RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ತಹಶೀಲ್ದಾರ್ ಅವರಿಗೆ ಮನವಿ

ಗೋಕಾಕ:ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ತಹಶೀಲ್ದಾರ್ ಅವರಿಗೆ ಮನವಿ 

ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ತಹಶೀಲ್ದಾರ್ ಅವರಿಗೆ ಮನವಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :

 

 

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ನ ತಾಲೂಕಾ ಸಮಿತಿಯವರು ಭಾರತ ಬಂದ್‍ಗೆ ಬೆಂಬಲಿಸಿ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರಿಗೆ ಮತ್ತು ಅಕ್ಷರದಾಸೋಹ ನೌಕರರಿಗೆ ಶಾಸನ ಬದ್ಧ ಕೂಲಿ, ನಿವೃತ್ತಿ ವೇತನಕ್ಕೆ ಡಿ.ಗ್ರೂಪ್ ನೌಕರರೆಂದು ಪರಿಗಣಿಸಲು ಮತ್ತು ಐಸಿಡಿಎಸ್ ಯೋಜನೆ ಖಾಸಗೀಕರಣ ವಿರೋಧಿಸಿ ಹಾಗೂ ಇತರ ಬೇಡಿಕೆಗಳ ಕುರಿತು ಮತ್ತು ಟ್ರೇಡ್ ಯೂನಿಯನ್ ನವರು ಗುತ್ತಿಗೆ ಪದ್ಧತಿ ರದ್ದಾಗಬೇಕು. ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21 ಸಾವಿರ ನಿಗದಿಯಾಗಬೇಕು. 10 ಸಾವಿರ ಕನಿಷ್ಠ ಖಾತ್ರಿ ಪಿಂಚಣಿ ಜಾರಿಯಾಗಬೇಕು. ನಿವೇಶನ ರಹಿತರಿಗೆ ವಸತಿಕಲ್ಪಿಸಬೇಕು ಹಾಗೂ ಬೆಲೆಏರಿಕೆ ನಿಯಂತ್ರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ದೊಡ್ಡವ್ವ ಪೂಜಾರಿ, ರಮೇಶ ಹೋಳಿ, ಕಲ್ಲಪ್ಪಮಾದರ, ಮಡ್ಡೆಪ್ಪ ಭಜಂತ್ರಿ, ಹಣಮಂತ ಮಡಿವಾಳ,ಮುನಿರಾ ಮುಲ್ಲಾ, ಮಾಶಾಬಿ ಡಾಲಾಯತ, ಪಾರ್ವತಿ ಕೌಜಲಗಿ,ಮೀನಾಕ್ಷಿ ಕರೆಮ್ಮನವರ ಸೇರಿದಂತೆ ಇತರರು ಇದ್ದರು.

Related posts: