ಗೋಕಾಕ:ವಿಶ್ವಕರ್ಮ ಸಮಾಜ ಸಂಘಟನೆಗೆ ಒಂದಾಗಿ ಶ್ರಮಿಸಿ- ಶಂಕರ ಸುತಾರ
ವಿಶ್ವಕರ್ಮ ಸಮಾಜ ಸಂಘಟನೆಗೆ ಒಂದಾಗಿ ಶ್ರಮಿಸಿ- ಶಂಕರ ಸುತಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 11 :
ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಸಮಾಜ ಸಂಘಟನೆಗೆ ಹೆಚ್ಚಿನ ಒಲುವು ತೋರುವಂತೆ ವಿಶ್ವಕರ್ಮ ಸಮಾಜದ ಕಲ್ಯಾಣ ಮನುಮಯ ಯುವಕ ಸಂಘದ ಅಧ್ಯಕ್ಷ ಶಂಕರ(ಪ್ರಕಾಶ) ಸುತಾರ ಹೇಳಿದರು.
ನಗರದಲ್ಲಿ ವಿಶ್ವಕರ್ಮ ಸಮಾಜದ ಕಲ್ಯಾಣ ಮನುಮಯ ಸಂಸ್ಥೆಯಿಂದ ಜರುಗಿದ ಶ್ರೀ ವಿಶ್ವಕರ್ಮ ಪರಮೇಶ್ವರ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಎಲ್ಲರೂ ಒಂದಾಗಿ ಒಗ್ಗಟ್ಟಾದಾಗ ಮಾತ್ರ ಸಮಾಜವು ಶ್ರೇಯೋಭಿವೃದ್ದಿ ಹೊಂದಲು ಸಾಧ್ಯವೆಂದು ಹೇಳಿದರು.
ಸಮಾಜ ಸಂಘಟನೆಗೆ ಯುವಕರು ಉತ್ಸಾಹದಿಂದ ಕಾರ್ಯನಿರ್ವಹಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರು ಮುಂದಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಇದೇ ಸಂದರ್ಭದಲ್ಲಿ ಸುತಾರ ಅವರು ಸಮಾಜ ಬಾಂಧವರಲ್ಲಿ ಕೋರಿದರು.
ಭರತನಾಟ್ಯ ರಾಜ್ಯ ಪ್ರಶಸ್ತಿ ವಿಜೇತ ಶ್ರೀಶೈಲ ಕಮ್ಮಾರ ಹಾಗೂ ಜೀ ಕನ್ನಡ ವಾಹಿನಿಯ ಸರಿಗಮಪ ವಿಜೇತ ಓಂಕಾರ ಪತ್ತಾರ ಅವರನ್ನು ಸಂಸ್ಥೆಯಿಂದ ಸತ್ಕರಿಸಲಾಯಿತು.
ಅತಿಥಿಯಾಗಿ ಎನ್‍ಎಸ್‍ಎಫ್ ಅತಿಥಿಗೃಹದ ನಿಂಗಪ್ಪ ಕುರಬೇಟ(ಮೇಲ್ಮಟ್ಟಿ) ಆಗಮಿಸಿದ್ದರು. ರಾಮಚಂದ್ರ ಜಾಂಬೋಟಿ, ಅಡಿವೆಪ್ಪ ಬಡಿಗೇರ, ಯುವಕ ಸಂಘದ ಉಪಾಧ್ಯಕ್ಷ ಆನಂದ ಜಾಂಬೋಟಿ,ಕೃಷ್ಣಾ ಬಡಿಗೇರ, ಚಂದ್ರಕಾಂತ ಕಮ್ಮಾರ, ದೇವಪ್ಪ ಬಡಿಗೇರ, ಲಕ್ಕಪ್ಪ ಬಡಿಗೇರ, ಪ್ರಕಾಶ ಕಂಬಾರ, ಬಾಬು ಕಮ್ಮಾರ, ಅರ್ಜುನ ಬಡಿಗೇರ, ಶಾಂತವ್ವ ಸುತಾರ, ಸ್ತ್ರೀ ಶಕ್ತಿ ಕಾಳಿಕಾ ಮಹಿಳಾ ಮಂಡಳದ ಪದಾಧಿಕಾರಿಗಳು ಸಮಾಜದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.