RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ , ಗೋಕಾಕದಲ್ಲಿ ಮಹಾ ಸಿಎಂ ಠಾಕ್ರೆ ಪ್ರತಿಕೃತಿ ದಹಿಸಿ ಕನ್ನಡಪರ ಸಂಘಟನೆಗಳ ಆಕ್ರೋಶ

ಗೋಕಾಕ:ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ , ಗೋಕಾಕದಲ್ಲಿ ಮಹಾ ಸಿಎಂ ಠಾಕ್ರೆ ಪ್ರತಿಕೃತಿ ದಹಿಸಿ ಕನ್ನಡಪರ ಸಂಘಟನೆಗಳ ಆಕ್ರೋಶ 

ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ , ಗೋಕಾಕದಲ್ಲಿ ಮಹಾ ಸಿಎಂ ಠಾಕ್ರೆ ಪ್ರತಿಕೃತಿ ದಹಿಸಿ ಕನ್ನಡಪರ ಸಂಘಟನೆಗಳ ಆಕ್ರೋಶ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 29 :

 
ಗೋಕಾಕ ಡಿ 29 : ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವ ಘಟನೆ ಖಂಡಿಸಿ ಗೋಕಾಕಿನ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ರವಿವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕನ್ನಡ ಪರ ಸಂಘಟನೆ ಮುಖಂಡರು ನಾಡ ವಿರೋಧಿ ಶಿವಸೇನೆಯ ವಿರುದ್ಧ ಘೋಷಣೆಗಳನ್ನು ಕೂಗಿ , ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಪ್ರತಿಕೃತಿ ದಹನ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು .

ಈಗಷ್ಟೇ ಅಧಿಕಾರ ಅನುಭವಿಸುತ್ತಿರುವ ಶಿವಸೇನೆ ಬೆಳಗಾವಿ ಗಡಿಯ ವಿಚಾರವನ್ನು ಬಿಟ್ಟು ಮಹಾರಾಷ್ಟ್ರ ಅಭಿವೃದ್ಧಿಗೆ ಪೂರಕವಾದಂತಹ ಕೆಲಸಗಳನ್ನು ಮಾಡಿಲಿ ಅದನ್ನು ಬಿಟ್ಟು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನ ಮಾಡಿದರೆ ನಾಡ ವಿರೋಧಿ ಮುಖಂಡರಿಗೆ ತಕ್ಕ ಶಾಸ್ತ ನೀಡಲು ಕನ್ನಡ ಪರ ಸಂಘಟನೆಗಳು ಸಿದ್ದವಾಗಿವೆ ಹೀಗೆಯೇ ಇವರ ಪುಂಡಾಟಿಕೆ ಮುಂದು ವರೆದರೆ ಕರ್ನಾಟಕ ಗಡಿ ನುಗ್ಗಲು ಶಿವಸೇನೆ ಮುಖಂಡರಿಗೆ ಬಿಡುದಿಲ್ಲ ಎಂದು ಕನ್ನಡ ಪರ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರಲ್ಲದೆ ಗಡಿವಿವಾದ ನ್ಯಾಯಾಲಯದಲ್ಲಿದ್ದರೂ ಶಿವಸೇನೆ ಪದೇ ಪದೇ ಗಡಿ ಕ್ಯಾತೆ ತೆಗೆದು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಕೇಂದ್ರ ಕೂಡಲೇ ಮದ್ಯಸ್ಥಿಕೆ ವಹಿಸಿ ಶಿವಸೇನೆಯ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಸರಕಾರವನ್ನು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಬಸವರಾಜ ಖಾನಪ್ಪನವರ , ಕಿರಣ ಡಮಾಮಗರ , ಯಶೋಧ ಬಿರಡಿ, ಲಕ್ಷ್ಮಿ ಪಾಟೀಲ ,ಸಾದಿಕ್ ಹಲ್ಯಾಳ, ಸಂತೋಷ ಕಂಡ್ರಿ ,ಪವನ ಮಹಾಲಿಂಗಪುರ , ಮಹಬೂಬ ಸಪ್ತಸಾಗರ, ಆನಂದ ಹಟ್ಟಿಗೌಡರ, ನಿರ್ಮಲಾ ಹಡಗಲಿ, ಜರಿನಾ ಮುಲ್ಲಾ, ಮಹಾಂತೇಶ ಕುಂಬಾರ, ಲಕ್ಕಪ್ಪ ನಂದಿ, ಕೃಷ್ಣ ಖಾನಪ್ಪನವರ, ಮುಗುಟ ಪೈಲ್ವಾನ, ಹನೀಫಸಾಬ ಸನದಿ, ರಮೇಶ ಖಾನಪ್ಪನವರ, ರಾಜು ಕೆಂಚನಗುಡ್ಡ , ಸೇರಿದಂತೆ ಅನೇಕರು ಇದ್ದರು.

Related posts: