RNI NO. KARKAN/2006/27779|Friday, November 22, 2024
You are here: Home » breaking news » ಖಾನಾಪುರ : ಶುರುವಾಯ್ತು 2018ರ ಚುಣಾವಣೆಯ ಕಾಂಗ್ರೇಸ ತಾಲೀಮು

ಖಾನಾಪುರ : ಶುರುವಾಯ್ತು 2018ರ ಚುಣಾವಣೆಯ ಕಾಂಗ್ರೇಸ ತಾಲೀಮು 

ಖಾನಾಪುರದಲ್ಲಿ ಶುರುವಾಯ್ತು 2018ರ ಚುಣಾವಣೆಯ ಕಾಂಗ್ರೇಸ ತಾಲೀಮು

ಖಾನಾಪುರ ಅ 12: 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೇಸ ಸರಕಾರವನ್ನು ಅಧಿಕಾರಕ್ಕೆ ತರುವುದೆ ನಮ್ಮ ಮೂಲ ಉದ್ದೇಶವಾಗಿದ್ದು, ಕಾರ್ಯಕರ್ತರು ಪಕ್ಷವನ್ನು ಬಲಪಡಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ 2018ರ ಚುಣಾವಣೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ವಿಕ್ಷಕರಾದ ಗೋಪಾಲ ನಾಯಿಕ ಮಾತನಾಡಿದರು.

ತಾಲೂಕಿನ ಲಿಂಗನಮಠ ಗ್ರಾಮದ ಚೆನ್ನಬಸವೇಶ್ವರ ದೇವಸ್ಥಾನದ, ಕಕ್ಕೇರಿಯ ಬೀಷ್ಟಾದೇವಿ ದೇವಸ್ಥಾನ, ನಂದಗಡ ಗ್ರಾಮ, ಹಲಶಿ ಗ್ರಾಮ ಹಾಗೂ ನಾಗರಗಾಳಿ ಗ್ರಾಮಗಳಲ್ಲಿ ಆಯೋಜಿಸಿದ ಬೂತ್ ಮಟ್ಟದ ಕಾಂಗ್ರೇಸ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

2008ರ ವಿಧಾನಸಭಾ ಚುನಾವಣೆಯ ಮುಂಚಿತವಾಗಿ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಕಮೀಟಿಗಳನ್ನು ರಚನೆ ಮಾಡಿ, ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುವುದು. ಜೋತೆಗೆ ದಿನನಿತ್ಯ ಕಾರ್ಯಕರ್ತರ ಆಗುಹೋಗುಗಳನ್ನು ಗಮನಿಸಿ ಸಹಕರಿಸಲಾಗುವುದು ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿಯೇ ಮನೆ ಮಾಡುತ್ತೆನೆ ಹಾಗೂ ಕಾರ್ಯಕರ್ತರ ಒಗ್ಗೂಡಿಸಿಕೊಂಡು ಪಕ್ಷದ ಬಲಾಡ್ಯ ಸೈನ್ಯವನ್ನು ನಿರ್ಮಿಸಲಾಗುವುದು. ಇದರ ಜೋತೆಗೆ ತಾಲೂಕಿನ ಕಾರ್ಯಕರ್ತರಲ್ಲಿ ಮತ್ತು ನಾಯಕರಲ್ಲಿ ವಿನಂತಿ ಏನೆಂದರೆ ನಾನೂ ತಾಲುಕಿನಾದ್ಯಂತ ಸಂಚರಿಸಿ ಪ್ರತಿ ಬೂತ ಮಟ್ಟದ ಸಭೆಗಳನ್ನು ನಡೆಸಿ ಯಾರೂ ಪಕ್ಷದ ಸಲುವಾಗಿ ದುಡಿದಿದ್ದಾರೆ ಅಂತಹವರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಪಕ್ಷದ ಹೈಕಮಾಂಡಗೆ ಸಲ್ಲಿಸುತ್ತೆನೆ. ನಂತರ ಹೈಕಮಾಂಡ ನಿರ್ಮಿಸುತ್ತೆ ಯಾರಿಗೆ ಟಿಕೆಟ್ ನೀಡಬೇಕೆಂದು ಅದಗೋಸ್ಕರ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಪಕ್ಷದ ಟಿಕೆಟ್ ಯಾರಿಗೂ ಸಿಕ್ಕರೂ ಈ ಬಾರಿ ತಾಲೂಕಿನ ಕಾಂಗ್ರೇಸ ಧ್ವಜವನ್ನು ಹಾರಿಸೋಣ ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ, ಕಾಂಗ್ರೇಸ ಮುಖಂಡ ನಾಶೀರ ಬಾಗವಾನ, ಬ್ಲಾಕ್ ಕಾಂಗ್ರೇಸ ಅಧ್ಯಕ್ಷರಾದ ಸಿ.ಬಿ.ಅಂಬೋಜಿ, ಅಶೋಕ ಅಂಗಡಿ, ಮುಖಂಡರುಗಳಾದ ಪಾಂಡುರಂಗ ಮಿಟಗಾರ, ಸಂತೋಷ ಹಂಜಿ, ಚಂಬನಗೌಡ ಪಾಟೀಲ, ಬಸವರಾಜ ಮುಗಳಿಹಾಳ, ಬಾಬು ಬಿಜಾಪುರ, ಸುಭಾನಿ ಗೌಂಡಿ, ರುದ್ರಗೌಡ ಪಾಟೀಲ, ಅಮಾನುಲ್ಲಾ ದಲಾಲ, ಮಧು ಕೊಳೆಕರ, ನಾಶೀರ ಬಾಗವಾನ ಸ್ವಾಭಿಮಾನಿ ಬಳಗದ ಸದಸ್ಯರು ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಾದ ಸಿ.ಕೆ.ಪಾಟೀಲ, ಮಹಾಂತೇಶ ಸಂಗೋಳ್ಳಿ, ಬಾಬು ಅಂಬಡಗಟ್ಟಿ, ಮಹಾಂತೇಶ ಕಿತ್ತುರ, ಸುಭಾನಿ ನದಾಫ, ಹಳ್ಳೂರಪ್ಪಾ ಬಾಗೇವಾಡಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: