ಗೋಕಾಕ:ಕೌಜಲಗಿ ಗ್ರಾ.ಪಂ ಅಧ್ಯಕ್ಷರಾಗಿ ಮುಲ್ತಾನಿ ಅವಿರೋಧ ಆಯ್ಕೆ
ಕೌಜಲಗಿ ಗ್ರಾ.ಪಂ ಅಧ್ಯಕ್ಷರಾಗಿ ಮುಲ್ತಾನಿ ಅವಿರೋಧ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 8 :
ತಾಲೂಕಿನ ಕೌಜಲಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಬುಧವಾರದಂದು ಜರುಗಿತು.
ಅಧ್ಯಕ್ಷರನ್ನಾಗಿ ರಮಜಾನಸಾಬ ಮೀರಾಸಾಬ ಮುಲ್ತಾನಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಈ ಅವಿರೋಧ ಆಯ್ಕೆ ಜರುಗಿತು ಎಂದು ಚುನಾವಣಾಧಿಕಾರಿಯಾಗಿ ಜಿಆರ್‍ಬಿಸಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಸನಕಿ ತಿಳಿಸಿದರು.
ಈ ಅವಿರೋಧ ಆಯ್ಕೆಯು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ: ರಾಜೇಂದ್ರ ಸಣ್ಣಕ್ಕಿ ಅವರ ನೇತ್ರತ್ವದಲ್ಲಿ ಈ ಅವಿರೋಧ ಆಯ್ಕೆ ಜರುಗಿತು. ಈ ಸಂದರ್ಭದಲ್ಲಿ ಮುಖಂಡರುಗಳಾದ ತಾ.ಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಅಶೋಕ ಉದ್ದಪ್ಪನವರ, ಎಸ್.ಬಿ.ಲೋಕನ್ನವರ, ನೀಲಪ್ಪ ಕಿವಟಿ, ರಾಯಪ್ಪ ಬಲೋಳದಾರ, ಎಸ್.ಬಿ.ಹಳ್ಳೂರ ಸೇರಿದಂತೆ ಇತರರು ಇದ್ದರು.