RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಕನ್ನಡಿಗರು ನೀಡಿದ ಪ್ರೀತಿ ವಾತ್ಸಲ್ಯ ಬೇರೆ ಯಾರಿಂದಲು ನಿರಿಕ್ಷಿಸಲು ಸಾಧ್ಯವಿಲ್ಲ : ಸಂವಾದ ಕಾರ್ಯಕ್ರಮದಲ್ಲಿ ಎಸಪಿಬಿ ಅಭಿಮತ

ಗೋಕಾಕ:ಕನ್ನಡಿಗರು ನೀಡಿದ ಪ್ರೀತಿ ವಾತ್ಸಲ್ಯ ಬೇರೆ ಯಾರಿಂದಲು ನಿರಿಕ್ಷಿಸಲು ಸಾಧ್ಯವಿಲ್ಲ : ಸಂವಾದ ಕಾರ್ಯಕ್ರಮದಲ್ಲಿ ಎಸಪಿಬಿ ಅಭಿಮತ 

ಕನ್ನಡಿಗರು ನೀಡಿದ ಪ್ರೀತಿ ವಾತ್ಸಲ್ಯ ಬೇರೆ ಯಾರಿಂದಲು ನಿರಿಕ್ಷಿಸಲು ಸಾಧ್ಯವಿಲ್ಲ : ಸಂವಾದ ಕಾರ್ಯಕ್ರಮದಲ್ಲಿ ಎಸಪಿಬಿ ಅಭಿಮತ

 

 

ನಮ್ಮ ಬೆಳಗಾವಿ ಇ – ವಾರ್ತೆ ,  ಗೋಕಾಕ ಫೆ 1 :

 

 

 

 

ಕನ್ನಡಿಗರು ನೀಡಿದ ಪ್ರೀತಿ ವಾತ್ಸಲ್ಯ ಬೇರೆ ಯಾರಿಂದಲು ನಿರಿಕ್ಷಿಸಲು ಸಾಧ್ಯವಿಲ್ಲ ಎಂದು ಖ್ಯಾತ ಹಿನ್ನಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದರು
ಶನಿವಾರದಂದು ನಗರದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಎವಹಿಸಿ ಕಾಯಕಶ್ರೀ ಪ್ರಶಸ್ತಿ ಪಡೆಯಲು ಬಂದಿದ್ದ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದಲ್ಲಿ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ವಿದ್ಯಾರ್ಥಿ ಜೀವನದಲ್ಲಿ ಎಂಜಿನಿಯರ ಆಗಬೇಕೆಂಬ ಎಂಬ ಸಂಕಲ್ಪ ಇತ್ತು ಆದರೆ ವಿಧಿ ಗಾಯಕನಾಗಿ ಬೆಳೆಸಿದೆ ಭಾರತದಲ್ಲಿ ಇರುವ 15 ಭಾಷೆಗಳಲ್ಲಿ ಹಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಬೇರೆಯವರಿಗೆ ಸಹ ಈ ವಿದ್ಯೆಯನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ . ಆಂಧ್ರದಲ್ಲಿ ಹುಟ್ಟಿ ಬೆಳೆದರು ಸಹ ನಾನು ಹಿನ್ನೆಲೆ ಗಾಯಕನಾಗಿ ಹಾಡಿದ ಎರಡೇ ಹಾಡೆ ಕನ್ನಡ , ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿವರಗೆ ನಡೆದಿದೆ. ಕನ್ನಡಗಿರು ಕೊಟ್ಟ ಪ್ರೀತಿ ವಾತ್ಸಲ್ಯ ಇಡೀ ದೇಶದಲ್ಲಿ ನನಗೆ ಸಿಕ್ಕಿಲ್ಲ ಇದನ್ನು ನಾನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಎಲ್ಲ ವಿದ್ಯಾರ್ಥಿಗಳು ಎಸ್.ಪಿ ಬಾಲಸುಬ್ರಹ್ಮಣ್ಯಂ ಜೋತೆ ಸಂವಾದ ನಡೆಸಿ ಹಲವಾರು ಪ್ರಶ್ನೆಗಳನ್ನು ಕೇಳಿ ಎಸ್.ಪಿ‌.ಬಿ ಅವರಿಂದ ಪ್ರೇರಣಾದಾಯಕ ಉತ್ತರಗಳನ್ನು ಪಡೆದುಕೊಂಡರು

ಈ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಆಡಳಿತಾಧಿಕಾರಿ ಅಡಿವೇಶ ಗವಿಮಠ ಇದ್ದರು

Related posts: