RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಮುಖ್ಯೋಪಾಧ್ಯಾಯ ಅನಿಗೋಳನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಗೋಕಾಕದಲ್ಲಿ ಘಟನೆ

ಗೋಕಾಕ:ಮುಖ್ಯೋಪಾಧ್ಯಾಯ ಅನಿಗೋಳನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಗೋಕಾಕದಲ್ಲಿ ಘಟನೆ 

ಮುಖ್ಯೋಪಾಧ್ಯಾಯ ಅನಿಗೋಳನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ : ಗೋಕಾಕದಲ್ಲಿ ಘಟನೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 29 :

 

ಇಲ್ಲಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ 13 ಜನ ವಿದ್ಯಾರ್ಥಿಗಳನ್ನು ಬಾಸುಂಡೆ ಬರುವಂತೆ ಥಳಿಸಿದ ಘಟನೆ ಜರುಗಿದೆ.
ನಗರದ ಶರ್ಫಡ ಮಿಶನ್ ಶಾಲೆಯ ಮುಖ್ಯೋಪಾಧ್ಯಾಯ ಸಂದೀಪ ಅನಿಗೋಳ ಇತನು 6 ನೇಯ ತರಗತಿಯ ವಿದ್ಯಾರ್ಥಿಗಳಾದ ರುಜೇನ ನೇಗಿನಾಳ , ನಿಲಕಂಠ ಹುಕ್ಕೇರಿ , ನಿಹಾಲ ಜಕಾತಿ, ಶಾಹಿರಾಜ ಪಾಸಲಕರ ಅಕಿಲ ಕಲ್ಲೋಳಿ , ಲೋಹಿತ ಗುಡೇರ , ಆದಿತ್ಯ ಜೊಗ್ಗನವರ , ಆದಿತ್ಯ ಕಂಕಣವಾಡಿ, ವಾಸಿಂ ಮುಲ್ಲಾ, ಅನಿಲ ಯಲ್ಲವಗೋಳ ,ವಿರೇಶ ಮಕ್ಕಳಗೇರಿ, ಶ್ರೇಯಶ್ ಹಟ್ಟಿ ಸೇರಿದಂತೆ 13 ವಿದ್ಯಾರ್ಥಿಗಳನ್ನು ಬಾಸುಂಡೆ ಬರುವಂತೆ ಕೈ ಹಾಗೂ ಬೂಟಿನಿಂದ ಹೊಡೆದು ಅರೆಬೆತ್ತಲೆ ಮಾಡಿ ಮೋನಕಾಲಿನ ಮೇಲೆ ನಡೆಯಿಸಿ ಗಾಯ ಗೊಳಿಸಿದ್ದಾನೆಂದು ಹೇಳಲಾಗಿದೆ. ಈ ಬಗ್ಗೆ ಪಾಲಕರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅವಶ್ಯಕ ಕ್ರಮ ಕೈಗೋಳುವಂತೆ ಆಗ್ರಹಿಸಿದ್ದು ಈ ಸುದ್ದಿ ನಗರದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರುತ್ತದೆ.

 

ಈ ಹಿಂದೆಯು ಕೂಡಾ ಹಿಂತಹ ಘಟನೆಗಳು ಜರುಗಿದ್ದು , ಇದರ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನ ಹರಿಸಿ ತಪ್ಪಿಸ್ಥ ಮುಖ್ಯೋಪಾಧ್ಯಾಯನ ಕಠಿಣ ಕ್ರಮ ಕೈಗೋಳಬೇಕೆಂದು ಪಾಲಕರ ಆಗ್ರಹವಾಗಿದೆ.


ಈ ಘಟನೆಯ ಕುರಿತು ಪ್ರತಿಕ್ರೀಯೆ ನೀಡಿರುವ ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ ಅವರು ಮಕ್ಕಳ ಮೇಲೆ ದೌರ್ಜನ್ಯ ವೆಸಗುವದು ತಪ್ಪು ಈ ಘಟನೆ ಕುರಿತು ಪರಿಶೀಲನೆ ನಡೆಯಿಸಿ ತಪ್ಪಿಸ್ಥ ಮುಖ್ಯೋಪಾಧ್ಯಾಯನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವದು

Related posts: