RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಮಾಜದ ಸೇವೆ ಮಾಡಿದರೆ ದೇವರ ಕರುಣೆ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಸಮಾಜದ ಸೇವೆ ಮಾಡಿದರೆ ದೇವರ ಕರುಣೆ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ 

ಸಮಾಜದ ಸೇವೆ ಮಾಡಿದರೆ ದೇವರ ಕರುಣೆ ಪ್ರಾಪ್ತವಾಗುತ್ತದೆ : ಮುರುಘರಾಜೇಂದ್ರ ಶ್ರೀ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 11 :

 

ಸಮಾಜದ ಸೇವೆ ಮಾಡಿದರೆ ದೇವರ ಕರುಣೆ ಪ್ರಾಪ್ತವಾಗುತ್ತದೆ ಎಂದು ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು .
ಶನಿವಾರದಂದು ನಗರದ ಬಾಂಬೆ ಚಾಳ ಮಸಜೀದ್ ಆವರಣದಲ್ಲಿ ಎಸ್.ವ್ಹಿ.ಪಿ ಲಾಯನ್ಸ ಕಣ್ಣಿನ ಆಸ್ವತ್ರೆ ಸಾಂಗಲಿ ಹಾಗೂ ಗಮಾಮ ಮಸಜೀದ ಬಾಂಬೆ ಚಾಳ ಮುಸ್ಲಿಂ ಕಮೀಟಿ , ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ, ಮಧುಮೇಹ ಹಾಗೂ ರಕ್ತ ತಪಾಸಣೆ ಶಿಬಿರದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಡವರ ಮತ್ತು ದೀನ ದಲಿತರ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಭಾವೈಕತೆಯನ್ನು ಬದ್ರ ಪಡಿಸಬೆಕಾಗಿದೆ . ಬಡವರ ಸೇವೆ ಮಾಡುವಲ್ಲಿ ದೇವರನ್ನು ಕಾಣಬೇಕು. ಯಾರು ನೋಂದವರ ಕಣ್ಣೀರನ್ನು ಒರೆಸುತ್ತಾರೋ ಅವರು ಸಮಾಜದಲ್ಲಿ ದೊಡ್ಡವರು ಅಂತಹ ಕಾರ್ಯಗಳು ಸಮಾಜದಲ್ಲಿ ಜರುಗಬೇಕು ಆ ದಿಸೆಯಲ್ಲಿ ನಾವೆಲ್ಲರೂ ಮುಂದಾಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ಆರೋಗ್ಯ ತಪಾಸಣೆ ಮತ್ತು ಉಚಿತವಾಗಿ ಶಸ್ತ್ರಚಿಕಿತ್ಸೆ ಅಂತಹ ಕಾರ್ಯಕ್ರಮಗಳು ಬಡವರಿಗೆ ತುಂಬಾ ಸಹಕಾರಿಯಾಗಿವೆ ಎಂದು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ಸಾಂಗಲಿಯ ವೈದ್ಯರುಗಳಾದ ಡಾ. ಕಮರುದ್ದೀನ ಶೇಖ , ಡಾ. ಸುಶಾಂತ ಕಾಂಬ್ಳೆ , ಡಾ. ಸುಧೀರ ಸಾವರಡೆ, ಸಾಹಿತಿ ಮಹಾಲಿಂಗ ಮಂಗಿ , ಕಾರಿ ಜಬೀವುಲ್ಲಾ , ಹಮೀದ ನೇರ್ಲಿ , ರಾಜು ಹಡಗಿನಾಳ , ವಿನೂತ ಜತ್ತಿ, ಸೇರಿದಂತೆ ಅನೇಕರು ಇದ್ದರು

Related posts: