RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕ, ಶಿಕ್ಷಕರ ಮೇಲಿದೆ : ಸಿದ್ದಾರ್ಥ

ಗೋಕಾಕ:ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕ, ಶಿಕ್ಷಕರ ಮೇಲಿದೆ : ಸಿದ್ದಾರ್ಥ 

ಮಕ್ಕಳನ್ನು ಪ್ರೋತ್ಸಾಹಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕ, ಶಿಕ್ಷಕರ ಮೇಲಿದೆ : ಸಿದ್ದಾರ್ಥ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 23 :

 

 

ಎಲ್ಲ ಮಕ್ಕಳಲ್ಲೂ ಪ್ರತಿಭೆಗಳು ಇದ್ದು ಅವರಲ್ಲಿರುವ ಸುಪ್ತಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಸತೀಶ ಶುಗರ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ವಾಡೆನ್ನವರ ಹೇಳಿದರು.
ಬುಧವಾರದಂದು ನಗರದ ಸಾಯಿ ಎಜುಕೇಶನ್ ಸೊಸಾಯಿಟಿಯ ಶ್ರೀ ಸಾಯಿ ವಿದ್ಯಾಚೇತನ ಶಾಲೆ ಮತ್ತು ಕ್ರೀಯೇಟಿವ್ ಕಿಡ್ಸ್ ಕ್ಯಾಂಪ್ಸ್‍ನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ, ಅವರಿಗೆ ಶಿಕ್ಷಣದೊಂದಿಗೆ ಉತ್ತಮ ಆಚಾರ-ವಿಚಾರ, ಸಂಸ್ಕಾರಗಳನ್ನು ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ ಸಲಹೆ ನೀಡಿದ ಅವರು ಸಂಸ್ಥೆ, ಶಿಕ್ಷಕರು ಹಾಗೂ ಪಾಲಕರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯ ನಿರ್ವಹಿಸಿ ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿ ಮಾಡುವಂತೆ ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಡಾ: ಬಿ.ಎಸ್.ಮದಭಾಂವಿ ಮಾತನಾಡಿ ಪಾಲಕರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಿ ಅವರ ಆರೋಗ್ಯ ರಕ್ಷಣೆಗೆ ವೈದ್ಯರ ಸಲಹೆಯೊಂದಿಗೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಕರು ಮಕ್ಕಳ ಜ್ಞಾನಮಟ್ಟ ಹೆಚ್ಚಿಸುವಂತಹ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬೇಕು. ಶಾಲೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಮಹಾತ್ಮರ ಭಾವಚಿತ್ರಗಳನ್ನು ಹಾಕಿ ಮಕ್ಕಳಿಗೆ ದೇಶಾಭಿಮಾನ ಬೆಳೆಸಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಗಣ್ಯರಾದ ಮಹಾಂತೇಶ ತಾಂವಶಿ, ಜಿ.ಬಿ.ಬಳಗಾರ, ಡಾ: ಮುತ್ತಣ್ಣಾ ಬಾವಲತ್ತಿ, ಸಂಸ್ಥೆಯ ಅಧ್ಯಕ್ಷ ಪ್ರಶಾಂತ ಕುರಬೇಟ, ಪದಾಧಿಕಾರಿಗಳಾದ ಕಿಶೋರ ಭಟ, ಮಹಾಂತೇಶ ವಾಲಿ, ರಜನಿ ಜೀರಗ್ಯಾಳ, ಡಾ: ಆರ್.ಬಿ ಪಟಗುಂದಿ, ಅಖಿಲ ಓಸ್ವಾಲ, ಆರ್.ಡಿ.ಕಿತ್ತೂರ, ಜಯಪ್ರಕಾಶ ವಾಲಿ, ಮಹೇಶ್ವರಿ ತಾಂವಶಿ, ರಾಮಚಂದ್ರ ಕಾಕಡೆ, ಶೈಲಾ ಕೊಕ್ಕರಿ, ಮುಖ್ಯೋಪಾಧ್ಯಾಯಿನಿ ಶಿಲ್ಪಾ ಮುಜಾವರ, ಮುಖ್ಯಸ್ಥೆ ಝೈಬಾ ಎಲ್ಲಾಹೆನ್, ವಿದ್ಯಾರ್ಥಿ ಪ್ರತಿನಿಧಿಗಳಾದ ಕವಿತಾ ಹರಾಮಕರ, ಜಮಾಲಸಾಬ ಸನದಿ ಇದ್ದರು.

Related posts: