RNI NO. KARKAN/2006/27779|Tuesday, December 3, 2024
You are here: Home » breaking news » ಕೌಜಲಗಿ:ಮನುಕುಲೋದ್ಧಾರಕ ಏಸು -ಫಾಸ್ಟರ್ ಮೋಜೇಶ ಅಭಿಪ್ರಾಯ

ಕೌಜಲಗಿ:ಮನುಕುಲೋದ್ಧಾರಕ ಏಸು -ಫಾಸ್ಟರ್ ಮೋಜೇಶ ಅಭಿಪ್ರಾಯ 

ಮನುಕುಲೋದ್ಧಾರಕ ಏಸು -ಫಾಸ್ಟರ್ ಮೋಜೇಶ ಅಭಿಪ್ರಾಯ

 

ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಡಿ 25 :

 

ಮನುಕುಲೋದ್ಧಾರಕ್ಕಾಗಿ ದರೆಗಿಳಿದ ದೇವಧೂತ ಏಸುಕ್ರಿಸ್ತ ಕಲ್ಮಸಗೊಂಡ ಮನಸ್ಸುಗಳಿಗೆ ಶಾಂತಿ ತುಂಬಿದವನು. ಮಾನವತೆಯ ಸಂದೇಶ ಸಾರಿದವನು ಎಂದು ಕೌಜಲಗಿ ಮೆಥೋಡಿಸ್ಟ್ ಚರ್ಚ್‍ನ ಸಭಾಪಾಲಕ ಫಾಸ್ಟರ್ ಮೋಜೇಶ ಹಾದಿಮನಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಜರುಗಿದ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಚರ್ಚನಲ್ಲಿ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಏಸುಕ್ರಿಸ್ತನ ಸಂದೇಶಗಳನ್ನು ಸಾರುತ್ತ, ಪಾಪಕರ್ಮಾದಿಗಳಿಂದ ದೇವರು ಒಲಿಯುವುದಿಲ್ಲ. ನಾವು ಮಾಡುವ ಸಕರ್ಮಾದಿಗಳಿಂದ ದೇವರು ಒಲಿಯುತ್ತಾನೆ ದೇವರ ಒಲುಮೆಗೆ ಮನುಷ್ಯ ಏನೆಲ್ಲ ಪ್ರಯತ್ನ ಮಾಡುತ್ತಾನೆ. ಶಾಂತಿ-ತಾಳ್ಮೆ-ಸಹಿಷ್ಣುತೆಗಳಲ್ಲಿ ಪರೋಕಪರಾಗಳ್ಲಲಿ ದೇವರು ದೊರೆಯುತ್ತಾನೆ. ಮನುಕುಲದ ಏಳ್ಗೆಗಾಗಿ ದೇವರು ಏಸುವಿನ ರೂಪದಲ್ಲಿ ಬಂದಿದ್ದಾನೆ. ಆತನ ಉಪದೇಶಗಳು ನಿಮಗೆಲ್ಲ ದೇವ ಸಂದೇಶಗಳಾಗಿವೆ ಎಂದು ಹೇಳಿದರು.
ಬೆಳಿಗ್ಗೆಯಿಂದಲೇ ಕ್ರೈಸ್ತ ಬಂಧುಗಳು ಚರ್ಚನತ್ತ ಆಗಮಿಸಿದ್ದರು. ಫಾಸ್ಟರ್ ಅವರ ಆಗಮನದ ನಂತರ ಬಂಧುಗಳೆಲ್ಲರೂ ಎದ್ದು ನಿಂತರು. ಮೊಂಬತ್ತಿಯನ್ನು ಬೆಳಗಿಸಿ ಸಂಭ್ರಮಿಸಿದರು. ಅನಂತರ ಸಾಮೂಹಿಕ ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯುತ್‍ದೀಪಾಲಂಕಾರಗಳಿಂದ ಮೆಥೋಡಿಸ್ಟ್ ಚರ್ಚ ವಿಶೇಷವಾಗಿ ಕಂಗೊಳಿಸುತ್ತಿತ್ತು. ಪ್ರಾರ್ಥನೆಯ ನಂತರ ಕ್ರೈಸ್ತ ಬಂಧುಗಳು ಪರಸ್ಪರ ಕ್ರಿಸ್‍ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ಮಹಿಳೆಯರು, ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಸಿಹಿ ಹಂಚಿ ಸಂಭ್ರಮಿಸಿದರು.

Related posts: