ಗೋಕಾಕ:ಕನ್ನಡ ಕಾವ್ಯದ ಕಂಪನ್ನು ಗಟ್ಟಿಗೊಳಿಸಿದವರಲ್ಲಿ ವರಕವಿ ಬೇಂದ್ರೆಯವರು ಪ್ರಮುಖರಾಗಿದೆ : ಜಯಾನಂದ ಮಾದರ
ಕನ್ನಡ ಕಾವ್ಯದ ಕಂಪನ್ನು ಗಟ್ಟಿಗೊಳಿಸಿದವರಲ್ಲಿ ವರಕವಿ ಬೇಂದ್ರೆಯವರು ಪ್ರಮುಖರಾಗಿದೆ : ಜಯಾನಂದ ಮಾದರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 31 :
ಕನ್ನಡ ಕಾವ್ಯದ ಕಂಪನ್ನು ಗಟ್ಟಿಗೊಳಿಸಿದವರಲ್ಲಿ ವರಕವಿ ಬೇಂದ್ರೆಯವರು ಪ್ರಮುಖರಾಗಿದ್ದು, ಉತ್ತರ ಕರ್ನಾಟಕ ಗ್ರಾಮೀಣ ಸೊಗಡನ್ನು ಅವರ ಕವಿತೆಗಳಲ್ಲಿ ಸಮೃದ್ಧವಾಗಿ ಬಳಸಿಕೊಂಡಿದ್ದಾರೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಜಯಾನಂದ ಮಾದರ ಹೇಳಿದರು.
ಅವರು, ತಾಲೂಕಿನ ನಂದಗಾಂವ-ಸಾವಳಗಿ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಕಾವ್ಯಕೂಟ ಕನ್ನಡ ಬಳಗದ ರಾಜ್ಯ ವೇದಿಕೆ ಆಶ್ರಯದಲ್ಲಿ ಜರುಗಿದ ವರಕವಿ ದ ರಾ ಬೇಂದ್ರೇಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡುತ್ತಿದ್ದರು.
ನೋವು, ನಲಿವು, ನಿಸರ್ಗ ಇವುಗಳನ್ನೆ ಬಳಸಿಕೊಂಡು ಬರೆದ ಅವರ ಕವಿತೆಗಳು ಸುಂದರವಾಗಿದ್ದು ಇಂದಿಗೂ ಜನ ಮಾನಸದಲ್ಲಿ ಜೀವಂತವಾಗಿವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾವಿದ ಬಿ ಪಿ ಕಬಾಡಗಿ ಅವರು ಮಾತನಾಡಿ, ಕಾವ್ಯಕೂಟವು ಕನ್ನಡ ಪರವಾದ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾವ್ಯಕೂಟ ಕನ್ನಡ ಬಳಗದ ಅಧ್ಯಕ್ಷರಾದ ಈಶ್ವರ ಮಮದಾಪೂರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಿತ್ಯದ ಕಲಿಕೆಯ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕøತಿಯ ಪರಿಚಯ ಮಾಡಿಕೊಡುವುದು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ನಾಡಿನ ಮಹನೀಯರನ್ನು ಪರಿಚಯಿಸುವ ಕಾರ್ಯವನ್ನು ಕಾವ್ಯಕೂಟದಿಂದ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಜಯಾನಂದ ಮಾದರ ಇವರನ್ನು ಸನ್ಮಾನಿಸಲಾಯಿತು. ಹಾಗೂ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಶೃದ್ದಾ ಗ್ರಂಥಾಲಯಕ್ಕೆ ಕಾವ್ಯಕೂಟ ಬಳಗದಿಂದ ಪುಸ್ತಕಗಳನ್ನು ದೇಣಿಗೆ ನಿಡಲಾಯಿತು.
ವೇದಿಕೆಯ ಮೇಲೆ ಕರ್ನಾಟಕ ಯುವಸೇನೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ವಿಠ್ಠಲ ಕುಂಬಾರ, ಅಂಗನವಾಡಿ ಕಾರ್ಯಕರ್ತೆಯರಾದ ತಾಯವ್ವಾ ಮಡಿವಾಳರ, ಸರಸ್ವತಿ ಪತ್ತಾರ, ರುದ್ರವ್ವಾ ರುಸ್ತಾಂಪುರ, ಹಾಗೂ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಾಸ್ತಾವಿಕವಾಗಿ ಶಿಕ್ಷಕ ಮಹೇಶ ಪತ್ತಾರ ಮಾತನಾಡಿದರು ಶಿಕ್ಷಕ ಜೀನಪ್ಪ ಪಲ್ಲೇದ ಸ್ವಾಗತಿಸಿ ವಂದಿಸಿದರು.