RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪರರ ಸೇವೆ ಮೂಡುವ ಮೂಲಕ ತಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳಬೇಕು : ಮುರಘರಾಜೇಂದ್ರ ಶ್ರೀ

ಗೋಕಾಕ:ಪರರ ಸೇವೆ ಮೂಡುವ ಮೂಲಕ ತಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳಬೇಕು : ಮುರಘರಾಜೇಂದ್ರ ಶ್ರೀ 

ಪರರ ಸೇವೆ ಮೂಡುವ ಮೂಲಕ ತಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳಬೇಕು : ಮುರಘರಾಜೇಂದ್ರ ಶ್ರೀ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ (ಗೋವಾ) ಜ 14 :

 
ಮಾನವ ಜನ್ಮ ಹುಟ್ಟಿದ್ದು ಪರೋಪಕಾರಕ್ಕಾಗಿ , ಪರರ ಸೇವೆ ಮೂಡುವ ಮೂಲಕ ತಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳಬೇಕು ಎಂದು ಗೋಕಾಕನ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು

ಸೋಮವಾರದಂದು ಗೋವಾ ರಾಜ್ಯದ ವಡಗಾಂವನ ಮೋತಿ ಡೊಂಗರ ಪ್ರದೇಶದಲ್ಲಿ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು
ಸಮಾಜದಲ್ಲಿ ಸ್ವಾರ್ಥಗಳನ್ನು ಬದಿಗೋತ್ತಿ ಸಮಾಜವನ್ನು ಗಟ್ಟಿಗೋಳಿಸಬೇಕಾಗಿದೆ ಆ ದಿಸೆಯಲ್ಲಿ ಮಾನವರಾದ ನಾವುಗಳು ಆಲೋಚನೆ ಮಾಡಬೇಕು . ಮಾನವನ ಶರೀರದಲ್ಲಿ ಜೀವ ಇರುವವರೆ ಮಾತ್ರ ಅದಕ್ಕೆ ಬೆಲೆ ಇರುತ್ತದೆ , ಜೀವ ಇರುವವರೆಗೂ ಮಾನವೀಯತೆ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾಜದಲ್ಲಿಯ ಬಡವರ ,ದೀನ ದಲಿತರ ಸೇವೆ ಮಾಡಿ ಸಮಾಜವನ್ನು ಸದೃಢವಾಗಿ ಕಟ್ಟಲು ಮುಂದಾಗಬೇಕು.ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಮನಕುಲದ ಉದ್ಧಾರಕ್ಕಾಗಿ ಒಂದಿಷ್ಟು ತ್ಯಾಗ, ಪರಿಶ್ರಮಗಳನ್ನು ಮಾಡಿ ಸಮಾಜದಲ್ಲಿ ಭಾವೈಕತೆಯಿಂದ ಬಾಳಿ ಬದುಕಬೇಕೆಂದು ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬಟಕುರ್ಕಿಯ ಪರಮ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು

ವೇದಿಕೆ ಮೇಲೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ದಿಗಂಬರ ಕಮತ, ಶ್ರೀಮತಿ ಆಶಾತಾಯಿ ಕಮತ , ಮುಖಂಡರುಗಳಾದ ಘನಶ್ಯಾಮ ಶಿರೋಡಕರ, ಈರಣ್ಣಾ ಗೋಟಿ, ಅನಿಲ ಲೋಟಲೇಕರ, ಶ್ರೀಮತಿ ಸಂಗಮ ಕೋಮಲಕರ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಭರಮಣ್ಣ ಕಟ್ಟಮನಿ, ರಾಮಾ ಜಿರ್ಲಿ, ಶಿವರಾಮ ಜಾಮೂನಿ, ಸಾತಪ್ಪಾ ಹೊಸಮನಿ ಸೇರಿದಂತೆ ಇತರರು ಇದ್ದರು .

Related posts: