ಗೋಕಾಕ:ಸಚಿವ ರಮೇಶ ಅಭಿಮಾನಿ ಬಳಗದಿಂದ ರೋಗಿಗಳಿಗೆ ಸೇಬು ಹಣ್ಣು ವಿತರಣೆ
ಸಚಿವ ರಮೇಶ ಅಭಿಮಾನಿ ಬಳಗದಿಂದ ರೋಗಿಗಳಿಗೆ ಸೇಬು ಹಣ್ಣು ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :
ನೂತನ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅಭಿಮಾನಿಗಳು ಬಸವೇಶ್ವರ ವೃತ್ತದಲ್ಲಿ 5ಕ್ವಿಂಟಾಲ ಸೇಬಿನ ಹಾರ ಹಾಕಿ ನಗರಕ್ಕೆ ಬರಮಾಡಿಕೊಂಡ ಸೇಬಿನ ಹಣ್ಣನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳು ರೋಗಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ವೈದ್ಯ ಡಾ. ಆರ್ ಎಸ್ ಬೆಣಚಿನಮರಡಿ, ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದ ಭೀಮಶಿ ಭರಮಣ್ಣವರ, ಲಕ್ಷ್ಮಣ ಖಡಕಭಾಂವಿ, ಮುತ್ತುರಾಜ ಜಮಖಂಡಿ, ರಾಜು ಮಾಳಿ, ಸುಹಾಸ ಘಡಕರಿ, ಪ್ರದೀಪ ನಾಗನೂರ, ಯಲ್ಲಪ್ಪ ಗಸ್ತಿ, ಸತೀಶ ಮನ್ನಿಕೇರಿ, ಚೇತನ ಖಡಕಭಾಂವಿ, ತಾಹೀರ ಪೀರಜಾದೆ, ನಿತ್ಯಾನಂದ ಅಮ್ಮಿನಭಾಂವಿ, ಮಲ್ಲೇಶ ನಾಯಕ ಪ್ರವೀಣ ಜಿರಗ್ಯಾಳ ಸೇರಿದಂತೆ ಅನೇಕರು ಇದ್ದರು.