RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ನಗರದ ವಿವಿಧೆಡೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಗೋಕಾಕ:ನಗರದ ವಿವಿಧೆಡೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ 

ನಗರದ ವಿವಿಧೆಡೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 19 :

 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಹಾಗೂ ಜೆಸಿಐ ಸಂಸ್ಥೆ, ಸ್ಕೌಟ್ಸ್ ಮತ್ತು ಗೈಡ್ಸ್ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರದಂದು ನಗರದ ಸರ್ಕಾರಿ ಸಾರ್ವಜನಿಕ ತಾಲೂಕಾಸ್ಪತ್ರೆ ಆವರಣದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿ.ಪಂ ಸದಸ್ಯ ಮಡ್ಡೆಪ್ಪ ತೋಳಿನವರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಮ್‍ಸಿ ನಿರ್ದೇಶಕ ಬಸವರಾಜ ಸಾಯಣ್ಣವರ, ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ತಾಲೂಕಾ ವೈದ್ಯಾಧಿಕಾರಿ ಡಾ: ರವೀಂದ್ರ ಅಂಟಿನ, ಡಾ: ಆರ್.ಎಸ್.ಬೆಣಚಿನಮರಡಿ, ಡಾ: ಬಿ.ಎಸ್.ಬಾಗಲಕೋಟ, ಡಾ: ಮಹೇಶ ಕೋಣಿ ಡಾ: ಗೋಪಾಲ ವಾಘಮೋಡೆ, ಡಾ: ಉದಯ ಅಂಗಡಿ, ದೈಹಿಕ ಶಿಕ್ಷಣಾಧಿಕಾರಿ ತೋರಣಗಟ್ಟಿ, ಜೆಸಿಐ ಸಂಸ್ಥೆಯ ರಜನೀಕಾಂತ ಮಾಳೋದೆ, ಶೇಖರ ಉಳ್ಳಾಗಡ್ಡಿ, ವಿಷ್ಣು ಲಾತೂರ, ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್ಮ, ಡಾ: ಉದಯ ಆಜರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಇದ್ದರು.
ನಗರದ ಬಸ್ ನಿಲ್ದಾಣದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ತಾಲೂಕಾ ವೈದ್ಯಾಧಿಕಾರಿ ಡಾ: ರವೀಂದ್ರ ಅಂಟಿನ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ಅಧ್ಯಕ್ಷ ರಜನಿಕಾಂತ ಮಾಳೋದೆ, ಪದಾಧಿಕಾರಿಗಳಾದ ಶೇಖರ ಉಳ್ಳೆಗಡ್ಡಿ, ವಿಷ್ಣು ಲಾತೂರ, ಪ್ರಕಾಶ ಬಿಳ್ಳೂರ, ಜಿ.ಆರ್.ನಿಡೋಣಿ, ನೇತ್ರಾವತಿ ಲಾತೂರ ಮೀನಾಕ್ಷಿ ಸವದಿ ಅನ್ನಪೂರ್ಣಾ ಉಳ್ಳೆಗಡ್ಡಿ ಸೇರಿದಂತೆ ಅನೇಕರು ಇದ್ದರು.

Related posts: