RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ಮಾಸಿಕ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಗೋಕಾಕ:ಮಾಸಿಕ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ 

ಮಾಸಿಕ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 12 :

 

 

ಇಲ್ಲಿಯ ಲಯನ್ಸ್ ಮತ್ತು ಲಯನೆಸ್ಸ್ ಸಂಸ್ಥೆ ಹಾಗೂ ಹುಬ್ಬಳಿಯ ಎಮ್.ಎಮ್.ಜೋಶಿ ನೇತ್ರ ಚಿಕಿತ್ಸಾಲಯ ಮತ್ತು ಆರೋಗ್ಯ ಇಲಾಖೆ ನಿವೃತ್ತರ ಹಿತವರ್ಧಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ 42ನೇ ಮಾಸಿಕ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವು ಶನಿವಾರದಂದು ನಗರದ ಡಾ|| ಮುರಗೋಡ ಆಸ್ಪತ್ರೆಯಲ್ಲಿ ಜರುಗಿತು.
ಈ ಶಿಬಿರದಲ್ಲಿ 36 ಜನರ ನೇತ್ರಗಳನ್ನು ತಪಾಸಣೆ ನಡೆಸಿ, 16 ಜನರ ನೇತ್ರ ಶಸ್ತ್ರ ಚಿಕಿತ್ಸೆಗಾಗಿ ಹುಬ್ಬಳ್ಳಿ ನೇತ್ರ ಚಿಕಿತ್ಸಾಲಯಕ್ಕೆ ಕಳುಹಿಸಲಾಗುವುದು. ಇದೂವರೆಗೆ 1280ಕ್ಕೂ ಹೆಚ್ಚು ಜನರ ನೇತ್ರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿಸಲಾಗಿದೆ ಎಂದು ಸಂಘಟಕ ಜಿ.ಎಸ್.ಸಿದ್ದಾಪೂರಮಠ ಪತ್ರಿಕೆಗೆ ತಿಳಿಸಿದರು.
ಈ ಶಿಬಿರದಲ್ಲಿ ಎಮ್.ಎಮ್.ಜೋಶಿ ನೇತ್ರ ಚಿಕಿತ್ಸಾಲಯದ ಡಾ|| ಸಚೀನ ಮಹಾಂತವರ, ಡಾ|| ಅಶೋಕ ಮುರಗೋಡ, ಡಾ. ಅಶೋಕ ಪಾಟೀಲ, ಡಾ. ಆರ್.ಡಿ.ಪಾಟೀಲ, ಡಾ.ಅಮರ ಮುರಗೋಡ ಸೇರಿದಂತೆ ಅನೇಕರು ಇದ್ದರು.

Related posts: