ಗೋಕಾಕ:ಗ್ರಾಮೀಣ ಭಾಗದ ಜನರಲ್ಲಿ ಹೃದಯ ವೈಶಾಲ್ಯತೆವಿದೆ : ಡಾ: ಅಶೋಕ ದಳವಾಯಿ
ಗ್ರಾಮೀಣ ಭಾಗದ ಜನರಲ್ಲಿ ಹೃದಯ ವೈಶಾಲ್ಯತೆವಿದೆ : ಡಾ: ಅಶೋಕ ದಳವಾಯಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 5 :
ಗ್ರಾಮೀಣ ಭಾಗದ ಜನರಲ್ಲಿ ಹೃದಯ ವೈಶಾಲ್ಯತೆವಿದೆ ಎಂದು ಐಎಎಸ್ ಅಧಿಕಾರಿ ಡಾ: ಅಶೋಕ ದಳವಾಯಿ ಹೇಳಿದರು.
ನಗರದ ಗುರುವಾರ ಪೇಠೆಯಲ್ಲಿರುವ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಶ್ರೀ ಕನಕದಾಸ ಯುವಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಯುವಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಬೇಕು. ಸಂಘನಾತ್ಮಕ ಮನೋಭಾವನೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಣದ ಜೊತೆಗೆ ಶಾರೀರಿಕವಾಗಿ ಸದೃಢ ಹೊಂದಬೇಕು ಮತ್ತು ಸ್ವಚ್ಛ ಮತ್ತು ಸುಂದರವಾದ ಪರಿಸರ ನಿರ್ಮಾಣ ಮಾಡುವ ಜವಾಬ್ದಾರಿ ಯುವಕರ ಮೇಲಿದೆ. ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತುಕೊಟ್ಟು ಜೀವನ ಸುಂದರವಾಗಿ ರೂಪಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಮಾರುತಿ ಜಡೆನ್ನವರ, ರಾಯಪ್ಪ ಬಂಡಾರಿ, ಶಿವರಾಯಿ ಹುಲಮನಿ, ಗದಿಗೆಪ್ಪ ಕರಿಗಾರ, ಅಪ್ಪಣ್ಣಾ ಹಳದೋಡಿ ಹಾಗೂ ಜೆಸಿಐ ಸಂಸ್ಥೆಯ ಅಧ್ಯಕ್ಷ ರಜನಿಕಾಂತ ಮಾಳೊದೆ, ರಾಮ ಪೌಂಡೇಶನ್ ಅಧ್ಯಕ್ಷ ವಿಷ್ಣು ಲಾತೂರ, ಎಲ್‍ಐಸಿಯ ಮಲ್ಲಪ್ಪ ಮದಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಬಡವಿದ್ಯಾರ್ಥಿಗಳಿಗೆ ನೋಟಬುಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅರವಿಂದ ದಳವಾಯಿ, ಅನಿಲ ದಳವಾಯಿ, ನಗರಸಭೆ ಪೌರಾಯುಕ್ತ ವಿ.ಎಸ್.ತಡಸಲೂರ, ಯುವಕ ಸಂಘದ ಅಧ್ಯಕ್ಷ ಚೂನಪ್ಪ ಹಟ್ಟಿ, ಪದಾಧಿಕಾರಿಗಳಾದ ಮಾರುತಿ ತುರಾಯಿದಾರ, ಆನಂದ ಸನದಿ, ಸಂತೋಷ ಕಟ್ಟಿಕಾರ, ಅನಿಲ ತುರಾಯಿದಾರ, ಮುತ್ತು ವಗ್ಗರ,ರಾಜು ಓಬಣ್ಣಗೋಳ, ರಾಘವೇಂದ್ರ ಕಲಾಲ, ಶಂಕರ ಮನ್ನವಡ್ಡರ,ಮಹಾಂತೇಶ ಕರಿಗಾರ ಸೇರಿದಂತೆ ಇತರರು ಇದ್ದರು.