ಘಟಪ್ರಭಾ:ಸೇತುವೆ-ಬಾಂಧಾರ ನಿರ್ಮಾಣದ ಕಾಮಗಾರಿಗಳಿಗೆ 4.75 ಕೋಟಿ ರೂ. ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಸೇತುವೆ-ಬಾಂಧಾರ ನಿರ್ಮಾಣದ ಕಾಮಗಾರಿಗಳಿಗೆ 4.75 ಕೋಟಿ ರೂ. ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 14 :
.ಸಣ್ಣ ನೀರಾವರಿ ಇಲಾಖೆಯಿಂದ ಅರಭಾಂವಿ ಮತಕ್ಷೇತ್ರದ ದುರದುಂಡಿ-ಗಣೇಶವಾಡಿ, ವಡೇರಹಟ್ಟಿ-ಫುಲಗಡ್ಡಿ ಮತ್ತು ಗುಜನಟ್ಟಿ-ಧರ್ಮಟ್ಟಿ ಹಳ್ಳಗಳಿಗೆ ಸೇತುವೆ ಕಮ್ ಬಾಂಧಾರ ನಿರ್ಮಾಣದ ಕಾಮಗಾರಿಗಳಿಗೆ ಒಟ್ಟು 4.75 ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದೆ ಎಂದು ಅರಭಾಂವಿ ಶಾಸಕ ಮತ್ತು ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ದುರದುಂಡಿ ಗ್ರಾಮದಲ್ಲಿ ಸೇತುವೆ ಕಮ್ ಬಾಂಧಾರ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ದುರದುಂಡಿ-ಗಣೇಶವಾಡಿ ಕಾಮಗಾರಿಗೆ 1.50 ಕೋಟಿ ರೂ, ವಡೇರಹಟ್ಟಿ-ಫುಲಗಡ್ಡಿ ಕಾಮಗಾರಿಗೆ 1.75 ಕೋಟಿ ರೂ, ಮತ್ತು ಗುಜನಟ್ಟಿ-ಧರ್ಮಟ್ಟಿ ಹಳ್ಳಗಳಿಗೆ ಸೇತುವೆ ಕಮ್ ಬಾಂಧಾರ ನಿರ್ಮಾಣಕ್ಕೆ 1.50 ಕೋಟಿ ರೂಗಳು ಬಿಡುಗಡೆಯಾಗಿದ್ದು, ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿಗಳ ಅನುಷ್ಠಾನದಿಂದ ಒಟ್ಟು 190 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು ರೈತ ವರ್ಗಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅರಭಾಂವಿ ಕ್ಷೇತ್ರದ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿವೆ. ಜನರ ಮೂಲ ಸೌಕರ್ಯಗಳಿಗೆ ಹೆಚ್ಚಿನಾದ್ಯತೆ ನೀಡಲಾಗುತ್ತಿದೆ. ಗ್ರಾಮಗಳ ಪ್ರಗತಿ ಕಾರ್ಯಗಳಲ್ಲಿ ಗ್ರಾಮಸ್ಥರ ಒಟ್ಟುಗೂಡಿಕೆ ಅವಶ್ಯವಾಗಿದ್ದು, ಅಭಿವೃದ್ದಿಯಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಾದರೇ ಮಾತ್ರ ಗ್ರಾಮಗಳ ಪ್ರಗತಿ ಸಾಧ್ಯವೆಂದು ಹೇಳಿದರು.
ರೈತರ ಜೀವನಾಡಿಯಾಗಿರುವ ಘಟಪ್ರಭಾ ಎಡದಂಡೆ ಕಾಲುವೆಯ 833 ಕೋಟಿ ರೂಗಳ ವೆಚ್ಚದ ಆಧುನಿಕರಣ ಕಾಮಗಾರಿಯೂ ಸಹ ಭರದಿಂದ ಸಾಗುತ್ತಿದೆ. ಅದರಂತೆ ಘಟಪ್ರಭಾ ಬಲದಂಡೆ ಕಾಲುವೆಯ ಆಧುನೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು, ಪ್ರಸಕ್ತ ಹಣಕಾಸಿನ ವರ್ಷದಲ್ಲಿ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಡಕಲ್ ಡ್ಯಾಮ್ ಘಯೋನಿಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪ್ರಭಾಶುಗರ ನಿರ್ದೇಶಕರಾದ ಶಿವಲಿಂಗ ಪೂಜೇರಿ, ಕೆ.ಕೆ.ಬಂಡ್ರೋಳ್ಳಿ, ಸಿದ್ದಲಿಂಗಪ್ಪ ಕಂಬಳಿ, ಎಪಿಎಮ್‍ಸಿ ನಿರ್ದೇಶಕ ಶ್ರೀಪತಿ ಗಣೇಶವಾಡಿ, ಮಹಾದೇವ ತಾಂಬಡಿ, ಶಿವಮೂರ್ತಿ ಹುಕ್ಕೇರಿ, ಆರ್.ಕೆ.ಬಂಡಿ, ಟಿಎಪಿಸಿಎಂಎಸ್ ನಿರ್ದೇಶಕ ಕೆಂಚಪ್ಪ ಮಂಟೂರ, ಭೀಮಶಿ ಅಂತರಗಟ್ಟಿ, ಬಿ.ಬಿ.ಪೂಜೇರಿ, ಸುರೇಶ ಜಾಧವ, ಲಕ್ಷ್ಮಣ ತೆಳಗಡೆ, ವಸಂತ ಡುಳ್ಳೋಳ್ಳಿ, ವೆಂಕಟೇಶ ವಜ್ರಮಟ್ಟಿ, ಭೀಮಶಿ ಹುಕ್ಕೇರಿ, ಹೊನ್ನಜ್ಜಾ ಕೋಳಿ, ಡಾ. ಗೋರಕನಾಥ, ಸಣ್ಣಯಲ್ಲಪ್ಪ ಅಂತರಗಟ್ಟಿ, ವಿಠ್ಠಲ ಗಿಡೋಜಿ, ಗೋಪಾಲ ಕುದರಿ, ಬನಪ್ಪ ವಡೇರ, ಶಿವನಗೌಡ ಪಾಟೀಲ, ಸಿದ್ದಲಿಂಗ ಗಿಡೋಜಿ, ಮುತ್ತೆಪ್ಪ ಕುಳ್ಳೂರ, ಲಕ್ಕಪ್ಪ ಹಸಿಕುರಿ, ಸಾಬಪ್ಪ ಬಂಡ್ರೋಳ್ಳಿ, ನಿಂಗಪ್ಪ ಮಾಳ್ಯಾಗೋಳ ಸಿದ್ದಪ್ಪ ಅಂತರಗಟ್ಟಿ, ಬಸವರಾಜ ಸನದಿ, ಅಜ್ಜಪ್ಪ ಮೂಲಿಮನಿ, ಸಣ್ಣ ನೀರಾವರಿ ಇಲಾಖೆಯ ಎಇಇ ಎಸ್.ಎಸ್.ಮೆಳವಂಕಿ, ಜೆಇ ಜೈಭೀಮ ಸೇರಿದಂತೆ ಅನೇಕರು ಇದ್ದರು.