RNI NO. KARKAN/2006/27779|Thursday, March 13, 2025
You are here: Home » breaking news » ಕೌಜಲಗಿ:ಮಹಾಂತಪ್ಪ-ಅನ್ನಪೂರ್ಣ ದಂಪತಿಗಳ ಆದರ್ಶ ಜೀವನ ನಡೆಸಿ ಸಮಾಜಕ್ಕೆ ಮಾದರಿಯ ಸತಿಪತಿಗಳಾಗಿದ್ದಾರೆ : ಬಸವರಾಜ ಹೊರಟ್ಟಿ

ಕೌಜಲಗಿ:ಮಹಾಂತಪ್ಪ-ಅನ್ನಪೂರ್ಣ ದಂಪತಿಗಳ ಆದರ್ಶ ಜೀವನ ನಡೆಸಿ ಸಮಾಜಕ್ಕೆ ಮಾದರಿಯ ಸತಿಪತಿಗಳಾಗಿದ್ದಾರೆ : ಬಸವರಾಜ ಹೊರಟ್ಟಿ 

ಮಹಾಂತಪ್ಪ-ಅನ್ನಪೂರ್ಣ ದಂಪತಿಗಳ ಆದರ್ಶ ಜೀವನ ನಡೆಸಿ ಸಮಾಜಕ್ಕೆ ಮಾದರಿಯ ಸತಿಪತಿಗಳಾಗಿದ್ದಾರೆ : ಬಸವರಾಜ ಹೊರಟ್ಟಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಫೆ 17 :

 

 

ಇಂದಿನ ಕಾಲದಲ್ಲಿ ದೀರ್ಘಾವಧಿ ದಾಂಪತ್ಯ ಜೀವನ ನಡೆಸುವುದೇ ಕಷ್ಟವಾಗಿದೆ. ಒಳಜಗಳ, ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳದೆ ಸತಿ-ಪತಿಗಳು ದೂರವಾಗುವ ಸಂದರ್ಭಗಳೇ ಹೆಚ್ಚಾಗಿವೆ. ಮಹಾಂತಪ್ಪ-ಅನ್ನಪೂರ್ಣ ದಂಪತಿಗಳ ಆದರ್ಶ ಜೀವನ ನಡೆಸಿ ಸಮಾಜಕ್ಕೆ ಮಾದರಿಯ ಸತಿಪತಿಗಳಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಿಸಿದರು.
ಸಮೀಪದ ಕುಲಗೋಡ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಅನ್ನಪೂರ್ಣ ಮಹಾಂತಪ್ಪ ಅಂಗಡಿ ದಂಪತಿಗಳ ಷಷ್ಠಬ್ದಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿರ್ಪುದು ಎಂಬ ಶರಣರ ವಾಣಿಯಂತೆ ಇಂದಿನ ಕಾಲದ ಯುವ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಬದುಕಬೇಕೆಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಬಿ.ಜಿ.ಗಡಾದ ಅಧ್ಯಕ್ಷತೆ ವಹಿಸಿದ್ದರು. ಸಾನಿಧ್ಯವನ್ನು ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಅನ್ನಪೂರ್ಣ-ರಾಚಪ್ಪ ದಂಪತಿಗಳನ್ನು ಗಣ್ಯರು, ಗ್ರಾಮಸ್ಥರು ಸತ್ಕರಿಸಿ ಅಭಿನಂದಿಸಿದರು. ಬಸವರಾಜ ಕೌಜಲಗಿ, ಬಸನಗೌಡ ಪಾಟೀಲ, ಸತೀಶ ಒಂಟಗೋಡಿ, ಶಿಕ್ಷಕ ಬಿ.ಪಿ.ಕೋಟಿ ನಿರೂಪಿಸಿ ವಂದಿಸಿದರು.

Related posts: