ಗೋಕಾಕ:ವಿದ್ಯಾರ್ಥಿನೀಯರಿಗೆ ಲೈಂಗಿಕ ಪ್ರಚೋದನೆ ಶಿಕ್ಷಕ ಅಮಾನತು : ಗೋಕಾಕ ಶೈಕ್ಷಣಿಕ ವಲಯದಲ್ಲಿ ಘಟನೆ
ವಿದ್ಯಾರ್ಥಿನೀಯರಿಗೆ ಲೈಂಗಿಕ ಪ್ರಚೋದನೆ ಶಿಕ್ಷಕ ಅಮಾನತು : ಗೋಕಾಕ ಶೈಕ್ಷಣಿಕ ವಲಯದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 8 :
6 ತರಗತಿ ವಿದ್ಯಾರ್ಥಿಯರಿಗೆ ಲೈಂಗಿಕ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯ ಮೇಲೆ ಪ್ರಕರಣ ದಾಖಲಿಸಿ ಅಮಾನತು ಗೋಳಿಸಿದ ಘಟನೆ ಜರುಗಿದೆ
ಗೋಕಾಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಆರ್.ಸರ್ಕಲ್ ಘಟಪ್ರಭಾದ ಮುಖ್ಯೋಪಾಧ್ಯಾಯ ಮಲಸಿದ್ದ ಹರಿಜನ ಅಮಾನತಾದ ಶಿಕ್ಷಕನಾಗಿದ್ದು , ವಿದ್ಯಾರ್ಥಿನೀಯರ ಪಾಲಕರು ನೀಡಿದ ದೂರಿನ್ವಯ ಘಟಪ್ರಭಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪ್ರಥಮ ವರ್ತಮಾನ ವರದಿಯನ್ನು ಆಧರಿಸಿ ಗೋಕಾಕ ಕ್ಷೇತ್ರದ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮತ್ತು ಡಿಡಿಪಿಐ ಗಜಾನನ ಮನ್ನಿಕೇರಿ ಅವರು ಮುಖ್ಯೋಪಾಧ್ಯಾಯ ಮಲ್ಲಸಿದ್ದ ಹರಿಜನ ಎಂಬಾತನನ್ನು ಅಮಾನತು ಗೋಳಿಸಿ ಆದೇಶಿಸಿದ್ದಾರೆ
ಪ್ರಕಣದ ಹಿನ್ನೆಲೆ : ಘಟಪ್ರಭಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಸಿದ್ದ ಹರಿಜನ ಇತನು 6 ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿ ನೀಯರೊಂದಿಗೆ ಗಲ್ಲಕ್ಕೆ ಗಲ್ಲ ಹಚ್ಚಿ ಪೋಟೋ ತಗೆಸಿಕೊಂಡು ವಿದ್ಯಾರ್ಥಿನೀಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು , ವಿದ್ಯಾರ್ಥಿನೀಯರು ತಡವಾಗಿ ಪಾಲಕರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪಾಲಕರು ಘಟಪ್ರಭಾ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ