ಗೋಕಾಕ: ಉಪನ್ಯಾಸಕ ಚಾಳೇಕರ ಅಮಾನತು ಪ್ರರಕರಣ : ಪಿ.ಯು ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ
ಉಪನ್ಯಾಸಕ ಚಾಳೇಕರ ಅಮಾನತು ಪ್ರರಕರಣ : ಪಿ.ಯು ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ
ಗೋಕಾಕ ಅ 12: ನಗರದ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಉಪನ್ಯಾಸ ಎಸ.ಎಸ. ಚಾಳೇಕರ ಅಮಾನತು ಆಗಿರುವುದನ್ನು ಖಂಡಿಸಿ ಪಿಯು ವಿಧ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಯಿಸಿದ ಘಟನೆ ಇಂದು ಮುಂಜಾನೆ ನಗರದಲ್ಲಿ ನಡೆದಿದೆ
2015ರಲ್ಲಿ ವಯಕ್ತಿಕ ಜಗಳದ ಹಿನ್ನೆಲೆಯಲ್ಲಿ ಪ್ರಾಚಾರ್ಯ ಎ.ವಾಯ್ ಹಾದಿಮನಿ ಅವರು ಉಪನ್ಯಾಸಕ ಎಸ.ಎಸ ಚಾಳೇಕರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪ ಹೊರೆಸಿ ಪೊಲೀಸ ಠಾಣೆಗೆ ಮತ್ತು ಎಸ್.ಟಿ ಆಯೋಗಕ್ಕೆ ದೂರು ನೀಡಿದ್ದರು ದೂರನ್ನು ಪರಿಶೀಲಿಸಿದ ಆಯೋಗ ಮೋನ್ನೆಯಷ್ಟೇ ಉಪನ್ಯಾಸಕ ಎಸ್.ಎಸ್. ಚಾಳೇಕರ ವಿರುದ್ಧ ಕ್ರಮ ಜರುಗಿಸಿ ವರದಿ ನಿಡುವಂತೆ ಪಿ.ಯು ಮಂಡಳಿಗೆ ಆದೇಶಿಸಿತು ಅದರ ಹಿನ್ನೆಲೆಯಲ್ಲಿ ನಿನ್ನೆ ಸಾಯಂಕಾಲ ಪಿ.ಯು ಮಂಡಳಿ ಆಯುಕ್ತರಾದ ಶ್ರೀಮತಿ ಶೀಖಾ ಅವರು ಪ್ರಕರಣ ಇತ್ಯರ್ಥವಾಗುವವರೆಗೆ ಉಪನ್ಯಾಸಕ ಚಾಳೇಕರ ಅವರನ್ನು ಅಮಾನತಿನಲ್ಲಿ ಇಡಬೇಕೆಂದು ಆದೇಶ ಹೊರಡಿಸಿದ್ದಾರೆ
ವಿಷಯ ತಿಳಿದ ವಿಧ್ಯಾರ್ಥಿಗಳು ಇಂದು ಕಾಲೇಜ ಆವರಣದಲ್ಲಿ ಧಿಡೀರ್ ಪ್ರತಿಭಟನೆ ನಡೆಸಿ ಉಪನ್ಯಾಸಕ ಚಾಳೇಕರ ಅಮಾನತು ಆದೇಶವನ್ನು ಹಿಂಪಡೆಯ ಬೇಕೆಂದು ಆಗ್ರಹಿ ಸುಮಾರು ಎರೆಡು ತಾಸಿಗೂ ಹೆಚ್ಚುಕಾಲ ಪ್ರತಿಭಟನೆ ನಡೆಯಿಸಿದರು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆದರು