ಗೋಕಾಕ:ಆಧ್ಯಾತ್ಮಿಕತೆಯ ಶ್ರೇಷ್ಠೆಯತೆಯನ್ನು ಸಾರಿದ ಮಹಾನ ಮೇದಾವಿ ವಿವೇಕಾನಂದರು : ನಾರಾಯಣ ಮಠಾಧಿಕಾರಿ
ಆಧ್ಯಾತ್ಮಿಕತೆಯ ಶ್ರೇಷ್ಠೆಯತೆಯನ್ನು ಸಾರಿದ ಮಹಾನ ಮೇದಾವಿ ವಿವೇಕಾನಂದರು : ನಾರಾಯಣ ಮಠಾಧಿಕಾರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 16 :
ಜಗತ್ತಿಗೆ ಭಾರತೀಯ ಆಧ್ಯಾತ್ಮಿಕತೆಯ ಶ್ರೇಷ್ಠೆಯತೆಯನ್ನು ಸಾರಿದ ಮಹಾನ ಮೇದಾವಿ ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಎಂದು ವಿಎಚ್‍ಪಿಯ ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ ಹೇಳಿದರು.
ಗುರುವಾರದಂದು ನಗರದ ಎಲ್‍ಇಟಿಯ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ, ವಿವೇಕಾನಂದರು ಆಧ್ಯಾತ್ಮಿಕ ಶಕ್ತಿ ಹಾಗೂ ತಮ್ಮಲ್ಲಿರುವ ಮೇಧಾವಿತನದಿಂದ ಇಡಿ ಜಗತ್ತನ್ನೆ ಗೆದ್ದು ಭಾರತೀಯ ಸಂಸ್ಕøತಿ ಪರಂಪರೆಯಿಂದ ವಿಶ್ವಶಾಂತಿ ಸಾಧ್ಯವೆಂದು ತಿಳಿಸಿದರು.
ಉನ್ನತ ಮಟ್ಟದ ಏಕಾಗ್ರತೆಯಿಂದ ಏನ್ನನ್ನಾದರೂ ಸಾಧಿಸಬಹುದು. ಪರಿಶ್ರಮವಿದಲ್ಲಿ ಯಶಸ್ವು ನಿಶ್ಚಿತ ಎಂಬ ವಿವೇಕಾನಂದರ ವಾಣಿಯಿಂದ ಇಂದಿನ ಯುವಜನತೆ ಪ್ರೇರಿತರಾಗಿ ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿರಿ. ಸತ್ಯ ಹಾಗೂ ಧಾರ್ಮಿಕತೆಯನ್ನು ರಕ್ಷಿಸಿ ಭಾರತ ಜಗತ್ತ ಜನನಿಯಾಗುವಂತೆ ಮಾಡಲು ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು. ವೇದಿಕೆ ಮೇಲೆ ಪ್ರಾಚಾರ್ಯರಾದ ಆಯ್.ಎಸ್.ಪವಾರ, ಎನ್.ಕೆ.ಮಿರಾಸಿ, ಮುಖ್ಯೋಪಾಧ್ಯಾಯ ಬಿ.ಕೆ.ಕುಲಕರ್ಣಿ ಇದ್ದರು. ಉಪನ್ಯಾಸಕ ವಿ.ಬಿ.ಕಣಿಲದಾರ ಸ್ವಾಗತಿಸಿ ವಂದಿಸಿದರು.