ಬೆಳಗಾವಿ:ಪ್ರಚೋದನಕಾರಿ ಭಾಷಣಕಾರ ಸಂಬಾಜೀ ಭಿಡೆ ಗೆ ಜಾಮೀನು ಮಂಜೂರು
ಪ್ರಚೋದನಕಾರಿ ಭಾಷಣಕಾರ ಸಂಬಾಜೀ ಭಿಡೆ ಗೆ ಜಾಮೀನು ಮಂಜೂರು
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಫೆ 19 :
ಪ್ರಚೋದನಕಾರಿ ಭಾಷಣಕಾರ ಹಾಗೂ ಶಿವ ಪ್ರತಿಷ್ಠಾನ ಮುಖ್ಯಸ್ಥ ಸಂಬಾಜೀ ಭಿಡೆ ಅವರಿಗೆ ಬೆಳಗಾವಿಯ 6ನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಸಂಭಾಜೀ, 2018 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿ ಸುತ್ತಮುತ್ತಲಿನ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಮರಾಠಿ ಭಾಷಿಕರು ಎಂಇಎಸ್ ಬೆಂಬಲಿಸುವಂತೆ ಸಂಬಾಜೀ ಪ್ರಚೋದನಕಾರಿ ಭಾಷಣ ಮಾಡಿದ್ದರು
ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಂಬಾಜೀ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಗೈರಾಗಿದ್ದ ಸಂಬಾಜೀ ವಿರುದ್ಧ ಬೆಳಗಾವಿಯ ಎರಡನೇ ಜೆಎಂಎಫ್ ನ್ಯಾಯಾಲಯ 15 ದಿನಗಳ ಹಿಂದೆ ಅರೆಸ್ಟ್ ವಾರಂಟ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಂಬಾಜೀ ಪರ ವಕೀಲ ಶ್ಯಾಮ್ ಸುಂದರ ಪತ್ತಾರ ಜಾಮೀನಿಗೆ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚೈತ್ರಾ ಕುಲಕರ್ಣಿ ಸಂಬಾಜೀಗೆ ಜಾಮೀನು ಮಂಜೂರು ಮಾಡಿದ್ದಾರೆ