RNI NO. KARKAN/2006/27779|Friday, December 13, 2024
You are here: Home » breaking news » ಚಿಕ್ಕೋಡಿ:ಅಂಗವಿಕಲತೆಯನ್ನು ಮೇಟ್ಟಿನಿಂತ ಯುವಕ : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆ

ಚಿಕ್ಕೋಡಿ:ಅಂಗವಿಕಲತೆಯನ್ನು ಮೇಟ್ಟಿನಿಂತ ಯುವಕ : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆ 

ಅಂಗವಿಕಲತೆಯನ್ನು ಮೇಟ್ಟಿನಿಂತ ಯುವಕ : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆ

ಚಿಕ್ಕೋಡಿ ಅ 7: ಸಾಧಿಸುವ ಛಲ ವಿದ್ದರೆ ಸಾಕು ಜೀವನದಲ್ಲಿ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಚಿಕ್ಕೋಡಿಯ ಸುನೀಲಕುಮಾರ್ ಪಾಟೀಲ ಸಾಕ್ಷಿ ಯಾಗಿದ್ದಾನೆ
ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಫ್ರೌಡ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸುನೀಲ್‌ ವಿಕಲಚೇತನರಾಗಿದ್ದು, ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವ್ಹೀಲ್‌ಚೇರ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ತಮ್ಮಲ್ಲಿರುವ ಅಂಗವೈಕ್ಯಲ್ಯ ಬದಿಗಿಟ್ಟು ತಮ್ಮ ಜೀವನದಲ್ಲಿ ಸಾಧನೆ ಮಾಡಬೇಕೆಂಬ ಛಲದಿಂದಾಗಿ ಬಾಲ್ಯದಲ್ಲಿ ಕ್ರಿಕೆಟ್‌ ಕಡೆ ಹೆಚ್ಚು ಒಲವು ತೋರಿಸಿದ್ದ ಇವರು ಎರಡು ವರ್ಷಗಳ ಹಿಂದೆಯಷ್ಟೆ  ಕರ್ನಾಟಕ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿದ್ದರು. ಅಲ್ಲಿ ಇವರ ಸಾಧನೆಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿತ್ತು. ಕರ್ನಾಟಕ ತಂಡದಲ್ಲಿ ಇವರ ಸಾಧನೆ ಗಮನಿಸಿದ ಆಗ್ರಾದ ಡಿಸೇಬಲ್ಡ್‌ ಸೊಸೈಟಿ ಇವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡಕ್ಕೆ ಆಯ್ಕೆ ಮಾಡಿದೆ

Related posts: