RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ನೋ-ಪ್ಲಾಸ್ಟಿಕ್ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ

ಘಟಪ್ರಭಾ:ನೋ-ಪ್ಲಾಸ್ಟಿಕ್ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ 

ನೋ-ಪ್ಲಾಸ್ಟಿಕ್ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 25 :

 
ಸಮೀಪದ ಗಣೇಶವಾಡಿ ಗ್ರಾಮದಲ್ಲಿ ಲತಾ ಚಾರಿಟೇಬಲ್ ಟ್ರಸ್ಟ್ ಹೈದ್ರಾಬಾದ ಹಾಗೂ ಶಾರೋನ್ ಟ್ರಸ್ಟ್ ಮಲ್ಲಾಪೂರ ಪಿ.ಜಿ ಇವುಗಳ ಸಂಯುಕ್ತಾಶ್ರಯದಲ್ಲಿ ನೋ-ಪ್ಲಾಸ್ಟಿಕ್ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭದಕ್ಕೆ ಮುಖ್ಯ ಅತಿಥಿಗಳಾಗಿ ಆಗಿಮಿಸಿದ ಪ್ರಭಾ ಶುಗರ್ಸ್ ನಿರ್ದೇಶಕ ಶಿವಲಿಂಗ ಪೂಜೇರಿ ಮಾತನಾಡಿ, ಅತೀಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ನಾವು ನಮ್ಮ ದಿನ ನಿತ್ಯದ ಕೆಲಸಗಳಿಗೆ ಪ್ಲಾಸ್ಟಿಕ್ ಬದಲು ಬಟ್ಟೆಯ ಚೀಲಗಳನ್ನು ಉಪಯೋಸಬೇಕೆಂದು ಹೇಳಿದರು.
ಲತಾ ಚಾರಿಟೇಬಲ್ ಟ್ರಸ್ಟ್‍ನ ಮುಖ್ಯಸ್ಥ ಜೈಪಾಲ ನಾಯಕ ಮಾತನಾಡಿ, ಕೇಂದ್ರ ಸರ್ಕಾರ ಪರಿಸರ ರಕ್ಷಣೆ ಹಾಗೂ ನಮ್ಮ ಆರೋಗ್ಯದ ಹಿತ ದೃಷ್ಠಿಯಿಂದ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿದೆ. ನಾವು ಸಾಧ್ಯವಾದಷ್ಟು ಪ್ಲಾಸಟಿಕ್ ಚೀಲ ಮತ್ತು ಪ್ಲಾಸ್ಟಿಕ್‍ನಿಂದ ತಯಾರಿಸಲಾದ ವಸ್ತುಗಳನ್ನು ಬಳಸಬಾರದು ಎಂದು ಹೇಳಿದರು.
ಸಂಸ್ಥೆಗಳಿಂದ ಜನರಿಗೆ ಬಟ್ಟೆಯ ಬ್ಯಾಗಗಳನ್ನು ಉಚಿತವಾಗಿ ವಿತರಿಸುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು. ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಪತಿ ಗಣೇಶವಾಡಿ, ಸಿದ್ರಾಮ ಮೂಲಿಮನಿ, ಶಾರೋನ ಟ್ರಸ್ಟ್‍ನ ಅಧ್ಯಕ್ಷ ಯಲ್ಲಪ್ಪ ಸಂಗರೋಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: