ಗೋಕಾಕ:ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ಉತ್ತಮ ಪರಿಸರ ಹಾಗೂ ಕ್ರೀಡೆ ಅವಶ್ಯಕವಾಗಿದೆ : ಕೆ.ಎನ್ ವಣ್ಣೂರ
ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ಉತ್ತಮ ಪರಿಸರ ಹಾಗೂ ಕ್ರೀಡೆ ಅವಶ್ಯಕವಾಗಿದೆ : ಕೆ.ಎನ್ ವಣ್ಣೂರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 22 :
ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ಉತ್ತಮ ಪರಿಸರ ಹಾಗೂ ಕ್ರೀಡೆ ಅವಶ್ಯಕವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕೆ.ಎನ್ ವಣ್ಣೂರ ಹೇಳಿದರು.
ಅವರು ಬುಧವಾರದಂದು ನಗರದ ನೇತಾಜಿ ಎಜ್ಯುಕೇಶನಲ್ ಮತ್ತು ಸೋಶಿಯಲ್ ವೆಲ್‍ಫೆಯರ್ ಸೊಸೈಟಿಯ ಭಾರತೀಯ ವಿದ್ಯಾ ಮಂದಿರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕ್ರೀಡಾ ಮತ್ತು ಸಾಂಸ್ಕøತಿಕ ವಿಭಾಗಗಳ ಪಾರಿತೋಷಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರವು ಮುಖ್ಯವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯವಾಗಿದೆ. ಸದೃಢ ಶರೀರಕ್ಕಾಗಿ ಕ್ರೀಡೆ ಮಹತ್ವದ್ದಾಗಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕರು ಶ್ರಮಿಸಬೇಕು. ಗೋಕಾಕ ನಗರವು ಕ್ರೀಡೆ ಹಾಗೂ ಸಾಂಸ್ಕøತಿಕವಾಗಿ ರಾಷ್ಟ್ರ,ಅಂತರ್ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸುವ ಮೂಲಕ ಶಿಕ್ಷಣ ಸಂಸ್ಥೆಗಳ ಪ್ರಗತಿ ಸಾಧ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚಿದಾನಂದ ದೇಮಶೆಟ್ಟಿ ವಹಿಸಿದ್ದರು. ವೇದಿಕೆ ಮೇಲೆ ಜಿ.ಪಂ ಉಪವಿಭಾಗದ ಕಿರಿಯ ಅಭಿಯಂತರಾದ ಶಿವಲಿಂಗ ಪಾಟೀಲ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಬಿ. ಜರತಾರಕರ, ಕಾರ್ಯದರ್ಶಿ ಎಸ್.ಎಮ್.ವಡೇರ, ಸದಸ್ಯರಾದ ಜಿ.ವಿ.ಝಂವರ, ಎಸ್.ಜಿ.ತಾಂವಶಿ, ರಾಜು ಕಲ್ಲೋಳ್ಳಿ,ವಿನೋದ ಝಂವರ, ವಿಶಾಲ ಜರತಾರಕರ, ಮುಖ್ಯೋಪಾದ್ಯಾಯಿನಿಯರಾದ ಬಿ.ಎಸ್.ಹುಬ್ಬಳ್ಳಿ, ವಾಯ್.ಎನ್. ನಣದೀಕರ ಇದ್ದರು.
ಕಾರ್ಯಕ್ರಮವನ್ನು ಎಲ್.ಎ.ವಕ್ಕುಂದ ಸ್ವಾಗತಿಸಿದರು. ಆರ್.ಎಂ.ನುಚ್ಚಿ ನಿರೂಪಿಸಿದರು. ಎಸ್.ಎ.ಸರಕಾವಸ ವಂದಿಸಿದರು.