RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಿಎಎ , ಎನ್.ಆರ್.ಸಿ ಕಾಯ್ದೆಗಳನ್ನು ವಿರೋಧಿಸಿ ದಲಿತ ಸಂಘಟನೆಗಳಿಂದ ಮನವಿ

ಗೋಕಾಕ:ಸಿಎಎ , ಎನ್.ಆರ್.ಸಿ ಕಾಯ್ದೆಗಳನ್ನು ವಿರೋಧಿಸಿ ದಲಿತ ಸಂಘಟನೆಗಳಿಂದ ಮನವಿ 

ಸಿಎಎ , ಎನ್.ಆರ್.ಸಿ ಕಾಯ್ದೆಗಳನ್ನು ವಿರೋಧಿಸಿ ದಲಿತ ಸಂಘಟನೆಗಳಿಂದ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 29 :

 

ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ಜಾರಿಗೆ ತಂದ ಸಿಎಎ,ಎನ್‍ಪಿಆರ್ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನು ಕೈ ಬಿಡಬೇಕೆಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ದಲಿತ ಸಂಘರ್ಷ ಸಮಿತಿ ಕರ್ನಾಟಕ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯ ಮೂಲಕ ತಹಶೀಲ್ದಾರ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.
ಸರ್ವಧರ್ಮಿಯರನ್ನು ಪ್ರೀತಿಸುವ ಭಾರತ ದೇಶದಲ್ಲಿ ಎಲ್ಲ ಸಮುದಾಯದವರು ಪರಸ್ಪರ ಪ್ರೀತಿ ವಿಶ್ವಾಸದಿಂದ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಾ ದಲಿತ,ಅಲ್ಪಸಂಖ್ಯಾತ, ಕ್ರೈಸ್ತ, ಪಾರ್ಶಿ,ಸಿಖ್ ಜೈನ ಸಮುದಾಯಗಳ ಮೇಲೆ ಹಲ್ಲೆ ಒಂದೆಡೆಯಾದರೇ ಅವೈಜ್ಞಾನಿಕ ಕನೂನುಗಳ ಜಾರಿಯ ಮೂಲಕ ದೇಶದ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದು ಕೂಡಲೇ ಸಿಎಎ,ಎನ್‍ಪಿಆರ್ ಹಾಗೂ ಎನ್‍ಆರ್‍ಸಿ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸತ್ತೇಪ್ಪ ಕರವಾಡೆ, ರಮೇಶ ಮಾದರ, ಲಕ್ಷ್ಮಣ ತೆಳಗಡೆ, ಕಾಡಪ್ಪ ಮೇಸ್ತ್ರೀ, ಅಲ್ಲಾಭಕ್ಷ ಮುಲ್ಲಾ, ಸುಧಾ ಮುರಕುಂಬಿ, ದೊಡ್ಡವ್ವ ಕೆಳಗೇರಿ, ಬಾಳೇಶ ಸಂತವ್ವಗೋಳ, ಗೀತಾ ಸಣ್ಣಕ್ಕಿ, ಮನೋಹರ ಅಜ್ಜನಕಟ್ಟಿ, ಸೇರಿದಂತೆ ಅನೇಕರು ಇದ್ದರು.

Related posts: