RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಗ್ರಹಣದ ವೇಳೆ ಚುರುಮುರಿ ತಿಂದು ಕಂಕಣ ಸೂರ್ಯ ಗ್ರಹಣ ವೀಕ್ಷಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು

ಗೋಕಾಕ:ಗ್ರಹಣದ ವೇಳೆ ಚುರುಮುರಿ ತಿಂದು ಕಂಕಣ ಸೂರ್ಯ ಗ್ರಹಣ ವೀಕ್ಷಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು 

ಗ್ರಹಣದ ವೇಳೆ ಚುರುಮುರಿ ತಿಂದು ಕಂಕಣ ಸೂರ್ಯ ಗ್ರಹಣ ವೀಕ್ಷಿಸಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 26 :

 
ಗೋಕಾಕ ಡಿ 26: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2 ರಲ್ಲಿ ಕಂಕಣ ಸೂರ್ಯ ಗ್ರಹಣದ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಚುನುಮುರಿ ತಿಂದು ಕಂಕಣ ಸೂರ್ಯ ಗ್ರಹಣ ವೀಕ್ಷಿಸಿದರು

ಗುರುವಾರದಂದು ಗೋಚರಿಸಿದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಶಾಲೆಯ ಶಿಕ್ಷಕ ವೃಂದದ ವತಿಯಿಂದ ಮುಕ್ತ ಅವಕಾಶ ಮಾಡಿ ಕೊಡಲಾಗಿತ್ತು

ಟೆಲಿಸ್ಕೋಪ್ ಮತ್ತು ಸೂಜಿರಂಧ್ರ ಬಿಂಬಗ್ರಾಹಿ ಸಲಕಣೆಗಳ ಮೂಲಕ ಸೂರ್ಯ ಗ್ರಹಣ ವೀಕ್ಷಣೆಗೆ ಶಾಲೆಯ ಆವರಣದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಲಾಗಿತ್ತು

ಈ ಸಂದರ್ಭದಲ್ಲಿ ಮಾತನಾಡಿದ ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಮತ್ತು ಗ್ರಹಣದ ವೇಳೆ ಆಹಾರ ಸೇವಿಸಬಾರದು ಎಂಬ ಪದ್ದತಿಯ ವಿರುದ್ದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಂಕಣ ಸೂರ್ಯ ಗ್ರಹಣದ ವೀಕ್ಷಣೆಗೆ ವ್ಯವಸ್ಥೆ ಮಾಡಿಲಾಗಿದ್ದು , ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಪೂರಕ ಸಹಕಾರ ವ್ಯಕ್ತವಾಗಿದೆ ಎಲ್ಲರೂ ಅತ್ಯಂತ ಆಸಕ್ತಿಯಿಂದ ಸೂರ್ಯ ಗ್ರಹಣ ವೀಕ್ಷಣೆ ಮಾಡಿ ಆಹಾರವನ್ನು ಸೇವಿಸಿ ಮೂಡನಂಬಿಕೆ ವಿರುದ್ಧ ಧ್ವನಿಗೂಡಿಸಿದ್ದಾರೆ ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.
ಗ್ರಹಣ ವೀಕ್ಷಣೆಗೆಂದೆ ಬೆಳ್ಳಂ ಬೆಳಗ್ಗೆ ಶಾಲೆಯತ್ತ ಮುಖ ಮಾಡಿದ್ದ ವಿದ್ಯಾರ್ಥಿಗಳು ಸೂರ್ಯ ಗ್ರಹಣವನ್ನು ವೀಕ್ಷಿಸಿ ಸಂತೋಷ ಪಟ್ಟರು

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಗೋಪಾಲ ಮಾಳಗಿ , ಎಂ.ಬಿ.ಪಾಟೀಲ, ಶಿಕ್ಷಕರಾದ ಎ.ಎಧನ್.ತೊಟಗಿ , ಜಿ.ಬಿ.ನೇಸರಗಿ, ಪಿ.ಬಿ.ಹಂಜಿ, ಆರ್.ಎಂ.ದೇಶಪಾಂಡೆ, ವಾಯ್. ಎಂ. ಸನದಿ, ಲೋಕಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: