ಗೋಕಾಕ:ಗೋಕಾಕದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ
ಗೋಕಾಕದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜ 15 :
ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನುಭಾವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅವರ
848 ನೇ ಜಯಂತಿಯನ್ನು ಇಲ್ಲಿನ ಮಿನಿ ವಿಧಾನಸೌದಲ್ಲಿ ಆಚರಿಸಲಾಯಿತು
ಸೋಮವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ಭೋವಿ (ವಡ್ಡರ) ಸಮಾಜದ ಆಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ಯ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಪೂಜೆ ಸಲ್ಲಿಸಿ , ಗೌರವ ಅರ್ಪಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಮನುಷ್ಯನು ಶೃದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಕಾಯಕ ಮಾಡಿದರೆ ಜೀವನ ಪಾವನಮಯವಾಗುತ್ತದೆ ಶ್ರೀ ಶಿವಯೋಗಿ ಸಿದ್ದರಾಮೆಶ್ವರ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡು ಸಮಾಜವನ್ನು ಕಟ್ಟಬೇಕೆಂದು ಹೇಳಿದರು
ಸಮಾಜದ ಮುಖಂಡರುಗಳಾದ ಎಲ್.ಜಿ ಗಾಡಿವಡ್ಡರ , ಪರಶುರಾಮ ಕಲಘಟಗಿ,ಗೋವಿಂದ ಗಾಡಿವಡ್ಡರ,ಶೇಟೆಪ್ಪ ಗಾಡಿವಡ್ಡರ,ಶಿವಾಜಿ ಗಾಡಿವಡ್ಡರ, ಅನಿಲ ಜಮಖಂಡಿ,ಆನಂದ ಗಾಡಿವಡ್ಡರ, ಮಲ್ಲೇಶ ಗಾಡಿವಡ್ಡರ,ರಾಮಚಂದ್ರ ಪಾತ್ರೋಟ ಸೇರಿದಂತೆ ಇತರರು ಉಪಸ್ಥಿತರಿದ್ದರು