RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ 78 ನೇಯ ವಾರ್ಷಿಕೋತ್ಸವ ಸಪ್ತಾಹ ಸಮಾರಂಭ

ಗೋಕಾಕ:ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ 78 ನೇಯ ವಾರ್ಷಿಕೋತ್ಸವ ಸಪ್ತಾಹ ಸಮಾರಂಭ 

ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ 78 ನೇಯ ವಾರ್ಷಿಕೋತ್ಸವ ಸಪ್ತಾಹ ಸಮಾರಂಭ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 15 :
ತಾಲೂಕಿನ ಶಿಂದಿಕುರಬೇಟ ಗ್ರಾಮದ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ 78 ನೇಯ ವಾರ್ಷಿಕೋತ್ಸವ ಸಪ್ತಾಹ ಸಮಾರಂಭವು ಫೆ.16 ಮತ್ತು ಫೆ. 17ರಂದು ಎರಡು ದಿನಗಳ ಕಾಲ ನಡೆಯಲಿದೆ.
ಫೆ.16ರಂದು ಮುಂಜಾನೆ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ ಗದ್ದುಗೆ ಅಭಿಷೇಕವನ್ನು ಶ್ರೀ ದುಂಡಯ್ಯ ಹಿರೇಮಠ ಇವರಿಂದ ಜರುಗಲಿದೆ. ಸಂಜೆ 7 ಗಂಟೆಗೆ ಹರಳಯ್ಯ ಸಮಾಜದ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಜರುಗಲಿದ್ದು ರಾತ್ರಿ 24 ಗಂಟೆಗಳ ಕಾಲ ಓಂಕಾರ ಮತ್ತು ಭಜನಾ ಕಾರ್ಯಕ್ರಮ ಜರುಗಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಸಾಮ್ರಾಟ ಅಶೋಕ ಗೌತಮ ಮುರಗೋಡ, ಗ್ರಾ.ಪಂ ಸದಸ್ಯ ಭೀಮಶಿ ಬಿರನಾಳಿ, ಯಮನವ್ವ ಸಾಂಗಲಿ, ಸಮಾಜದ ಹಿರಿಯರಾದ ಗಿರೀಶ ಸಾಂಗಲಿ, ಸುರೇಶ ಸಾಂಗಲಿ, ಶಿವಪುತ್ರ ಸಾಂಗಲಿ, ಬಸವರಾಜ ಕೊಡ್ಲ್ಯಾಳ, ಪುನ್ನಪ್ಪ ಸಾಂಗಲಿ, ಸುರೇಶ ದೇವಮಾನೆ, ಬಾಳು ದೇವಮಾನೆ, ದೇವೆಂದ್ರ ದೇವಮಾನೆ ಆಗಮಿಸುವರು.
ಫೆ.17ರಂದು ಮುಂಜಾನೆ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡ್ಕರರ ಭಾವಚಿತ್ರ ಭವ್ಯ ಮೆರವಣಿಗೆ ಹಾಗೂ ಕುಂಭಮೇಳವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದ್ದು ಮಧ್ಯಾಹ್ನ 12 ಗಂಟೆಗೆ ಪ್ರವಚನ ಕಾರ್ಯಕ್ರಮ ಜರುಗಲಿದ್ದು ದಿವ್ಯ ಸಾನಿಧ್ಯ ಝಾಂಗಟಿಹಾಳದ ಶ್ರೀ ಚಂದ್ರಶೇಖರ ಮಹಾಸ್ವಾಮಿಜಿ ವಹಿಸಲಿದ್ದು, ಸಾನಿಧ್ಯವನ್ನು ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು, ಘಟಪ್ರಭಾದ ಗುಬ್ಬಲಗುಡ್ಡ ಶ್ರೀ ಕೆಂಪಯ್ಯಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ಕೃಪಾನಂದ ಮಹಾಸ್ವಾಮಿಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಯಪ್ಪ ಮಾಡಲಗಿ, ದಯಾನಂದ ಬೆಳಗಾವಿ ಆಗಮಿಸುವರು.ನಂತರ ಮಹಾಪ್ರಸಾದ ಜರುಗಲಿದೆ ಎಂದು ಶ್ರೀ ಶಿವಶರಣ ಹರಳಯ್ಯನವರ ಸಮಾಜದ ಕಾರ್ಯದರ್ಶಿ ವಿಠ್ಠಲ ಕರೋಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: