RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಫೆ.1ರಂದು ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ: ಎಸ್‍ಪಿಬಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ : ಈರಣ್ಣ ಕಡಾಡಿ

ಗೋಕಾಕ:ಫೆ.1ರಂದು ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ: ಎಸ್‍ಪಿಬಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ : ಈರಣ್ಣ ಕಡಾಡಿ 

ಫೆ.1ರಂದು ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ: ಎಸ್‍ಪಿಬಿಗೆ ಕಾಯಕಶ್ರೀ ಪ್ರಶಸ್ತಿ ಪ್ರದಾನ : ಈರಣ್ಣ ಕಡಾಡಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 30 :

 

 

ನಗರದ ಶೂನ್ಯ ಸಂಪಾದನ ಮಠದಲ್ಲಿ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭವು ಫೆ.1ರಿಂದ 4ರವರೆಗೆ ಅತೀ ವಿಜೃಂಭನೆಯಿಂದ ಜರುಗಲಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ ಹೇಳಿದರು.
ಅವರು ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ 15ನೇ ಶರಣ ಸಂಸ್ಕೃತಿ ಉತ್ಸವದ ನಿಮಿತ್ಯ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಫೆ ದಿ.1ರಂದು ಸಂಜೆ 5 ಗಂಟೆಗೆ ಶ್ರೀಮಠದಿಂದ ನೀಡುವ ಕಾಯಕಶ್ರೀ ಈ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲ ತಾಂಬೂಲಗಳನ್ನು ಒಳಗೊಂಡ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿ ಗೌರವಿಸಲಾಗುವುದು. ಮುಂಜಾನೆ ನಗರದ ವಿದ್ಯಾರ್ಥಿಗಳಿಂದ ಅರಿವು,ಶಿಕ್ಷಣ,ಆರೋಗ್ಯ ಕಾಲ್ನಡಿಗೆ ಜಾಥಾ ಜರುಗಲಿದ್ದು ನಂತರ ಘಟಸ್ಥಲ ಧ್ವಜಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ರೈತ ಸಮಾವೇಶ ಜರುಗಲಿದ್ದು ಸಮಾವೇಶವನ್ನು ಐಎಎಸ್ ಅಧಿಕಾರಿ ಡಾ: ಅಶೋಕ ದಳವಾಯಿ ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಜಿ ಹಾಗೂ ಬೆಳಗಾವಿ ರುದ್ರಾಕ್ಷಿಮಠದ ಡಾ: ಅಲ್ಲಮಪ್ರಭು ಮಹಾಸ್ವಾಮಿಜಿ ವಹಿಸುವರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ.
ಫೆ.ದಿ.2ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಮಾವೇಶ ಜರುಗಲಿದ್ದು ಚಿತ್ರದುರ್ಗದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಜಿ, ಮೈಸೂರಿನ ಡಾ: ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಜಿ, ಕಾಗಿನೆಲೆ ಶ್ರೀ ಕನಕ ಗುರುಪೀಠದ ಜಗದ್ಗುರು ನಿರಂಜನಾಂದಪುರಿ ಮಹಾಸ್ವಾಮಿಜಿ, ಹರಿಹರದ ಜಗದ್ಗುರು ವೇಮನಾನಂದ ಮಹಾಸ್ವಾಮಿಜಿ, ಚಿತ್ರದುರ್ಗದ ಜಗದ್ಗುರು ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮಿಜಿ ಹಾಗೂ ಜಗದ್ಗುರು ಬಸವಮಾಚಿದೇವ ಮಹಾಸ್ವಾಮಿಜಿ, ಹೊಸದುರ್ಗದ ಭಗೀರಥ ಗುರುಪೀಠದ ಜಗದ್ಗುರು ಡಾ: ಪುರುಷೋತ್ತಮಾನಂದಪುರಿ ಮಹಾಸ್ವಾಮಿಜಿ, ಚಿತ್ರದುರ್ಗದ ಜಗದ್ಗುರು ಡಾ: ಬಸವಕುಮಾರ ಸ್ವಾಮಿಜಿ ಆಗಮಿಸುವರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ.
ಫೆ.ದಿ,3ರಂದು ಸಂಜೆ 6 ಗಂಟೆಗೆ ಶ್ರೀಮಠದಿಂದ ನೀಡುವ ಕಾಯಕಶ್ರೀ ಈ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲ ತಾಂಬೂಲಗಳನ್ನು ಒಳಗೊಂಡ ಕಾಯಕಶ್ರೀ ಪ್ರಶಸ್ತಿಯನ್ನು ಮಹಿಳಾ ವಿಜ್ಞಾನಿ ಭಾರತದ ಕ್ಷಿಪಣಿ ಮಹಿಳೆ ಎಂದು ಪ್ರಸಿದ್ದಿ ಪಡೆದ ಡಾ. ಟೆಸ್ಸಿ ಥಾಮಸ್ ಅವರಿಗೆ ನೀಡಿ ಗೌರವಿಸಲಾಗುವುದು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ.
ಫೆ.4ರಂದು ಮುಂಜಾನೆ ಶ್ರೀಮಠದ ಕರ್ತೃ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ, ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಫಲ್ಲಕ್ಕಿ ಉತ್ಸವ, ಕುಂಭಮೇಳ, ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ. ಸಂಜೆ 6 ಗಂಟೆಗೆ ಯುವ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯ ಇಳಕಲ್ ವಿಜಯಮಹಾಂತೇಶ್ವರ ಮಹಾಸಂಸ್ಥಾನಮಠದ ಗುರು ಮಹಾಂತ ಮಹಾಸ್ವಾಮಿಜಿ ವಹಿಸುವರು. ಶಿಗ್ಗಾಂವದ ಶ್ರೀ ಸಂಗನಬಸವ ಸ್ವಾಮಿಜಿ, ಮಹಾಗಾಂವದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ ಆಗಮಿಸುವರು. ವಿಹಿಂಪ ರಾಷ್ಟ್ರ ಸೇವಕ ಗೋಪಾಲಜೀ ಇವರಿಂದ ಉಪನ್ಯಾಸ ಜರುಗಲಿದೆ. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ ಎಂದು ತಿಳಿಸಿದರು.
“ಶ್ರೀಮಠದಿಂದ ನೀಡುವ ಕಾಯಕಶ್ರೀ ಈ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲ ತಾಂಬೂಲಗಳನ್ನು ಒಳಗೊಂಡ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಖ್ಯಾತ ಹಿನ್ನಲೆ ಗಾಯಕ, ಪದ್ಮಭೂಷಣ ಡಾ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಫೆ.2ರಂದು ನೀಡಿ ಗೌರವಿಸಲಾಗುವದು ಎಂದು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು ಕಾರಣಾಂತರಗಳಿಂದ ಅವರಿಗೆ ಫೆ.1ರಂದು ಕಾಯಕಶ್ರೀ ಪ್ರಶಸ್ತಿ ನೀಡಲಾಗುವುದು. ಶ್ರೀಮಠದ ಭಕ್ತರು, ಅಭಿಮಾನಿಗಳು, ಗಣ್ಯರು ಪಾಲ್ಗೊಳ್ಳಬೇಕು “.
ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ

ಈ ಸಂದರ್ಭದಲ್ಲಿ ಶೂನ್ಯ ಸಂಪಾದನಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹಾಗೂ ಮುಖಂಡರುಗಳಾದ ವಿವೇಕ ಜತ್ತಿ, ಮಹಾಂತೇಶ ವಾಲಿ, ಮಲ್ಲಿಕಾರ್ಜುನ ಈಟಿ, ಡಾ.ಸಿ.ಕೆ ನಾವಲಗಿ, ಬಸನಗೌಡ ಪಾಟೀಲ, ಡಾ: ವಿಶ್ವನಾಥ ಶಿಂಧೋಳಿಮಠ, ಶ್ರೀಮತಿ ರಾಜೇಶ್ವರಿ ಬೆಟ್ಟದಗೌಡ ಸೇರಿದಂತೆ ಅನೇಕರು ಇದ್ದರು.

Related posts: