RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:8ನೇ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಭಾರತ ದೇಶದ ಪ್ರತಿನಿಧಿಯಾಗಿ ಪುಂಡಲೀಕ ಲಕಾಟಿ ಭಾಗಿ

ಗೋಕಾಕ:8ನೇ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಭಾರತ ದೇಶದ ಪ್ರತಿನಿಧಿಯಾಗಿ ಪುಂಡಲೀಕ ಲಕಾಟಿ ಭಾಗಿ 

8ನೇ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಭಾರತ ದೇಶದ ಪ್ರತಿನಿಧಿಯಾಗಿ ಪುಂಡಲೀಕ ಲಕಾಟಿ ಭಾಗಿ

 

 

ನಮ್ಮ ಬೆಳಗಾವಿ ,ಇ – ವಾರ್ತೆ ,  ಬೆಟಗೇರಿ ಜ 22 :

 

 

ಕನ್ನಡ ನಾಡಿನ ಬಡಕುಟುಂಬದಲ್ಲಿ ಅರಳುವ ಪ್ರತಿಭೆಗಳಿಗೆನೂ ಕಡಿಮೆ ಇಲ್ಲ ಅಂಬುವುದಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಾಷ್ಟ್ರೀಯ ಯೋಗಸ್ಪರ್ಧೆಯ ಸಾಧಕ ಯುವಪ್ರತಿಭೆ ಪುಂಡಲೀಕ ಮಹಾದೇವಪ್ಪ ಲಕಾಟಿ ಅವರೇ ಸಾಕ್ಷಿ.!
2020ನೇ ಇಸ್ವಿ ಇದೇ ಜನೇವರಿ 19 ರಂದು ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ 35-40 ವಯೋಮಿತಿ ಪುರುಷ ವಿಭಾಗದ ಯೋಗಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಅಂತರಾಷ್ಟ್ರೀಯ ಮಟ್ಟದ ಪುರುಷ ವಿಭಾಗದ ಯೋಗಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಆಯೋಜನೆಯ ಹಂತದಲ್ಲಿರುವ 8ನೇ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಭಾರತ ದೇಶದ ಪ್ರತಿನಿಧಿಯಾಗಿ ಪುಂಡಲೀಕ ಲಕಾಟಿ ಭಾಗವಹಿಸಲಿದ್ದಾರೆ.
ರಾಷ್ಟ್ರಮಟ್ಟದ ಯೋಗಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಆಯ್ಕೆಗೊಂಡ ಸ್ಥಳೀಯ ಯೋಗಪಟು ಪುಂಡಲೀಕ ಲಕಾಟಿ ಅವರ ಸಾಧನೆಯನ್ನು ಗ್ರಾಮದ ಹಾಗೂ ತಾಲೂಕಿನ ಹಿರಿಯ ನಾಗರಿಕರು, ಗಣ್ಯರು, ಸ್ಥಳೀಯರು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಡಕುಟುಂಬದ ಮಹಾದೇವಪ್ಪ-ಯಲ್ಲವ್ವ ದಂಪತಿಗಳ 2ನೇ ಪುತ್ರನಾಗಿ 1984 ಅಕ್ಟೊಬರ್ 28 ರಂದು ಜನಿಸಿದ ಪುಂಡಲೀಕ ಲಕಾಟಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ ಪೂರೈಸಿ, ಗೋಕಾಕ ಜಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯು ಶಿಕ್ಷಣ, ಎಲ್‍ಇಟಿ ಸಂಸ್ಥೆಯಲ್ಲಿ ಪದವಿ ವ್ಯಾಸಂಗ, ಧಾರವಾಡದ ಕರ್ನಾಟಕ ಯುನರ್ವಸಿಟಿಯಲ್ಲಿ ಎಮ್‍ಎಸ್‍ಸಿ ಸ್ನಾತಕೊತ್ತರ ಶಿಕ್ಷಣ ಪೂರೈಸಿದ ಅವರು ಈಗ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿಭಾಗದಲ್ಲಿ ಜಿಲ್ಲಾ ಸಾಮಾಜಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮದು ಬಡಕುಟುಂಬ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಡಕುಟುಂಬದಲ್ಲಿ ಜನಸಿದ ನಾನು ಮತ್ತು ನನ್ನ ಕಿರಿಯ ಸಹೋದರರ ಪದವಿ ಮತ್ತು ಸ್ನಾತಕೊತ್ತರ ಶಿಕ್ಷಣಕ್ಕಾಗಿ ಹಾಗೂ ಕುಟುಂಬದ ನಿರ್ವಹಣೆಗಾಗಿ ನಮ್ಮ ತಂದೆಯ ಪಾಲಿನ ಸುಮಾರು 2ಎಕರೆಯಷ್ಟು ಜಮೀನನ್ನು ನನ್ನ ಹಿರಿಯ ಸಹೋದರ ಭೀಮಶಿ ಲಕಾಟಿ ಮಾರಾಟ ಮಾಡಿ, ನಮಗೆ ಶಿಕ್ಷಣ ಕೊಡಿಸಿದ್ದಾರೆ. ಬಡತನದಿಂದ ಕೂಡಿದ, ಆರ್ಥಿಕವಾಗಿ ಸಬಲರಿಲ್ಲದ ಕುಟುಂಬ ನಮ್ಮದು ಅಂತಾ ತಮ್ಮ ಕುಟುಂಬದ ಉಪಜೀವನ, ಬದುಕು, ಶಿಕ್ಷಣ ಪಡೆಯಲು ಪಟ್ಟ ಬದುಕಿನ ಬವಣೆ, ಹಲವಾರು ದುಸ್ಥಿತಿಯ ಪ್ರಸಂಗಗಳ ಕುರಿತು ಪತ್ರಿಕೆಯ ಪ್ರತಿನಿಧಿಯೊಂದಿಗೆ ಪುಂಡಲೀಕ ಲಕಾಟಿ ಹಂಚಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಹೆಚ್ಚಿಸುವ ಆಶಾಭಾವ: ಯೋಗಾಭ್ಯಾಸದ ಕಡೆ ಆಸಕ್ತಿ ವಹಿಸಿ, ವಿವಿಧ ಯೋಗಾಸನಗಳ ಶಿಕ್ಷಣ ಪಡೆದು ಅಂತರಾಷ್ಟ್ರೀಯ ಮಟ್ಟದ ಪುರುಷ ವಿಭಾಗದ ಯೋಗಸ್ಪರ್ಧೆಗೆ ಆಯ್ಕೆಗೊಂಡು ಕುಂದಾನಗರಿ ಬೆಳಗಾವಿ ಜಿಲ್ಲೆ, ಕರದಂಟೂರು ಗೋಕಾಕ, ಹುಟ್ಟೂರು ಬೆಟಗೇರಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಕಳೆದ ಏಳೆಂಟು ವರ್ಷದಿಂದ ವಿವಿಧ ಯೋಗಾಸನಗಳ ಅಭ್ಯಾಸ ಮಾಡುತ್ತಾ ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಯೋಗಸ್ಪರ್ಧೆ ಸೇರಿದಂತೆ ನಾಡಿನ ವಿವಿಧಡೆ ಆಯೋಜಿಸಿದ ಹಲವು ಯೋಗಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಈಗ ತುಮಕೂರಿನ ಅಮರಜ್ಯೋತಿ ನಗರದಲ್ಲಿರುವ ತುಮಕೂರು ಯೋಗಾಸನ ಕೇಂದ್ರದಲ್ಲಿ ಒಂದು ವರ್ಷದಿಂದ ಯೋಗ ಶಿಕ್ಷಣ ಪಡೆಯುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು, ದೇಶದ ಮತ್ತು ನಾಡಿನ ಕೀರ್ತಿ ತರುವ ಆಶಾಭಾವ ಹೊಂದಿದ್ದೇನೆ ಅನ್ನುತ್ತಾರೆ ಪುಂಡಲೀಕ ಲಕಾಟಿ.
ನೆರವಿಗೆ ಮೊರೆ:ನಮ್ಮದು ಹಳ್ಳಿಯಲ್ಲಿರುವ ಬಡಕುಟುಂಬವಾಗಿದೆ. ಕುಟುಂಬ ನಿರ್ವಹಣೆಗಾಗಿ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿಭಾಗದಲ್ಲಿ ಜಿಲ್ಲಾ ಸಾಮಾಜಿಕ ಕಾರ್ಯಕರ್ತನಾಗಿ ಚೇವೆ ಸಲ್ಲಿಸುತ್ತಿದ್ದೇನೆ. ಅಂತರಾಷ್ಟ್ರೀಯ ಪುರುಷ ವಿಭಾಗದ ಯೋಗಸ್ಪರ್ಧೆಗೆ ಭಾಗವಹಿಸಲು ಖರ್ಚು ವೆಚ್ಚಗಳ ಹಣಕಾಸಿನ ನೆರವು ಬೇಕಿದೆ. ಯೋಗಸ್ಪರ್ಧೆಯ ಯುವಸಾಧಕ ಪುಂಡಲೀಕ ಲಕಾಟಿ ಅವರು ಸಹಾಯ, ಸಹಕಾರ, ಹಣದ ನೆರವಿಗೆ ಮೊರೆಹೊಗಿದ್ದಾರೆ. ಮೊಬೈಲ್ ನಂ: 9008200145 ಗೆ ಸಂಪರ್ಕಿಸುವಂತೆ ಕೊರಲಾಗಿದೆ.
“ನಾನು ಹಲವಾರು ಯೋಗ ಪುಸ್ತಕ ತೆಗೆದುಕೊಂಡು ಅದರಲ್ಲಿರುವ ಮಾಹಿತಿಯಂತೆ ಯೋಗಾಸನಗಳ ವಿವಿಧ ಆಸನಗಳನ್ನು ನಿತ್ಯ ಯೋಗಾಭ್ಯಾಸ ಮಾಡುವ ರೂಢಿಮೈಗೊಡಿಸಿಕೊಂಡಿದ್ದು ಹೆಚ್ಚು, ಬಳಿಕ ತುಮಕೂರಿನ ರವೀಂದ್ರನಾಥ(ಟ್ಯಾಗೂರ್) ಹಾಗೂ ಎಮ್.ಕೆ.ನಾಗರಾಜರಾವ್ ಅವರ ಯೋಗ ಶಿಕ್ಷಣಾಭ್ಯಾಸದ ಮಾರ್ಗದರ್ಶನವೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಯೋಗಸ್ಪರ್ಧೆಗೆ ಆಯ್ಕೆಗೊಳ್ಳಲು ಸಹಾಯಕವಾಗಿದೆ. *ಪುಂಡಲೀಕ ಲಕಾಟಿ. ಯೋಗಸ್ಪರ್ಧೆಯ ಸಾಧಕ ಯುವ ಪ್ರತಿಭೆ, ಬೆಟಗೇರಿ, ತಾ.ಗೋಕಾಕ. ಜಿಲ್ಲೆ ಬೆಳಗಾವಿ.

Related posts: