RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಅಪಘಾತದಲ್ಲಿ ಗೋಕಾಕ ಯೋಧ ಸಾವು : ಪಂಜಾಬನ ಚಂದಿಗಡದಲ್ಲಿ ಘಟನೆ

ಗೋಕಾಕ:ಅಪಘಾತದಲ್ಲಿ ಗೋಕಾಕ ಯೋಧ ಸಾವು : ಪಂಜಾಬನ ಚಂದಿಗಡದಲ್ಲಿ ಘಟನೆ 

ಅಪಘಾತದಲ್ಲಿ ಗೋಕಾಕ ಯೋಧ ಸಾವು : ಪಂಜಾಬನ ಚಂದಿಗಡದಲ್ಲಿ ಘಟನೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 2 :

 

ಗೋಕಾಕ ಫೆ 2 : ಭಾರತೀಯ ಸೇನೆಯ ಕಾರ್ಯನಿರ್ವಹಿಸುತ್ತಿದ್ದ ಗೋಕಾಕ ನಗರದ ಯೋಧನೋರ್ವ ಅಪಘಾತದಲ್ಲಿ ಸಾವನ್ನಪಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ

ರವಿಕುಮಾರ್ ಬಾಳಪ್ಪ ಬಬಲ್ಲೆನ್ನವರ (27) ಸಾವನ್ನಪಿರುವ ದುರ್ಧೈವಿಯಾಗಿದ್ದು, ಪಂಜಾಬ ರಾಜ್ಯದ ಚಂದಿಗಡ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೆಳಲಾಗಿದೆ. ಮೃತಯೋಧನ ಪಾರ್ಥೀವ ಶರೀರವು ನಾಳೆ ಹೊತ್ತಿಗೆ ಗೋಕಾಕ ನಗರ ತಲುಪಲ್ಲಿದ್ದು , ನಗರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತ ಯೋಧ ಪತ್ನಿ , ಇಬ್ಬರು ಮಕ್ಕಳು ,ತಂದೆ ,ತಾಯಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .

Related posts: