ಗೋಕಾಕ:ಶ್ರೀ ರೇಣುಕಾದೇವಿ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ
ಶ್ರೀ ರೇಣುಕಾದೇವಿ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 5 :
ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರೇಣುಕಾದೇವಿ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, ದಾನಿಗಳಿಗೆ ಸತ್ಕಾರ ಕಾರ್ಯಕ್ರಮ ಗುರುವಾರ ಫೆ.6 ಮತ್ತು ಶುಕ್ರವಾರ ಫೆ.7 ರಂದು ನಡೆಯಲಿದೆ.
ಗುರುವಾರ ಫೆ.6 ರಂದು ಸಾಯಂಕಾಲ 4 ಗಂಟೆಗೆ ಸ್ಥಳೀಯ ಅಡವಿಸಿದ್ದೇಶ್ವರ ಗುಡಿಯಿಂದ ಶ್ರೀ ರೇಣುಕಾದೇವಿ ನೂತನ ಮೂರ್ತಿಯನ್ನು ಪುರದೇವರ ಪಲ್ಲಕ್ಕಿ, ಕುಂಭಮೇಳ, ಆರತಿ ಹಾಗೂ ಸಕಲ ವಾದ್ಯಮೇಳದೊಂದಿಗೆ ಶ್ರೀ ರೇಣುಕಾದೇವಿ ನೂತನ ಮಂದಿರ ತನಕ ಭವ್ಯ ಮೆರವಣಿಗೆ ಬಳಿಕ ಮಹಾಪ್ರಸಾದ, ರಾತ್ರಿ 10ಗಂಟೆಗೆ ರನ್ನ ಬೆಳಗಲಿ ಮಾಧವಾನಂದ ಗಾಯನ ಸಂಘದವರಿಂದ ಹರದೇಶಿ, ನಾವಲಗಿ ರೇಣುಕಾ ಗಾಯನ ಸಂಘದವರಿಂದ ನಾಗೇಶಿ ಚೌಡಕಿ ಪದಗಳ ಗಾಯನ ನಡೆಯಲಿದೆ.
ಶುಕ್ರವಾರ ಫೆ.7ರಂದು ಪ್ರಾತ:ಕಾಲ ಬ್ರಾಹ್ಮೀ ಮೂಹೂರ್ತದಲ್ಲಿ ಶ್ರೀ ಪರಮಪೂಜ್ಯರ ಸಮ್ಮುಖದಲ್ಲಿ ಶ್ರೀ ರೇಣುಕಾದೇವಿ ನೂತನ ಮಂದಿರದಲ್ಲಿ ಚಂಡಿಕಾ ಹೋಮದೊಂದಿಗೆ ಶ್ರೀ ದೇವಿಯ ಪ್ರಾಣಪ್ರತಿಷ್ಠಾಪನೆ ನಂತರ ಮುಂಜಾನೆ 9ಗಂಟೆಗೆ ಧರ್ಮಸಭೆ, ಮಹಾಪ್ರಸಾದ ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದ್ದು, ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ದಿವ್ಯ ಸಾನಿಧ್ಯ, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ನೇತೃತ್ವ, ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಸಮಿತಿ ಅಧ್ಯಕ್ಷ ಮುತ್ತೆಪ್ಪ ಮಾಕಾಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ, ಕೆಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಉಪಾಧ್ಯಕ್ಷೆ ಶೋಭಾ ಪಣದಿ, ಗೋಕಾಕ ಎಪಿಎಮ್‍ಸಿ ನಿರ್ದೇಶಕ ಬಸವರಾಜ ಸಾಯನ್ನವರ, ಲಕ್ಷ್ಮಣ ಚಿನ್ನಯ್ಯನವರ ಮುಖ್ಯ ಅತಿಥಿಗಳಾಗಿ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಮುತ್ತೆಪ್ಪ ವಡೇರ, ಹನುಮಂತ ವಡೇರ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.