RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ;ಡಾ.ರಾಜೇಂದ್ರ ಸಣ್ಣಕ್ಕಿ ಅವರನ್ನು ಕೆ.ಪಿ.ಎಸ್. ಶಿಕ್ಷಕರ ಬಳಗದಿಂದ ಸತ್ಕಾರ

ಗೋಕಾಕ;ಡಾ.ರಾಜೇಂದ್ರ ಸಣ್ಣಕ್ಕಿ ಅವರನ್ನು ಕೆ.ಪಿ.ಎಸ್. ಶಿಕ್ಷಕರ ಬಳಗದಿಂದ ಸತ್ಕಾರ 

ಡಾ.ರಾಜೇಂದ್ರ ಸಣ್ಣಕ್ಕಿ ಅವರನ್ನು ಕೆ.ಪಿ.ಎಸ್. ಶಿಕ್ಷಕರ ಬಳಗದಿಂದ ಸತ್ಕಾರ

 

 

ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಜ 6 :

 

 

ಮನುಷ್ಯನಿಗೆ ಹಣ, ಅಧಿಕಾರ ಎಲ್ಲ ಕಾಲದಲ್ಲಿಯೂ ಸಹಕರಿಸುವದಿಲ್ಲ. ಆದರೆ ಶುದ್ಧವಾದ ಮನಸ್ಸು, ಸನ್ನಡತೆ, ಸಚ್ಚಾರಿತ್ರ್ಯಗಳು ಸರ್ವಕಾಲದಲ್ಲಿಯೂ ಸಹಕರಿಸುತ್ತವೆ. ಅಧಿಕಾರವಿರಲಿ ಬಿಡಲಿ ಸದಾಕಾಲ ಶುದ್ಧ ಮನಸ್ಸುಳ್ಳವನಾಗಿ ಬದುಕುವವ ಜನನಾಯಕನಾಗಿ ಉಳಿಯುತ್ತಾನೆ. ಅಂಥ ಗುಣ ಸ್ವಭಾವ ಡಾ.ರಾಜೇಂದ್ರ ಸಣ್ಣಕ್ಕಿಯವರದಾಗಿದೆ ಎಂದು ಎನ್.ಜಿ.ಓ. ಆರ್.ಎ.ಮಹಾಲಿಂಗಪೂರ ಅಭಿಪ್ರಾಯಿಸಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಮೂಹ ವಿಭಾಗಗಳ ಆಶ್ರಯದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜರುಗಿದ ಸಾಧಕರ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಬೆಳಗಾವಿ ಜಿಲ್ಲೆಯಿಂದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಡಾ.ರಾಜೇಂದ್ರ ಸಣ್ಣಕ್ಕಿ ಅವರನ್ನು ಕೆ.ಪಿ.ಎಸ್. ಶಿಕ್ಷಕರ ಬಳಗದಿಂದ ಸತ್ಕರಿಸಲಾಯಿತು. ಕಾರ್ಯಕ್ರಮವನ್ನು ತಾ.ಪಂ. ಸದಸ್ಯ ಶಾಂತಪ್ಪ ಹಿರೇಮೇತ್ರಿ ಉದ್ಘಾಟಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ರಾಜ್ಯ ಕುರುಬರ ಸಂಘದ ನೂತನ ನಿರ್ದೇಶಕ ಡಾ. ರಾಜೇಂದ್ರ ಸಣ್ಣಕ್ಕಿಯವರು, ನಮ್ಮ ಭಾಗದ ಸವಸ್ತ ಜನತೆಯ ಬೆಂಬಲದಿಂದಾಗಿ ನಾನು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ನನ್ನ ಮೂಲಭೂತ ಗುರಿಯಾದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮವಹಿಸಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಪ್ರಾಥಮಿಕ ಶಾಲೆಯ ಶತಮಾನೋತ್ಸವಕ್ಕೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣವೆಂದು ಹೇಳಿದರು.
ಸಮಾರಂಭದಲ್ಲಿ ಶಿಕ್ಷಕರ ಪ್ರತಿನಿಧಿ ಪರಸನ್ನವರ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್.ಜಿ.ವಲ್ಯಾಪೂರ ಮಾತನಾಡಿದರು. ಅಧ್ಯಕ್ಷತೆಯನ್ನು ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಮ್.ಕೆ. ಹಾದಿಮನಿ ವಹಿಸಿ ಮಾತನಾಡಿ, ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಗುಣ ಯಾರಲ್ಲಿದೆಯೋ ಅವರು ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅಂಥ ಕೆಲಸವನ್ನು ಸಣ್ಣಕ್ಕಿಯವರು ಮಾಡುತ್ತಿರುವದು ಅಭಿನಂದನೀಯ ಕಾರ್ಯವಾಗಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ನೀಲಪ್ಪ ಕೇವಟಿ, ಅಶೋಕ ಉದ್ದಪ್ಪನವರ, ಮೈಬೂಬ ಮುಲ್ತಾನಿ, ಪೋದಿ, ಜಕೀರಸಾಬ ಜಮಾದಾರ, ಬಸವರಾಜ ಜೋಗಿ, ರಾಯಪ್ಪ ಬಳೋಲದಾರ, ಎಲ್.ಎನ್.ಬಡಕಲ್ಲ, ಸಂತೋಷ ಪಾಟೀಲ, ಎಚ್.ವಾಯ್.ಕೋಟೂರ, ಸದಾಶಿವ ಪೂಜೇರಿ, ಮಾಲತೇಶ ಸಣ್ಣಕ್ಕಿ, ಅನ್ನಪೂರ್ಣಾ ಕೌಜಲಗಿ, ವೆಂಕಟೇಶ ಕೌಜಲಗಿ, ಅಬೂಬಕರ ಮಖಾನದಾರ, ನಾಗನೂರ ಮುಂತಾದವರು ಉಪಸ್ಥಿತರಿದ್ದರು.

Related posts: