ಘಟಪ್ರಭಾ:ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ವೈದ್ಯರ ಮೇಲಿದೆ : ಡಿ.ಟಿ.ಪ್ರಭು
ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ವೈದ್ಯರ ಮೇಲಿದೆ : ಡಿ.ಟಿ.ಪ್ರಭು
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 31 :
ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ವೈದ್ಯರ ಮೇಲಿದೆ. ಯುವ ವೈದ್ಯರು ತಮ್ಮ ವೃತ್ತಿಯ ಜೊತೆಗೆ ಗ್ರಾಮೀಣ ಭಾಗದ ಜನರ ಸೇವೆಗೆ ಮುಂದಾಗಬೇಕೆಂದು ಗೋಕಾಕ ಡಿ.ವೈ.ಎಸ್.ಪಿ ಡಿ.ಟಿ.ಪ್ರಭು ಹೇಳಿದರು.
ಅವರು ಗುರುವಾರ ಸಂಜೆ ಸ್ಥಳೀಯ ಜೆ.ಜಿ ಸಹಕಾರಿ ಆಸ್ಪತ್ರೆಯ ಶ್ರೀ ಬಿ.ಆರ್.ಪಾಟೀಲ ಆಯುರ್ವೇದಿಕ ಮೇಡಿಕಲ್ ಕಾಲೇಜಿನ 19ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತ, ಶಿಕ್ಷಣವು ಪ್ರತಿಯೊಬ್ಬರಿಗೆ ಮುಖ್ಯವಾಗಿದೆ. ವೈದಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಭವಿಷÀ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಸಮಾಜಿಕ ಜೀವನದ ಜೊತೆಗೆ ವೃತ್ತಿ ಜೀವನದÀಲ್ಲಿ ಕೂಡಾ ಕಾನೂನು ಪಾಲನೆಯನ್ನು ಮಾಡಬೇಕು. ವಿದ್ಯಾವಂತ ಯುವಕರು ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವದರೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕೆಂದು ಹೆÉೀಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್.ಪಾಟೀಲ(ನಾಗನೂರ) ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ ವರದಿವಾಚನ ಮಾಡಿದರು. ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ವೇದಿಕೆ ಮೇಲೆ ಘಟಪ್ರಭಾ ಪಿ.ಎಸ್.ಐ ಹಾಲಪ್ಪ ಬಾಲದಂಡಿ, ಬೈಲಹೊಂಗಲ ಕಾಲೇಜಿನ ಪ್ರಾಂಶುಪಾಲ ಸುಭಾಸ ಬಾಗಡೆ, ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಕರಲಿಂಗನವರ, ನಿರ್ದೇಶಕರಾದ ಅಪ್ಪಯ್ಯಾ ಬಡಕುಂದ್ರಿ, ಚಂದ್ರಶೇಖರ ಕಾಡದವರ, ಸುರೇಶ ಕಾಡದವರ, ಆರ್.ಟಿ.ಶಿರಾಳಕರ, ಶಿವನಗೌಡಾ ಪಾಟೀಲ, ಎಸ್.ಎಂ.ಚಂದರಗಿ, ಬಿ.ಎಂ.ಬಂಡಿ, ಎಸ್.ಎಸ್.ದಳವಾಯಿ, ಆರ್.ಜೆ.ಪತ್ತಾರ, ಆಶಾದೇವಿ ಕತ್ತಿ, ಪೂಜಾ ಇನಾಮದಾರ, ಸಿಇಓ ಬಿ.ಕೆ.ಎಚ್ ಪಾಟೀಲ, ಡಾ.ಶೋಭಾ ಇಟ್ನಾಳ, ಡಾ.ಹೊಸಮಠ, ಮ್ಯಾನೇಜರ ಎಲ್.ಎಸ್.ಹಿಡಕಲ್ ಸೇರಿದಂತೆ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.