ಗೋಕಾಕ:ಯುವ ಸಮುದಾಯದಿಂದ ದೇಶದ ಪ್ರಗತಿ ಸಾಧ್ಯ : ಮುತಾಲಿಕದೇಸಾಯಿ
ಯುವ ಸಮುದಾಯದಿಂದ ದೇಶದ ಪ್ರಗತಿ ಸಾಧ್ಯ : ಮುತಾಲಿಕದೇಸಾಯಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 27 :
ಯುವಕರು ದೇಶದ ಸಂಪತ್ತು. ಯುವ ಸಮುದಾಯದಿಂದ ದೇಶದ ಪ್ರಗತಿ ಸಾಧ್ಯ ಎಂದು ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಆರ್.ಆರ್.ಮುತಾಲಿಕದೇಸಾಯಿ ಹೇಳಿದರು.
ಅವರು ನಗರದ ಸರ್ಕಾರಿ ಐಟಿಐ ಕಾಲೇಜ ಸಭಾಭವನದಲ್ಲಿ ನೆಹರು ಯುವ ಕೇಂದ್ರ ಬೆಳಗಾವಿ, ಶ್ರೀ ಸಿದ್ದಾರೂಢ ಜಾನಪದ ಕಲಾ ಸಂಘ ಜೋಕಾನಟ್ಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಯುವ ಸಮುದಾಯ ಸಮಾಜ ಅಭಿವೃದ್ದಿ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಯುವ ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಯುವಕರಲ್ಲಿ ದೇಶಾಭಿಮಾನ ಬೆಳೆಯಬೇಕು. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಯುವಕರು ಸದೃಢರಾಗಿ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ಬ್ಯಾಂಕಿನ ವ್ಯವಹಾರದ ಬಗ್ಗೆ ವಿವರಿಸಿದ ಅವರು ಹಣಕಾಸಿನ ವ್ಯವಸ್ಥೆಯ ಬಗ್ಗೆ ಯುವ ಸಮುದಾಯಕ್ಕೆ ಅರಿವು ಬೇಕು ಎಂದರು.
ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವಕರು ದುಶ್ಚಟಗಳಿಗೆ ಬಲಿಯಾಗದೇ ತಮ್ಮ ಶರೀರವನ್ನು ಕಾಪಾಡಿಕೊಳ್ಳಬೇಕು. ಯುವಕರಲ್ಲಿ ಶಕ್ತಿ ಇದೆ. ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಬೇಕು. ಯುವಕರು ಸಂಘನಾತ್ಮಕ ಮನೋಭಾವನೆ ಬೆಳೆಸಿಕೊಂಡು ಸದೃಢ ಸಮಾಜದ ನಿರ್ಮಾಪಕರಾಗಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯುವಕರು ಯಾವುದೇ ಕೆಲಸ ಮಾಡಬೇಕಾದರೆ ಹಿಂದೆ ಗುರು ಇರಬೇಕು. ಮುಂದೆ ಗುರಿ ಇರಬೇಕು. ಅಂದರೆ ಮಾತ್ರ ಸಮಾಜದಲ್ಲಿ ನಾವು ಧೈರ್ಯದಿಂದ ಮುನ್ನಡೆಯಲು ಸಾಧ್ಯವೆಂದರು.
ವೇದಿಕೆ ಮೇಲೆ ಸರ್ಕಾರಿ ಐಟಿಐ ಕಾಲೇಜಿನ ಪ್ರಚಾರ್ಯ ಹಾಗೂ ಉಪನಿರ್ದೇಶಕ ಎಸ್.ಎಸ್.ಖಿಲಾರಿ, ಎಂ.ಎ.ಸೈಯದ, ಪಿ.ಬಿ.ಮರಡಿ,ಯೋಗ ಗುರು ಯಲ್ಲಪ್ಪ ಕುರುಬಗಟ್ಟಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತ ವಿಠ್ಠಲ ಕರೋಶಿ, ಪಿ.ಬಿ.ಮರಡಿ, ಎಂ.ಎಲ್. ಡಬ್ಬನವರ, ಬಿ.ಬಿ.ಪಾಟೀಲ, ಎ.ಬಿ.ಹುನಗುಂದ, ಪಿ.ಕೆ.ಕುಂಬಾರ, ಬಾಳಪ್ಪ ಹರಿಜನ, ಐ.ಎಂ.ಪತ್ತಾರ, ಬಾಲಚಂದ್ರ ಬಣವಿ ಸೇರಿದಂತೆ ಇತರರು ಇದ್ದರು.
ಅಕ್ಕಮಹಾದೇವಿ ಜೋಕಾನಟ್ಟಿ ಸ್ವಾಗತಿಸಿದರು. ದುಂಡಯ್ಯ ಹಿರೇಮಠ ನಿರೂಪಿಸಿದರು. ಯಮನವ್ವ ಮಾದರ ವಂದಿಸಿದರು.