RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನರ್ಸ್ ಎಡವಟ್ಟಿಗೆ : ಹುಣಶ್ಯಾಳ ಪಿ.ಜಿ ಗ್ರಾಮದ ಮಗು ಸಾವು

ಗೋಕಾಕ:ನರ್ಸ್ ಎಡವಟ್ಟಿಗೆ : ಹುಣಶ್ಯಾಳ ಪಿ.ಜಿ ಗ್ರಾಮದ ಮಗು ಸಾವು 

ನರ್ಸ್ ಎಡವಟ್ಟಿಗೆ : ಹುಣಶ್ಯಾಳ ಪಿ.ಜಿ ಗ್ರಾಮದ ಮಗು ಸಾವು

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 12:

 

 
ಚುಚ್ಚುಮದ್ದು ನೀಡಲಾದ ಹಿನ್ನೆಲೆಯಲ್ಲಿ ಮಗುವೊಂದು ಸಾವಗಿಡಾದ ಘಟನೆ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ನಡೆದಿದೆ

ಹುಣಶ್ಯಾಳ ಪಿ. ಜಿ ಗ್ರಾಮದ 3 ತಿಂಗಳು ಮಗು ಲಕ್ಷ್ಮೀ(ಸಮರ್ಥಸಾಯಿ) ಪ್ರಕಾಶ ಮಾಯನ್ನವರ ಇತಳಿಗೆ ಶುಕ್ರವಾರದಂದು ಚುಚ್ಚುಮದ್ದು ಹಾಕಲು ಹುಣಶ್ಯಾಳ ಗ್ರಾಮದ ಸಹಾಯಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದಾಗ ಆರೋಗ್ಯ ಕೇಂದ್ರದ ನರ್ಸ ಆರ್.ಆರ್. ಹಾಲಬಾವಿ ಮಗುವಿಗೆ ಚುಚ್ಚುಮದ್ದು ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ ಮಗುವಿಗೆ ತೀವ್ರ ಜ್ವರ ಬಂದ ಪರಿಣಾಮ ಶನಿವಾರದಂದು ಹೆಚ್ಚಿನ ಚಿಕಿತ್ಸೆ ಕೊಡಿಸಲು ಗೋಕಾಕ ನಗರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುವಷ್ಟಿಗೆ ಮಗು ಅಸುನಿಗಿದೆ ಎಂದು ತಿಳಿದು ಬಂದಿದ್ದು , ನರ್ಸ ಮತ್ತು ಆಶಾ ಕಾರ್ಯಕರ್ತೆಯ ಬೇಜವಾಬ್ದಾರಿಯಿಂದ ಮಗು ಸಾವನ್ನಪಿದೆ ಎಂದು ಮಗುವಿನ ಪಾಲಕರು ಆರೋಪಿಸುತ್ತಿದ್ದಾರೆ.
ಮೇಲ್ನೋಟಕ್ಕೆ ನರ್ಸ್ ಮತ್ತು ಆಶಾ ಕಾರ್ಯಕರ್ತೆಯ ಲಕ್ಟವ ಎಂಬವರ ಮೇಲೆ ಆರೋಪ ಬಂದಿದ್ದು ಇದರ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಂಪೂರ್ಣ ತನಿಖೆ ಕೈಗೊಂಡು ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೆ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ

Related posts: