RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಪರೋಪಕಾರಿಯಾಗಿರುವ ವೃಕ್ಷಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ :ಜಾಥಾಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಶ್ರೀ ಅಭಿಮತ

ಗೋಕಾಕ:ಪರೋಪಕಾರಿಯಾಗಿರುವ ವೃಕ್ಷಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ :ಜಾಥಾಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಶ್ರೀ ಅಭಿಮತ 

ಜಾಪರೋಪಕಾರಿಯಾಗಿರುವ ವೃಕ್ಷಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ :ಜಾಥಾಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಶ್ರೀ ಅಭಿಮತ

ಗೋಕಾಕ ಅ 11 : ಪರೋಪಕಾರಿಯಾಗಿರುವ ವೃಕ್ಷಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧವಾಗಬೇಕಾಗಿದೆ ಎಂದು ಘಟಪ್ರಭಾ ಗುಬ್ಬಲಗುಡ್ಡ ಮಠದ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

ಅವರು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕ ಘಟಕ, ವಿವಿಧ ಸಂಘ ಸಂಸ್ಥೆಗಳು ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮದ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಫಲಾಫೇಕ್ಷವಿಲ್ಲದೆ ಮನುಕುಲಕ್ಕೆ ಬದುಕಲ್ಲಿಕ್ಕೆ ಒಳ್ಳೆಯ ಗಾಳಿ, ಒಳ್ಳೆಯ ವಾತಾವರಣ ಉಸಿರಾಡಲಿಕ್ಕೆ ಆಮ್ಲಜನಕ ನೀಡಿ ಪರೋಪಕಾರಿಯಾದ ವೃಕ್ಷಗಳನ್ನು ಕಾಪಾಡಬೇಕಾಗಿದೆ ಬರುವ ಅಗಸ್ಟ 13ರಂದು ನಡೆಯುವ ಏಕಕಾಲಕ್ಕೆ 25 ಸಾವಿರ ಸಸಿ ನೆಡುವ ಕಾರ್ಯ ಅನುಕರನೀಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಮಾಣೀಕವಾಗಿ ಕಾರ್ಯಪ್ರವೃತ್ತರಾಗಬೇಕೆಂದು ಶ್ರೀಗಳು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ ಶೂನ್ಯ ಸಂಪದನಾ ಮಠದ ಮುರಘರಾಜೇಂದ್ರ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಜಾಥಾದಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಕ.ರ.ವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಿ. ದೇವರಾಜ, ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ, ನಗರಸಭೆ ಪೌರಾಯುಕ್ತ ಚಿನ್ನಪ್ಪಗೌಡರ,ಕಾರ್ಮಿಕ ನಿರೀಕ್ಷಕ ಮಾವರಕರ ವಲಯ ಅರಣ್ಯ ಅಧಿಕಾರಿ ಉಪ್ಪಾರ, ಹಿರಿಯ ಸಾಹಿತಿ ಡಾ. ಸಿ.ಕೆ. ನಾವಲಗಿ ನಗರಸಭೆ ಸದಸ್ಯರುಗಳಾದ ಪರಶುರಾಮ ಭಗತ, ಸ್ಥಾಯಿ ಸಮೀತಿ ಅಧ್ಯಕ್ಷ ಹುರಳಿ, ಎ.ಪಿ.ಎಂ.ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ದೈಹಿಕ ಶಿಕ್ಷಣಾಧಿಕಾರಿ ಸುಳೇಗಾಂವಿ, ವ್ಯವಸ್ಥಾಪಕ ಎಂ.ಎಚ್. ಅತ್ತಾರ, ತಾಂಬೋಳಿ, ಕೋಳಿ, ಕ.ರ.ವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷೆ ಶ್ರೀಮತಿ ಯಶೋಧಾ ಬಿರಡಿ, ಕರ್ನಾಟಕ ಯುವಸೇನೆ ತಾಲೂಕಾಧ್ಯಕ್ಷ ಸಂತೋಷ ಖಂಡ್ರಿ, ಜಿ.ಸಿ.ಐ ಸಂಘಟನೆ ಕೆಂಪಣ್ಣಾ ಚಿಂಚಲಿ, ಗುರುರಾಜ ನಿಡೋಣಿ, ವೃತ್ತಿ ನಿರತ ಛಾಯಾಗ್ರಾಹಕ ಸಂಘದ ರವಿ ಉಪ್ಪಿನ, ಕೆ. ಮಲ್ಲಿಕಾರ್ಜುನ, ಕ.ರ.ವೇ ಪದಾಧಿಕಾರಿಗಳಾದ ಸಾಧಿಕ ಹಲ್ಯಾಳ, ದೀಪಕ ಹಂಜಿ, ಕೃಷ್ಣಾ ಖಾನಪ್ಪನವರ, ಹನೀಫಸಾಬ ಸನದಿ, ನಿಜಾಮ ನದಾಫ, ಮುಗಟ ಪೈಲವಾನ, ರಮೇಶ ಕಮತಿ, ನಿಯಾಜ ಪಟೇಲ, ಮಲ್ಲಪ್ಪ ತಲೆಪ್ಪಗೋಳ, ಕೆಂಪಣ್ಣಾ ಕಡಕೋಳ, ಲಕ್ಕಪ್ಪ ನಂದಿ, ರಮೇಶ ಮೇಸ್ತ್ರಿ, ಬಸು ಗಾಡಿವಡ್ಡರ, ಶಾನೂಲ ದೇಸಾಯಿ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿದ್ದರು

Related posts: