂಡರ ನಡೆಯನ್ನು ಕಟುಕಿದರು.

ರಮೇಶ ಜಾರಕಿಹೊಳಿ ಅವರು ನಮ್ಮ ಮನೆಗೆ ಬಂದಾಗ ಈ ಬಾರಿ ನಮಗೆ ಬೆಂಬಲ ನೀಡಿ ಮುಂದಿನ ಸಾರಿ ನಿಮ್ಮನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು ಇಂದು ಅವರಿಗೆ ನಾನು ಹೇಳ ಬಯಸುವದು ಇಷ್ಟೇ ಜನರು ಮನಸ್ಸು ಮಾಡಿದರೆ ನಾನು ಶಾಸಕನಾಗುತ್ತೇನೆ ನನಗೆ ಶಾಸಕನಾಗುವ ಆಸೆ ಇಲ್ಲ ನಮ್ಮ ಜೊತೆ ಹಿಂದೆ ಇದ್ದ ಶಶಿಧರ ದೇಮಶೆಟ್ಟಿ , ಜಯಾನಂದ ಮುನ್ನೋಳಿ , ಮಹಾಂತೇಶ ತಾವಂಶಿ , ಬಸವರಾಜ ಹೂಳ್ಳೇರ ಅವರು ನಿಮ್ಮಗೆ ಬೆಂಬಲ ನೀಡಿದ್ದಾರೆ. ಅವರಿಗೆ ಎಂಎಲ್ಎ ಮಾಡಿರಿ ಎಂದು ಅವರಿಗೆ ಟಾಂಗ್ ನೀಡಿದರು .
ಒಂದು ಕುಟುಂಬದ ಶಕ್ತಿ ಪ್ರಬಲವಾದಾಗ , ವ್ಯವಸ್ಥೆ ಅವರು ಹೇಳಿದ ಹಾಗೆ ಕೇಳುವವರಾದಾಗ ನಾವು ಸ್ಥಳೀಯ ರಾಜಕಾರಣ ಬಿಟ್ಟಿದ್ದೇವೆ . ಜೆಡಿಎಸ್ ದಿಂದ ನಾವು ಆಯ್ಕೆಯಾಗಲು ಶ್ರಮಿಸಿದ ಪ್ರತಿನಿಧಿಗಳು ಅವರೊಂದಿಗೆ ಕೈ ಜೊಡಿಸದಾಗ ನಾವು ಸ್ಥಳೀಯ ರಾಜಕೀಯ ಬಿಟ್ಟಿದ್ದೇವೆ . ಸ್ಥಳೀಯ ಸಂಘ ಸಂಸ್ಥೆಯ ಪ್ರತಿನಿಧಿಗಳು ನಮ್ಮ ಜೊತೆ ಇಲ್ಲದಿದ್ದರೂ ಸಹ ನಾವು ಹೆಚ್ಚಿನ ಪ್ರಮಾಣದಲ್ಲಿ ಮತ ಪಡೆದಿದ್ದೇವೆ ಎಂದು ಅಶೋಕ ಪೂಜಾರಿ ಹೇಳಿದರಲ್ಲದೆ ಉಪ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡಿ, ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಿಂದೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಪಕ್ಷ ಬಲಪಡಿಸಲು ಶ್ರಮಿಸಿದ್ದ ಅಶೋಕ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಇನ್ನಷ್ಟು ಬಲ ಪಡಿಸಲಾಗುವದು ಅಶೋಕ ಪೂಜಾರಿ ಅವರನ್ನು ಗೋಕಾಕ ಮತಕ್ಷೇತ್ರಕ್ಕೆ ಸಿಮಿತಗೋಳಿಸದೆ ಇಡೀ ಜಿಲ್ಲಾದ್ಯಂತ ಪಕ್ಷ ಸಂಘಟಿಸಲು ಅನುವು ಮಾಡಿ ಕೊಟ್ಟು ಪಕ್ಷವನ್ನು ಸಂಘಟಿಸಲು ಸಹಕರಿಸಬೇಕೆಂದು ಬೆಂಬಲಿಗರಿಗೆ ಮನವಿ ಮಾಡಿದರು

ಸಭೆಯಲ್ಲಿ ಮುಖಂಡರುಗಳಾದ ಸಿ‌.ಬಿ.ಗಿಡನ್ನವರ , ರಾಜು ಜಾಧವ , ಸುನೀಲ ಮುರ್ಕಿಬಾವಿ, ಪ್ರಕಾಶ ಬಾಗೋಜಿ , ದಸ್ತಗೀರ ಪೈಲವಾನ, ಪ್ರೇಮಾ ಚಿಕ್ಕೋಡಿ, ಕಾಡಣ್ಣ ಗಣಾಚಾರಿ, ವಿಠಲ ಬೋರನ್ನವರ , ಶಿವಪ್ಪ ದಳವಾಯಿ, ಪೀರಜಾದೆ , ಬಾಬು ಸೇರಿದಂತೆ ಇತರರು ಇದ್ದರು

Related posts: