ಗೋಕಾಕ:ದಿ.5 ರಂದು ಜಲಪ್ರಳಯ ಗ್ರಂಥ ಬಿಡುಗಡೆ, ಶೌರ್ಯ ಮತ್ತು ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ : ಖಾನಪ್ಪನವರ ಮಾಹಿತಿ
ದಿ.5 ರಂದು ಜಲಪ್ರಳಯ ಗ್ರಂಥ ಬಿಡುಗಡೆ, ಶೌರ್ಯ ಮತ್ತು ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭ : ಖಾನಪ್ಪನವರ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 3 :
ಪತ್ರಕರ್ತ, ಲೇಖಕ ಸಾದಿಕ ಹಲ್ಯಾಳ ಅವರ ” ಜಲಪ್ರಳಯ” ಗ್ರಂಥ ಬಿಡುಗಡೆ ಹಾಗೂ ಪ್ರವಾಹದಲ್ಲಿ ತನ್ನ ಜೀವದ ಹಂಗು ತೊರದು ಸಂತ್ರಸ್ತರನ್ನು ರಕ್ಷಿಸಿದ ಮಹಾನ ಜೀವಿಗಳಿಗೆ ‘ಶೌರ್ಯ ಪ್ರಶಸ್ತಿ”, ನಿಸ್ವಾರ್ಥ ಸೇವೆ ಗೈದ ಸೇವಾ ಸಂಸ್ಥೆಗಳಿಗೆ “ಸೇವಾ ಪ್ರಶಸ್ತಿ “ಮತ್ತು ವಿವಿಧ ಸಂಘಟನೆಗಳಿಗೆ “ಗೌರವ ಸತ್ಕಾರ”ಸಮಾರಂಭವು ರವಿವಾರ ದಿ: 5 ರಂದು ಮುಂಜಾನೆ 11:30 ಕ್ಕೆ ಇಲ್ಲಿಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಎದುರಾದ ಭೀಕರ ಪ್ರವಾಹಕ್ಕೆ ಗೋಕಾಕ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರು ನುಗ್ಗಿ ನೂರಾರು ಮನೆಗಳು ನೆಲ ಸಮಗೊಂಡು ಸಾವಿರಾರು ಜನರ ಬದುಕು ಅಧೋಗತಿಗೆ ಹೋಗಿದ್ದು , ಎಂದೂ ಮರೆಯಲು ಸಾಧ್ಯವಿಲ್ಲ ಆ ಸಂದರ್ಭದಲ್ಲಿ ನೆರೆ ಪ್ರವಾಹದಲ್ಲಿ ಸಿಲುಕಿ ತೊಂದರೆಯನ್ನು ಅನುಭವಿಸಿದ ಸಂತ್ರಸ್ತರಿಗೆ ನೆರವಾದ ಹಲವು ಮಹಾನ ಜೀವಿಗಳ ನಿಸ್ವಾರ್ಥ ಸೇವೆಯನ್ನು ನೆನೆಯುವ ಸದ್ದುದೇಶ ದಿಂದ ಕರವೇ ತಾಲೂಕಾ ಘಟಕದಿಂದ ಈ ಕಾರ್ಯಕ್ರಮ ಹಮ್ಮಿಕೋಳಲಾಗಿದ್ದು , ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು , ಜಲಪ್ರಳಯ ಗ್ರಂಥವನ್ನು ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಬಿಡುಗಡೆ ಮಾಡುವರು , ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಪರಮ ಪೂಜ್ಯ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧವನ್ನು ವಹಿಸಲಿದ್ದಾರೆ.
ಶೌರ್ಯ ಪ್ರಶಸ್ತಿ: ನೆರೆ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಪ್ರವಾಹದಲ್ಲಿ ಸಿಲುಕಿದ ಜನರಿಗೆ ಸಂರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ಸಾಹಸ ಮೆರೆದ ಎಕ್ಸಪ್ಲೋರ ದಿ ಔಡ್ಟೋರನ ಮುಖ್ಯಸ್ಥ ಅಯೂಬಖಾನ , ಕುಲಗೋಡ ಪಿಎಸ್ಐ ಹನುಮಂತ ನೇರಳೆ, ಗೋಕಾಕ ಗ್ರಾಮೀಣ ಠಾಣೆಯ ಎಎಸ್ಐ ಆರ್.ವಾಯ್ ತಳವಾರ ಮೊನ್ನೆಯಷ್ಟೇ ಕಂದಕಕ್ಕೆ ಬಿಳುವ ಬಸ್ಸನ್ನು ಸುರಕ್ಷಿತವಾಗಿ ಬೇರೆ ಕಡೆ ಪಲ್ಟಿಮಾಡಿ ಸುಮಾರು 40 ಕ್ಕೂ ಹೆಚ್ಚು ಪ್ರಮಾಣಿಕರ ಪ್ರಾಣ ರಕ್ಷಿಸಿದ ಕೆ. ಎಸ್.ಆರ್ ಟಿ.ಸಿ ಗೋಕಾಕ ಘಟಕದ ಚಾಲಕ ಜಾವೇದ ಪಟೇಲ ಅವರುಗಳಿಗೆ “ಶೌರ್ಯ ಪ್ರಶಸ್ತಿ” 2019. ನೀಡಿ ಗೌರವಿಸಲಾಗುವದು
ಸೇವಾ ಪ್ರಶಸ್ತಿ: ಪ್ರವಾಹ ಸಂದರ್ಭದಲ್ಲಿ ಸಾವಿರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬಿದ್ದ ಮನೆಗಳ ತೆರವಿಗೆ ಅಂಗಲಾಚಿಸುತ್ತಿದ್ದ ಸಂದರ್ಭದಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿ ಬಂದು ತನು,ಮನ,ಧನದಿಂದ ಸ್ವಂತ ಟ್ರ್ಯಾಕ್ಟರ್ , ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಸುಮಾರು 50 ದಿನಗಳ ಕಾಲ ಬಿದ್ದ ಮನೆಗಳ ತೆರವು,ರಸ್ತೆ, ಚರಂಡಿಗಳನ್ನು ಸ್ವಚ್ಚಗೋಳಿಸಿ ನಿಸ್ವಾರ್ಥ ಸೇವೆ ಗೈದ ಸತೀಶ್ ಜಾರಕಿಹೊಳಿ ಫೌಂಡೇಶನ್, ದಿ.ಕುಮಾರಿ ದೀಪಾ ನಾಯ್ಕರ ಸೇವಾ ಸಮಿತಿ ಮತ್ತು ವಿಜಯಪುರ ನಗರದ ಶಾಲೆ ಆವರಣ , ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲ್ಯಾಸ್ಟಿಕ್ ಗಳನ್ನು ತೆರವುಗೋಳಿಸಿ ಮನೆ ಮನೆಗೆ ಹೋಗಿ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮದ ಕುರಿತು ಜಾಗೃತಿಯನ್ನು ಮೂಡಿಸಿ ಕಳೆದ ಮೂರು ವರ್ಷಗಳಿಂದ ಪ್ಲಾಸ್ಟಿಕ್ ನಿಷೇಧಿಸಿ ಅಂತ ಮನೆ ಮನೆಗೆ ತಿರುಗುತ್ತಿರುವ , 4 ನೇ ತರಗತಿ ಓದುತ್ತಿರುವ ಕುಮಾರಿ ಸಾನ್ವಿ ಉಮೇಶ್ ಕುಲಕರ್ಣಿ ಹಾಗೂ ಬಡವರ , ಮಧ್ಯಮ ವರ್ಗದವರ , ಆರ್ಥಿಕ ನಿಶ್ಯಕ್ತರ ಮಕ್ಕಳು ಸಹ ಕೆ.ಎ.ಎಸ್,ಐ.ಎ.ಎಸ್ ಸೇರಿದಂತೆ ಇತರ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂಬ ಮಹದಾಸೆಯಿಂದ ಕಳೆದ ಸುಮಾರು ವರ್ಷಗಳಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹತ್ತಿರ ವಿರುವ ಸಸ್ಯ ಉದ್ಯಾನವನದಲ್ಲಿ ತಮ್ಮ ಸಮಾನ ಮನಸ್ಕರ ತಂಡವನ್ನು ಕಟ್ಟಿ ಉಚಿತವಾಗಿ ಕೆ.ಎ.ಎಸ್, ಐಎಎಸ್ ತರಬೇತಿಯನ್ನು ನೀಡುತ್ತಿರುವ ಧಾರವಾಡದ ಅನಿಲ ರಜಪೂತ ಅವರುಗಳ ನಿಸ್ವಾರ್ಥ ಸೇವೆಗೆ “ಸೇವಾ ಪ್ರಶಸ್ತಿ” 2019 ನೀಡಿ ಗೌರವಿಸಲಾಗುವದಲ್ಲದೆ.ನೆರೆಯಲ್ಲಿ ಸಿಲುಕಿದ್ದ ಸಂತ್ರಸ್ತರ ಸಹಾಯಕ್ಕೆ ಕ್ಷಣಾರ್ಧದಲ್ಲಿ ಧಾವಿಸಿ ಬಂದು ತನು,ಮನ ಧನದಿಂದ ಸಹಾಯ ಹಸ್ತವನ್ನು ಚಾಚಿ ತಿಂಗಳಿಗೂ ಹೆಚ್ಚು ಕಾಲ ನೆರೆ ಸಂತ್ರಸ್ತರ ಬೆನ್ನಿಗೆ ನಿಂತ ನಗರದ ಎಲ್ಲ ಮುಂಚೂಣಿ ಸಂಘಟನೆಗಳಿಗೆ ಗೌರವ ಸತ್ಕಾರ ನೆರೆವೆರಿಸಿ ಅವರ ಸೇವೆಯನ್ನು ನೆನೆಯಲಾಗುವದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೋಳಿಸಬೇಕೆಂದು ಬಸವರಾಜ ಖಾನಪ್ಪನವರ ಕೋರಿದ್ದಾರೆ