RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಬಬಲಾದಿ ಯಾತ್ರಾ ಮಹೋತ್ಸವ ಅಂಗವಾಗಿ ಅಂತರ್‍ರಾಷ್ಟ್ರೀಯ ಕುಸ್ತಿ ಪಂದ್ಯಗಳು

ಘಟಪ್ರಭಾ:ಬಬಲಾದಿ ಯಾತ್ರಾ ಮಹೋತ್ಸವ ಅಂಗವಾಗಿ ಅಂತರ್‍ರಾಷ್ಟ್ರೀಯ ಕುಸ್ತಿ ಪಂದ್ಯಗಳು 

ಬಬಲಾದಿ ಯಾತ್ರಾ ಮಹೋತ್ಸವ ಅಂಗವಾಗಿ ಅಂತರ್‍ರಾಷ್ಟ್ರೀಯ ಕುಸ್ತಿ ಪಂದ್ಯಗಳು

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 12 :

 

 
ಸಮೀಪದ ಶಿಂದಿಕುರಬೇಟ ಮತ್ತು ಅರಭಾವಿ ಗ್ರಾಮಗಳ ಮಧ್ಯೆ ಭಾಗದಲ್ಲಿರುವ ಶ್ರೀ ಕ್ಷೇತ್ರ ಬಬಲಾದಿ ಮಠದ ಯಾತ್ರಾ ಮಹೋತ್ಸವವು ದಿ. 12ರಂದು ವಿಜೃಂಭನೆಯಿಂದ ಜರುಗಲಿದೆ.
ದಿ.12ರಂದು ಮುಂಜಾನೆ ಶ್ರೀ ಶಿವಶಕ್ತಿ ಗದ್ದುಗೆಯ ಅಭಿಷೇಕ, ಭಕ್ತರಿಂದ ಅಂಬಲಿ ಕುಂಭಗಳ ಆಗಮನ, ಶ್ರೀಗಳಿಂದ ಮಹಾಪ್ರಸಾದ ಪೂಜೆ ಹಾಗೂ ಆಶೀರ್ವಚನ ಜರುಗಲಿದ್ದು, ರಾತ್ರಿ 10 ಗಂಟೆಗೆ ಶ್ರೀ ಕೃಷ್ಣ ಪಾರಿಜಾತ ಬೈಲಾಟ ಜರುಗಲಿದೆ.
ಅಂತರ್‍ರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ಮತ್ತು ಬೆಳ್ಳಿ ಗದೆ ಕುಸ್ತಿಗಳು: ದಿ.12ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ. ಕುಸ್ತಿ ಪಂದ್ಯಾವಳಿ ಉದ್ಘಾಟನಾ ಸಮಾರಂಭಕ್ಕೆ ಕೆಎಂಎಫ್ ರಾಜ್ಯಾಧ್ಯಕ್ಷರು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಂತರಾಷ್ಟ್ರೀಯ ಕುಸ್ತಿ ಪಟು ಶ್ರೀ ರತ್ನಕುಮಾರ ಮಠಪತಿ ಸೇರಿದಂತೆ ಗಣ್ಯರು ಆಗಮಿಸುವರು.
ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್ ದೇಶದ ಸೈಯ್ಯದ ಮಹ್ಮದ, ಹರಿಯಾಣಾ ವಿರಾಟ ಭಾರತ ಕೇಸರಿ ಮನ್‍ಜಿತ ಸಿಂಗ್ ಖತ್ರಿ, ಡಬಲ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ, ಹರಿಯಾಣಾ ಕೇಸರಿ ಬಂಟಿ ಕುಮಾರ, ಬೆಳಗಾವಿಯ ಅಪ್ಪಾಸಾಬ ಇಂಗಳಗಿ, ಪಂಜಾಬ ಚಾಂಪಿಯನ್ ಹ್ಯಾಪಿ ಮುಲ್ಲಾಪೂರ, ಕರ್ನಾಟಕ ಕುಮಾರ ಸಿದ್ದಣ್ಣಾ ಸುಲ್ತಾನಪೂರ,ಕೊಲ್ಲಾಪೂರದ ಬಿಬಿಶನ್ ಮಾಡೇಕರ, ಗೌರವ ಮಾಡೇಕಾರ, ಶಿಂದಿಕುರಬೇಟದ ಬಾಳು ಸೇರಿದಂತೆ ನೂರಕ್ಕೂ ಹೆಚ್ಚು ಜೋಡಿಗಳ ಪೈಲ್ವಾನರು ಆಗಮಿಸಲಿದ್ದಾರೆ.

Related posts: