ಗೋಕಾಕ:ಪಕ್ಷಿ ಬೇಟೆಯಾಡುತ್ತಿದ್ದ ಬೇಟೆಗಾರರ ಬಂಧನ : ಗೋಕಾಕ ವಲಯದ ಕೊಣ್ಣೂರ ಗ್ರಾಮದಲ್ಲಿ ಘಟನೆ
ಪಕ್ಷಿ ಬೇಟೆಯಾಡುತ್ತಿದ್ದ ಬೇಟೆಗಾರರ ಬಂಧನ : ಗೋಕಾಕ ವಲಯದ ಕೊಣ್ಣೂರ ಗ್ರಾಮದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 12 :
ಗೋಕಾಕ ವಲಯದ ಕೊಣ್ಣೂರ ಶಾಖೆಯ ಅರಣ್ಯ ಪ್ರದೇಶದಲ್ಲಿ ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರರನ್ನು ಬಂದಿಸಿರುವ ಘಟನೆ ಶನಿವಾರದಂದು ಸಾಯಂಕಾಲ ಕೊಣ್ಣೂರ ಅರಣ್ಯ ಪ್ರದೇಶದಲ್ಲಿ ಜರುಗಿದೆ.
ಗೋಕಾಕ ಫಾಲ್ಸನ ನಿವಾಸಿಗಳಾದ ವಿಜಯ ಮಲ್ಲೇಶ ಕುಂದರಗಿ (33) , ಆನಂದ ಸುರೇಶ ಪತ್ತೆನ್ನವರ (19 ) , ಶಿವಾನಂದ ಪರುಶುರಾಮ ಪತ್ತೆನ್ನವರ (19 ) ಎಂಬುವವರು ಪರಿವಾಳ ಮತ್ತು ನೀರುಕಾಗೆಗಳನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಿರುವ ಅರಣ್ಯ ಅಧಿಕಾರಿಗಳು ವನ್ಯಜೀವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನಾಯ್ಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ರಾಜೇಶ್ವರಿ ಈರನಟ್ಟಿ , ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಗಳಾದ ಹೆಚ್.ಜಿ ಹಮ್ಮನ್ನವರ , ಎಚ್.ಎಸ್.ಇಂಗಳಗಿ, ಎ.ಬಿ.ಮಾದುರಿ, ಸತೀಶ ಮುಗುರವಾಡಿ, ಎಂ.ಬಿ ಹೆಬ್ಬಾಳ, ಮಹಾಂತೇಶ ಜಾಮುನಿ, ಬಸವರಾಜ ಒಜಪ್ಪಗೋಳ, ಕಲ್ಲಪ್ಪ ಗಲಗಲಿ, ಕೆಂಪಣ್ಣ ಮಾಳವಗೋಳ, ಮಹಾಬಲೇಶ್ವರ ಪಾಟೀಲ ಕಾರ್ಯಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .