RNI NO. KARKAN/2006/27779|Thursday, November 7, 2024
You are here: Home » breaking news » ಮೂಡಲಗಿ:ಮಕ್ಕಳಿಗೆ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ : ಸುಧೀರ

ಮೂಡಲಗಿ:ಮಕ್ಕಳಿಗೆ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ : ಸುಧೀರ 

ಮಕ್ಕಳಿಗೆ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ : ಸುಧೀರ

 

 

ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 11 :

 

 

ವಿದ್ಯಾರ್ಥಿಗಳಿಗೆ ಸಂಸ್ಕಾರ ಸಿಗಲಿಲ್ಲವೆಂದರೆ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಮಕ್ಕಳನ್ನು ಪೋಷಕರು ಚೆನ್ನಾಗಿ ಬೆಳೆಸಿ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ ಎಂದು ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಹೇಳಿದರು.
ಅವರು ಸಮೀಪದ ಪಟಗುಂದಿ ಗ್ರಾಮದ ಶ್ರೀ ಶಾಂತಿಸಾಗರ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಿಕೊಳ್ಳಲು ಶಾಲಾ ವೇದಿಕೆಗಳು ಅನುಕೂಲವಾಗುತ್ತದೆ. ಇತ್ತಿಚಿಗೆ ವಿದ್ಯಾರ್ಥಿಗಳು ಮೊಬೈಲ್, ಟಿ.ವಿ ವಿಕ್ಷಣೆಯಿಂದ ಕಲಿಕೆಯ ಕಡೆಗೆ ಗಮನಹರಿಸುತ್ತಿಲ್ಲ ಇವೆಲ್ಲವನ್ನು ತ್ಯಜಿಸಿ ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನ ವೃದ್ದಿಸಿಕೊಳ್ಳಬೇಕು. ಶಾಂತಿ ಸಾಗರ ಶಾಲೆಯೂ ಇತ್ತಿಚಿಗೆ ಸಂಭವಿಸಿದ ನೆರೆ ಪ್ರವಾಹ ಸಂದರ್ಭದಲ್ಲಿ ನೆರೆ ಸಂತ್ರಸ್ಥರಿಗೆ ಆಹಾರ, ಬಟ್ಟೆ, ಹಾಸಿಗೆ ಇನ್ನಿತರ ಅವಶ್ಯಕ ವಸ್ತುಗಳನ್ನು ನೀಡುವುದರ ಜೊತೆಗೆ ನೆರೆ ಸಂತ್ರಸ್ತರಿಗೆ ಸ್ಥಳವಕಾಶವನ್ನು ನೀಡಿ ಮಾನವೀಯತೆ ಮೆರೆದ ಶಿಕ್ಷಣ ಸಂಸ್ಥೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರೇಶ ಹುಕ್ಕೇರಿ ಮಾತನಾಡಿ, ಈ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಆಚಾರ, ವಿಚಾರ ಮತ್ತು ಸಂಸ್ಸøತಿಯ ಜೊತೆಗೆ ಗ್ರಾಮೀಣ ಮತ್ತು ಕನ್ನಡ ಮಾಧ್ಯಮಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಇಲ್ಲಿ ಕಲಿತ ಮಕ್ಕಳು ಅತಿ ಹೆಚ್ಚು ಸರ್ಕಾರಿ ನೌಕರಿ ಪಡೆದ ಹೆಗ್ಗಳಿಕೆ ನಮ್ಮ ಶಾಲೆಗಿದೆ ಎಂದರು.
ಸಾನಿಧ್ಯವಹಿಸಿದ್ದ ಪೂಜ್ಯ ಕ್ಷುಲ್ಲಿಕಾ ರತ್ನ 105 ಕಾಂಚನಶ್ರೀ ಮಾತಾಜಿ ಆಶೀರ್ವಚನ ನೀಡಿ, ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಶಿಕ್ಷಣ ಕಲಿತರೇ ಜ್ಞಾನವಂತರಾಗಲು ಸಾಧ್ಯವಿದೆ. ಶಿಕ್ಷಣದ ಜೊತೆ ಆರೋಗ್ಯ, ಪರಿಸರ ಕಾಳಜಿಯನ್ನು ಅಳವಡಿಸಿಕೊಳ್ಳಿ. ತಂದೆ ತಾಯಿ ಗುರು ಹಿರಿಯರನ್ನು ಗೌರವದಿಂದ ಕಾಣಿರಿ ಎಂದರು.
ವೇದಿಕೆಯಲ್ಲಿ ದತ್ತಾತ್ರೇಯ ಕುಲಕರ್ಣಿ, ಸುರೇಶ ಕಮತೆ, ಶ್ರೀಕಾಂತ ಕೊಟಬಾಗಿ, ಮಹಾವೀರ ಶೆಟ್ಟಿ, ಸದಾಶಿವ ಮಂಗಿ, ಅಶೋಕ ಚಿಂಚಣಿ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಭಗವಂತ ಉಪ್ಪಾರ, ರಾವಸಾಬಗೌಡ ಪಾಟೀಲ, ಚನಗೌಡ ಪಾಟೀಲ, ಗಿರಿಗೌಡ ಪಾಟೀಲ, ಎಚ್.ವಿ. ನಾಯ್ಕ, ಮಾಣಿಕ ಬೋಳಿ, ತವನಪ್ಪ ಬೋಳಿ, ನೇಮು ಜರಾಳೆ, ವಿ.ಎಸ್ ಚೌಗುಲ, ಸುನಂದಮ್ಮ ಪಾಟೀಲ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.

Related posts: